ಇಸ್ರೇಲ್‌ಗೆ ನೀಡೋ ಸಪೋರ್ಟ್‌ನ್ನ ಯಾರು ಅಲ್ಲಾಡ್ಸೋಕಾಗಲ್ಲ: ಅಮೆರಿಕ

masthmagaa.com:

ಇಸ್ರೇಲ್‌ಗೆ ಅಮೆರಿಕ ನೀಡ್ತಿರೋ ಸಪೋರ್ಟ್‌ನ್ನ ಯಾರು ಕೂಡ ಸ್ವಲ್ಪಾನೂ ಅಲ್ಲಾಡ್ಸೋಕೆ ಸಾಧ್ಯವಿಲ್ಲ ಅಂತ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಹೇಳಿದ್ದಾರೆ. ಇಸ್ರೇಲ್‌ನ ಜಾಯಿಂಟ್‌ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಆಸ್ಟಿನ್, ʻಹಮಾಸ್‌ ಜೊತೆಗಿನ ಯುದ್ಧದಲ್ಲಿ ಇಸ್ರೇಲ್‌ಗೆ ಸಪೋರ್ಟ್‌ ಮಾಡೋದನ್ನ ಅಮೆರಿಕ ಕಂಟಿನ್ಯೂ ಮಾಡುತ್ತೆ. ಆದ್ರೆ ಇಸ್ರೇಲ್‌ನ ಮಿತ್ರ ರಾಷ್ಟ್ರಗಳು ಗಾಜಾದ ನಾಗರಿಕರನ್ನ ರಕ್ಷಿಸೋಕೆ ಇನ್ನೂ ಹೆಚ್ಚು ಸಹಾಯ ಮಾಡೋಕೆ ಮುಂದೆ ಬರ್ಬೇಕುʼ ಅಂತ ಹೇಳಿದ್ದಾರೆ. ಜೊತೆಗೆ ʻಇಸ್ರೇಲ್‌ಗೆ ಅಮೆರಿಕ ನೀಡ್ತಿರೋ ಸಪೋರ್ಟ್‌ನ್ನ ಯಾರಿಂದ್ಲೂ ಶೇಕ್‌ ಮಾಡೋಕಾಗಲ್ಲ. ಇಸ್ರೇಲ್‌ ಒಂಟಿಯಲ್ಲʼ ಅಂತ ಹೇಳಿ ಇಸ್ರೇಲ್‌ಗೆ ಭಾರೀ ಬೆಂಬಲವನ್ನ ಸೂಚಿಸಿದ್ದಾರೆ. ಇನ್ನು ಹೆಚ್ಚಿನ ರಾಷ್ಟ್ರಗಳು ಇಸ್ರೇಲ್‌-ಹಮಾಸ್‌ ಯುದ್ಧ ನಿಲ್ಬೇಕು ಅಂತ ಕರೆ ನೀಡ್ತಿರೋ ಬೆನ್ನಲ್ಲೇ ಅಮೆರಿಕ ಮತ್ತೊಮ್ಮೆ ಈ ಹೇಳಿಕೆ ನೀಡಿ ತನ್ನ ನಿಲುವನ್ನ ಸ್ಪಷ್ಟ ಪಡಿಸಿದೆ.

-masthmagaa.com

Contact Us for Advertisement

Leave a Reply