ತನ್ನ ಪ್ರಜೆಗಳಿಗೆ ವಾರ್ನ್‌ ಮಾಡಿದ ಅಮೆರಿಕ! ರಷ್ಯಾದಲ್ಲಿ ದಾಳಿ ಸಾಧ್ಯತೆ?

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ರಷ್ಯಾದಲ್ಲಿರೋ ತನ್ನ ಪ್ರಜೆಗಳಿಗೆ ವಾರ್ನಿಂಗ್‌ ನೀಡಿದೆ. ಉಗ್ರರಿಂದ ದಾಳಿ ನಡೆಯೋ ಸಾಧ್ಯತೆಯಿದೆ ಎಚ್ಚರವಾಗಿರಿ ಅಂತ ಹೇಳಿದೆ. ರಷ್ಯಾದಲ್ಲಿರೋ ಅಮೆರಿಕದ ರಾಯಭಾರ ಕಚೇರಿ ಈ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿದೆ . ʻರಷ್ಯಾದಲ್ಲಿ ದೊಡ್ಡ ದೊಡ್ಡ ಜನ ಸಂದಣಿ ಇರೋವಲ್ಲಿ ಉಗ್ರರು ದಾಳಿ ನಡೆಸೋ ಪ್ಲಾನ್‌ ಹಾಕೊಂಡಿದ್ದಾರೆ. ಸೋ ರಷ್ಯಾದಲ್ಲಿರೋ ಅಮೆರಿಕ ಪ್ರಜೆಗಳು ಹೆಚ್ಚು ಜನಸಂದಣಿಯನ್ನ ಮುಂದಿನ 48 ಗಂಟೆಗಳ ಕಾಲ ಅವಾಯ್ಡ್‌ ಮಾಡ್ಬೇಕುʼ. ಹೀಗಂತ ರಷ್ಯಾ ತನ್ನ ವೆಬ್‌ಸೈಟ್‌ನಲ್ಲಿ ತನ್ನ ಪ್ರಜೆಗಳಿಗೆ ಮೆಸೇಜ್‌ ನೀಡಿದೆ. ಅಂದ್ಹಾಗೆ ಈ ಹಿಂದೆ ಕೂಡ ರಷ್ಯಾ ಸಾಕಷ್ಟು ಭಾರಿ ಈ ರೀತಿ ವಾರ್ನ್‌ ಮಾಡಿತ್ತು.

-masthmagaa.com

Contact Us for Advertisement

Leave a Reply