ಗಾಜಾ ಮೇಲೆ ಇಸ್ರೇಲ್‌ ದಾಳಿಯ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ!

masthmagaa.com:

ಗಾಜಾದ ರಫಾ ನಗರದಲ್ಲಿ ಇಸ್ರೇಲ್‌ ದಾಳಿ ಕುರಿತಾಗಿ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ʻರಫಾ ನಗರದ ಮೇಲೆ ಇಸ್ರೇಲ್ ಆದಷ್ಟು ಬೇಗನೇ ದಾಳಿ ಮಾಡೋದ್ರಲ್ಲಿದೆ. ಈ ದಾಳಿಯಿಂದ ರಫಾ ನಗರದಲ್ಲಿ ದೊಡ್ಡ ಮಟ್ಟದಲ್ಲಿ ದುರಂತ ಉಂಟಾಗಲಿದೆ. ಇಸ್ರೇಲ್‌ ಗಾಜಾ ಜನರಿಗೆ ನೆರವು ನೀಡೋಕೆ ಬರೋರಿಗೆ ಅನುವು ಮಾಡಿಕೊಟ್ಟಿದೆ ಅಂದ ಮಾತ್ರಕ್ಕೆ, ರಫಾ ಮೇಲೆ ದಾಳಿ ಮಾಡೋದು ಸರಿಯಲ್ಲʼ. ಹೀಗಂತ ವಿಶ್ವಸಂಸ್ಥೆಯ ನೆರವು ಮುಖ್ಯಸ್ಥರಾದ ಮಾರ್ಟಿನ್‌ ಗ್ರಿಫಿತ್ಸ್‌ ವಾರ್ನ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply