ಸಿರಿಯಾದಲ್ಲಿ ಇರಾನ್‌ ಮೇಲೆ ಅಮೇರಿಕಾ ದಾಳಿ!

masthmagaa.com:

ಇಸ್ರೇಲ್‌-ಹಮಾಸ್‌ ಯುದ್ಧದಿಂದ ಈಗಾಗಲೇ ಮಿಡಲ್‌ ಈಸ್ಟ್‌ ಬೂದಿ ಮುಚ್ಚಿದ ಕೆಂಡದ ರೀತಿಯಿದೆ. ಇದ್ರ ನಡುವೆಯೇ ಸಿರಿಯಾದಲ್ಲಿ ಇರಾನ್‌ ಜಾಗಗಳ ಮೇಲೆ ದಾಳಿ ಮಾಡೋದನ್ನ ಅಮೆರಿಕ ಮುಂದುವರೆಸಿದೆ. ಅಮೆರಿಕ ಮಿಲಿಟರಿ ಪಡೆ, ಪೂರ್ವ ಸಿರಿಯಾದಲ್ಲಿ ಇರಾನ್‌ ಇಸ್ಲಾಮಿಕ್‌ ರೆವಲುಷನರಿ ಗಾರ್ಡ್‌ ಕೋರ್‌ ಬಳಸ್ತಿದ್ದ ಸ್ಥಳಗಳ ಮೇಲೆ ನಿರ್ದಿಷ್ಟ ದಾಳಿ ಮಾಡಿದೆ. ಅಂತ ಅಮೆರಿಕದ ಡಿಫೆನ್ಸ್‌ ಸೆಕ್ರಟರಿ ಲಾಯ್ಡ್‌ ಆಸ್ಟಿನ್‌ ಹೇಳಿದ್ದಾರೆ. ಪೂರ್ವ ಸಿರಿಯಾದ ಅಲ್ಬು ಕಮಲ್‌ ಮತ್ತು ಮಯಾದೀನ್‌ ನಗರಗಳಲ್ಲಿ ದಾಳಿ ಮಾಡಿದ್ದೇವೆ. ಅಂತಾ ತಿಳಿಸಿದರು. ಈ ಮೂಲಕ ಅಮೆರಿಕ ಕಳೆದ ಮೂರು ವಾರದಲ್ಲಿ ಈ ರೀತಿ ಮೂರನೇ ಬಾರಿಗೆ ದಾಳಿ ಮಾಡಿದಂತೆ ಆಗಿದೆ. ಸಿರಿಯಾ ಹಾಗೂ ಇರಾಕ್‌ನಲ್ಲಿನ ಅಮೇರಿಕಾದ ಸಿಬ್ಬಂದಿಗಳ ಮೇಲಿನ ಸತತ ದಾಳಿಗೆ ಪ್ರತಿಯಾಗಿ ಅಮೆರಿಕ ಈ ದಾಳಿಗಳನ್ನ ಮಾಡ್ತಿದೆ.

-masthmagaa.com

Contact Us for Advertisement

Leave a Reply