ಸಿರಿಯಾದಲ್ಲಿ ಮಿಲಿಟರಿ ಆಪರೇಷನ್‌ ಮಾಡೋದಾಗಿ ಟರ್ಕಿ ಅನೌನ್ಸ್‌! ಅಮೆರಿಕ ವಾರ್ನ್‌!

masthmagaa.com:

ಪಶ್ಚಿಮ ಏಷ್ಯಾದಲ್ಲಿ ಮತ್ತೊಂದು ಸುತ್ತಿನ ರಕ್ತಪಾತವಾಗುವ ಎಲ್ಲ ಬೆಳವಣಿಗೆಗಳು ಕೂಡ ನಡೀತಿವೆ. ಇಷ್ಟು ದಿನದಿಂದ ಸಿರಿಯಾ ಬಂಡುಕೋರ ಕುರ್ದಿಶ್‌ ಪಡೆಗಳನ್ನ ಗುರಿಯಾಗಿಸಿಕೊಂಡು ಅವರ ಮೇಲಿನ ತನ್ನ ದಾಳಿಯನ್ನ ತಾತ್ಕಲಿಕವಾಗಿ ಸ್ಥಗಿತಗೊಳಿಸಿದ್ದ ಟರ್ಕಿ, ಈಗ ಮತ್ತೊಮ್ಮೆ ಮಿಲಿಟರಿ ಆಪರೇಷನ್‌ ಮಾಡೋದಾಗಿ ಅನೌನ್ಸ್‌ ಮಾಡಿದೆ. ಟರ್ಕಿ ಅಧ್ಯಕ್ಷ ರಿಸೀಪ್‌ ತಾಯಿಪ್‌ ಎರ್ಡೊಗನ್‌ ಈ ಬಗ್ಗೆ ಮಾತನಾಡಿದ್ದು ಆದಷ್ಟೂ ಬೇಗ ಉತ್ತರ ಸಿರಿಯಾದಲ್ಲಿ ಉಭಯ ದೇಶದ ನಡುವೆ 30KM ಸೇಫ್‌ ಜೋನ್‌ ನಿರ್ಮಾಣ ಮಾಡೋಕೆ ನಾವು ಯೋಜನೆ ಮಾಡಿದ್ದೀವಿ. ಇದಕ್ಕಾಗಿ ನಮ್ಮ ಸೇನೆ ರೆಡಿಯಾಗಿದೆ ಅಂತ ಹೇಳಿದ್ದಾರೆ. ಇನ್ನು ಟರ್ಕಿ ಈ ರೀತಿ ಘೋಷಣೆ ಮಾಡಿದ ಬೆನ್ನಲ್ಲೇ ಅಮೆರಿಕ ಪ್ರತಿಕ್ರಿಯಿಸಿದ್ದು ಮಿಲಿಟರಿ ಆಪರೇಷನ್‌ ಮಾಡದಂತೆ ವಾರ್ನ್‌ ಮಾಡಿದೆ. ಯದ್ದ ಪೀಡಿತ ಸಿರಿಯಾದಲ್ಲಿ ಈಗಾಗಲೇ ಮಾನವೀಯತೆ ಹಾಗೂ ರಾಜಕೀಯ ನೆರವು ಬೇಕಿದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಅದರ ಮೇಲೆ ದಾಳಿ ಮಾಡೋದನ್ನ ನಾವು ಖಂಡಿಸ್ತೇವೆ. ಇದರಿಂದ ಅಲ್ಲಿನ ನಾಗರಿಕರ ಮೇಲೆ ಪರಿಣಾಮ ಬೀರುತ್ತೆ ಅಂತ ಹೇಳಿದೆ. ಅಲ್ದೇ ನಾವು ಸಿರಿಯಾದ ಪ್ರಾದೇಶಿಕ ಸಮಗ್ರತೆಯ ಜೊತೆ ನಿಂತುಕೊಳ್ತೀವಿ. ಸಿರಿಯಾದಲ್ಲಿ ಮತ್ತಷ್ಟು ಸೇನಾ ಕಾರ್ಯಾಚರಣೆಗಳನ್ನ ಕೈಗೊಳ್ಳುವ ಅಗತ್ಯ ಇಲ್ಲ. ಅಲ್ಲಿ ಈಗಿರೋ ಕದನ ವಿರಾಮ ಮುಂದುವರೆಯ ಬೇಕು ಅಂತ ಅಸಮಾಧಾನ ಹೊರಹಾಕಿದೆ.

-masthmagaa.com

Contact Us for Advertisement

Leave a Reply