ಗಾಜಾವನ್ನ ಮತ್ತೆ ಹಮಾಸ್‌ ಕೈಗೆ ಕೊಡೋಕಾಗಲ್ಲ: ಕಮಲಾ ಹ್ಯಾರಿಸ್

masthmagaa.com:

ಹವಾಮಾನ ಬದಲಾವಣೆ, ವೈಪರಿತ್ಯಗಳ ಮಾತುಕತೆಗೆ ಸಾಕ್ಷಿಯಾಗ್ಬೇಕಿದ್ದ COP28 ಸಮಿಟ್‌, ಹೆಚ್ಚಾಗಿ ಇಸ್ರೇಲ್‌-ಹಮಾಸ್‌ ಯುದ್ಧದ ಮಾತುಕತೆಗೆ ವೇದಿಕೆ ಕಲ್ಪಿಸಿದೆ ಅನ್ನಿಸ್ತಿದೆ. ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮಾತನಾಡಿ ʻಗಾಜಾ ಹಾಗೂ ವೆಸ್ಟ್‌ಬ್ಯಾಂಕ್‌ನಲ್ಲಿರೋ ಪ್ಯಾಲಸ್ತೀನಿಯರನ್ನ ಬೇರೆ ಕಡೆಗೆ ಸ್ಥಳಾಂತರ ಮಾಡೋಕೆ ಅಮೆರಿಕ ಅವಕಾಶ ಕೊಡಲ್ಲʼ ಅಂದಿದ್ದಾರೆ. ʻಯುದ್ಧ ಮುಗಿದ್ಮೇಲೆ ಅಮೆರಿಕ ತನ್ನದೇ ಆದ ಉದ್ದೇಶಗಳನ್ನ ಮುಂದಿಡತ್ತೆ. ಅದ್ರಲ್ಲಿ ಗಾಜಾ ಹಾಗೂ ವೆಸ್ಟ್‌ಬ್ಯಾಂಕ್‌ನಲ್ಲಿರೋ ಪ್ಯಾಲಸ್ತೀನಿ ಜನರು ಒಂದಾಗಿ, ಒಂದು ಆಡಳಿತದ ಅಡಿಯಲ್ಲಿ ಇರ್ಬೇಕು ಅನ್ನೋದು ನಮ್ಮ ಆಶಯ. ಗಾಜಾವನ್ನ ಮತ್ತೆ ಹಮಾಸ್‌ ಕೈಗೆ ಕೊಡೋದು ಅಸಮರ್ಥನೀಯʼ ಅಂದಿದ್ದಾರೆ. ಅಂದ್ಹಾಗೆ ಅಧ್ಯಕ್ಷ ಬೈಡೆನ್‌ ಇಸ್ರೇಲ್-ಹಮಾಸ್‌ ಯುದ್ಧದ ಕಡೆಗೆ ಫೋಕಸ್‌ ಮಾಡ್ಬೇಕು ಅಂತ COP28 ಸಮ್ಮೇಳನಕ್ಕೆ ಉಪಾಧ್ಯಕ್ಷೆ ಕಮಲಾರನ್ನ ಕಳುಹಿಸಿದ್ದಾರೆ.

-masthmagaa.com

Contact Us for Advertisement

Leave a Reply