ಅಮೆರಿಕ ಟ್ರೆಶರಿ ಸೆಕ್ರೆಟರಿಯ ಚೀನಾ ಭೇಟಿ ಸಕ್ಸಸ್!

masthmagaa.com:

ಚೀನಾ ಪ್ರವಾಸ ಕೈಗೊಂಡಿದ್ದ ಅಮೆರಿಕ ಟ್ರೆಶರಿ ಸೆಕ್ರೆಟರಿ ಜಾನೆಟ್‌ ಯೆಲೆನ್‌ ಅವ್ರು ಚೀನಾ ಅಧಿಕಾರಿಗಳ ಜೊತೆಗಿನ ಮಾತುಕತೆಯಿಂದ ಉಭಯ ದೇಶಗಳ ಸಂಬಂಧ ಗಟ್ಟಿಯಾಗಿದೆ ಅಂತ ಹೇಳಿದ್ದಾರೆ. ಎರಡೂ ದೇಶಗಳು ಅಭಿವೃದ್ಧಿ ಹೊಂದಲು ಜಾಗತಿಕವಾಗಿ ಸಾಕಷ್ಟು ಅವಕಾಶಗಳಿವೆ. ಜೊತೆಗೆ ಉಭಯ ದೇಶಗಳು ತಮ್ಮ ಸಂಬಂಧವನ್ನ ಮ್ಯಾನೇಜ್‌ ಮಾಡಲು ಜವಾಬ್ದಾರಿ ಹೊಂದಿದ್ದು, ಜಾಗತಿಕ ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲಿವೆ ಅಂತ ಹೇಳಿದ್ದಾರೆ. ಇದೇ ವೇಳೆ ಅಮೆರಿಕ ಹಾಗೂ ಚೀನಾ ನಡುವಿನ ಉದ್ವಿಗ್ನತೆ ನಡುವೆಯೂ ನಮ್ಮ ಸಂಬಂಧಗಳನ್ನ ಸರಿಪಡಿಸೋ ಪ್ರಯತ್ನದಲ್ಲಿ ನಾವು ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ ಅಂತ ಯೆಲೆನ್‌ ತಿಳಿಸಿದ್ದಾರೆ. ಅಷ್ಟೆ ಅಲ್ದೆ ಚೀನಾ ಮೇಲೆ ಅಮೆರಿಕ ಹೇರಿರುವ ಕೆಲವು ನಿರ್ಬಂಧಗಳನ್ನ ಆರ್ಥಿಕವಾಗಿ ಅಡ್ವಾಂಟೇಜ್‌ ಪಡೆಯಲು ಅಮೆರಿಕ ಬಳಸಿಲ್ಲ ಅಂತ ಯೆಲೆನ್‌ ಒತ್ತಿ ಹೇಳಿದ್ದಾರೆ. ಒಟ್ಟಾಗಿ ಹೇಳ್ಬೇಕು ಅಂದ್ರೆ ಚೀನಾ ಜೊತೆಗಿನ ತನ್ನ ಸಂಬಂಧವನ್ನ ಸರಿ ಮಾಡಿಕೊಳ್ಳಲು ಅಮೆರಿಕ ಎಲ್ಲಾ ರೀತಿಯಲ್ಲಿ ಟ್ರೈ ಮಾಡ್ತಿದ್ದು, ಚೀನಾಗೆ ಪಾಸಿಟಿವ್‌ ಅಪ್ರೋಚ್‌ ಮಾಡ್ತಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply