ಅಮೆರಿಕದ 3 ಕಮರ್ಷಿಯಲ್‌ ನೌಕೆ ಮೇಲೆ ದಾಳಿ ನಡೆಸಿದ ಹೌತಿ!

masthmagaa.com:

ಇಸ್ರೇಲ್‌-ಹಮಾಸ್‌ ಯುದ್ಧದ ನಡುವೆಯೇ ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೌತಿಗಳು ಅಮೆರಿಕದ 3 ಕಮರ್ಷಿಯಲ್‌ ನೌಕೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ವೇಳೆ ಅಮೆರಿಕ ಹೌತಿ ಬಂಡುಕೋರರ ಮೂರು ಡ್ರೋನ್‌ಗಳನ್ನ ಹೊಡೆದುರುಳಿಸಿದೆ. ಹೀಗಂತ ಅಮೆರಿಕದ ಪೆಂಟಗಾನ್‌ ಮಾಹಿತಿ ನೀಡಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಅಮೆರಿಕ ಸೇನೆ, ‘ಈ ರೀತಿಯ ದಾಳಿ ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ಕಡಲ ಭದ್ರತೆಗೆ ನೇರ ಅಪಾಯ ಸೂಚಿಸ್ತದೆ. ಜೊತೆಗೆ ಇಲ್ಲಿರೋ ಹಲವಾರು ಅಂತಾರಾಷ್ಟ್ರೀಯ ಸಿಬ್ಬಂದಿಯ ಪ್ರಾಣವನ್ನ ಅಪಾಯಕ್ಕೆ ನೂಕೋ ಕೆಲಸ ಮಾಡಿದ್ದಾರೆ. ಹೌತಿಗಳು ಲಾಂಚ್‌ ಮಾಡಿರೋ ಈ ದಾಳಿ ಹಿಂದೆ ಇರಾನ್‌ ಕೈವಾಡವಿದೆ ಅಂತ ನಮಗೆ ಚೆನ್ನಾಗಿ ಗೊತ್ತಿದೆ’ ಅಂತ ಆರೋಪಿಸಿದೆ. ಅಂದ್ಹಾಗೆ ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಸಂಬಂಧಿಸಿ ಇದುವರೆಗೆ ಇಲ್ಲಿ ನಡೆಸಲಾದ ದಾಳಿಯಲ್ಲಿ, ಇದು ಬಹಳ ತೀವ್ರವಾದದ್ದು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply