ಸೋವಿಯತ್‌ ಒಕ್ಕೂಟದ ರೀತಿಯಲ್ಲೇ ಅಮೆರಿಕ ಸಂಯುಕ್ತ ಸಂಸ್ಥಾನ ಇತಿಹಾಸ ಸೇರಲಿದೆ: ಹಮಾಸ್

masthmagaa.com

ಹಮಾಸ್‌-ಇಸ್ರೇಲ್‌ ನಡುವಿನ ಭೀಕರ ಸಂಘರ್ಷ ಕಂಟಿನ್ಯೂ ಆಗಿದೆ. ಇದೀಗ ಗಾಜಾ ಪಟ್ಟಿಯಲ್ಲಿನ ಆಸ್ಪತ್ರೆಗಳಲ್ಲಿದ್ದ ಪೇಷಂಟ್‌ಗಳನ್ನ ಸ್ಥಳಾಂತರ ಮಾಡ್ತಿದ್ದ ಆಂಬುಲೆನ್ಸ್‌ಗಳ ಮೇಲೆ ಇಸ್ರೇಲ್‌ ದಾಳಿ ಮಾಡಿದೆ. ಈ ದಾಳಿಯಲ್ಲಿ 15 ಜನ ಮೃತಪಟ್ಟು, 60 ಜನ ಗಾಯಗೊಂಡಿದ್ದಾರೆ ಅಂತ ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ. ಆದ್ರೆ ಇಸ್ರೇಲ್‌ ಮಾತ್ರ ಆ ಆಂಬುಲೆನ್ಸ್‌ಗಳು ಹಮಾಸ್‌ ಉಗ್ರರಿಗೆ ಸಂಬಂಧಿಸಿದ್ದು, ಅದ್ರಲ್ಲಿದ್ದ ಹಮಾಸ್‌ ಉಗ್ರರನ್ನ ಹತ್ಯೆ ಮಾಡಲಾಗಿದೆ ಅಂತ ಹೇಳಿದೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಹಮಾಸ್‌ ಅಧಿಕಾರಿ ಇಜ್ಜತ್‌ ಎಲ್‌ ರೆಶಿಖ್‌, ಇಸ್ರೇಲ್‌ ಹೇಳ್ತಿರೋದು ಆಧಾರ ರಹಿತವಾಗಿದೆ. ಈ ಆಂಬುಲೆನ್ಸ್‌ಗಳು ಗಾಜಾ ನಗರದಲ್ಲಿರೋ ಅಲ್‌ ಶಿಫಾ ಆಸ್ಪತ್ರೆಗೆ ಸೇರಿದ್ದು, ಹಲವೆಡೆ ಇಸ್ರೇಲ್‌ ಆಂಬುಲೆನ್ಸ್‌ಗಳನ್ನ ಗುರಿಯಾಗಿಸಿ ದಾಳಿ ಮಾಡಿದೆ ಅಂತ ಹೇಳಿದ್ದಾನೆ. ಇನ್ನು ಈ ಬಗ್ಗೆ ರಿಯಾಕ್ಟ್‌ ಮಾಡಿರೋ WHO ಡೈರಕ್ಟರ್‌ ಟೆಡ್ರೋಸ್‌ ಅಧನೋಮ್‌, ರೋಗಿಗಳನ್ನ ಸ್ಥಳಾಂತರ ಮಾಡ್ತಿದ್ದ ಆಂಬುಲೆನ್ಸ್‌ಗಳ ಮೇಲೆ ಅಟ್ಯಾಕ್‌ ಮಾಡಿರೋದನ್ನ ಕೇಳಿ ಶಾಕ್‌ ಆಗಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ರೋಗಿಗಳು, ಹೆಲ್ತ್‌ ವರ್ಕರ್ಸ್‌ ಹಾಗೂ ಮೆಡಿಕಲ್‌ ಫೆಸಿಲಿಟೀಸ್‌ನ್ನ ರಕ್ಷಿಸಬೇಕು ಅಂತ ಒತ್ತಾಯಸಿದ್ದಾರೆ. ಇನ್ನೊಂದ್‌ ಕಡೆ ಗಾಜಾದ ಸ್ಕೂಲ್‌ ಒಂದ್ರ ಮೇಲೆ ಇಸ್ರೇಲ್‌ ದಾಳಿ ಮಾಡಿದ್ದು, ಕನಿಷ್ಠ 20 ಜನ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಅಂತ ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನೊಂದ್‌ ಕಡೆ ಇಸ್ರೇಲ್‌-ಹಮಾಸ್‌ ಯುದ್ಧ ಶುರು ಆದ ನಂತ್ರ ಇದೇ ಮೊದಲ ಬಾರಿಗೆ ಲೆಬನಾನ್‌ ಉಗ್ರ ಸಂಘಟನೆ ಹೆಜ್ಬೊಲ್ಲ ಚೀಫ್‌ ಹಸ್ಸನ್‌ ನಸ್ರುಲ್ಲಾ ಈ ಬಗ್ಗೆ ಮಾತಾಡಿದ್ದಾನೆ. ಈ ವೇಳೆ ಗಾಜಾ ಮೇಲಿನ ದಾಳಿ ಇದೇ ರೀತಿ ಕಂಟಿನ್ಯೂ ಆದ್ರೆ ಈ ಯುದ್ಧದಲ್ಲಿ ಧುಮುಕಲು ಲೆಬನಾನ್‌ಗೆ ಎಲ್ಲಾ ರೀತಿಯ ಆಯ್ಕೆಗಳು ತೆರೆದುಕೊಳ್ತವೆ, ಅಂದ್ರೆ ನಾವು ನೇರವಾಗಿ ಯುದ್ಧ ಮಾಡ್ತೀವಿ ಅಂತ ವಾರ್ನ್‌ ಮಾಡಿದ್ದಾನೆ. ಜೊತೆಗೆ ಸದ್ಯ ಗಾಜಾ ಮೇಲಿನ ಯುದ್ಧಕ್ಕೆ ಅಮೆರಿಕ ಸಂಪೂರ್ಣ ಜವಾಬ್ದಾರನಾಗಿದ್ದು, ಇಸ್ರೇಲ್‌ನ್ನ ಟೂಲ್‌ ರೀತಿ ಬಳಸಿಕೊಳ್ತಿದೆ ಅಂತ ಆರೋಪಿಸಿದ್ದಾನೆ. ಇದೇ ವೇಳೆ ಪೂರ್ವ ಮೆಡಿಟರೇನಿಯನ್‌ ಸಮುದ್ರಕ್ಕೆ ಅಮೆರಿಕ ಕಳಿಸಿರೋ ವಿಮಾನವಾಹಕ ನೌಕೆ ಬಗ್ಗೆ ಮಾತಾಡಿರೋ ನಸ್ರುಲ್ಲಾ, ಮೆಡಿಟರೇನಿಯನ್‌ನಲ್ಲಿರೋ ನಿಮ್ಮ ನೌಕಾಪಡೆಯಿಂದ ನಮಗೇನು ಭಯವಿಲ್ಲ. ಅಲ್ದೆ ನಿಮ್ಮ ಥ್ರೆಟ್‌ನ್ನ ಫೇಸ್‌ ಮಾಡೋಕೆ ನಾವು ರೆಡಿ ಇದೀವಿ ಅಂತ ಅಬ್ಬರಿಸಿದ್ದಾನೆ. ಇನ್ನು ಈ ಭಾಗದಲ್ಲಿ ಏನಾದ್ರೂ ಯುದ್ಧ ನಡೆದರೆ ಆಗ ಯುದ್ಧದಲ್ಲಿ ಮೊದಲು ಬೆಲೆ ತೆರೋದು ಅಮೆರಿಕದ ಸೈನಿಕರು ಅಂತ ವಾರ್ನ್‌ ಮಾಡಿದ್ದಾನೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಅಮೆರಿಕ, ಪ್ರಸ್ತುತ ಸಂಘರ್ಷವನ್ನ ಅಡ್ವಾಂಟೇಜ್‌ ಆಗಿ ತಗೋಬೇಡಿ. ಈ ಯುದ್ಧ ಲೆಬನಾನ್‌ವರೆಗೂ ಹರಡೋದು ನಮಗೆ ಇಷ್ಟವಿಲ್ಲ ಅಂತ ವೈಟ್‌ಹೌಸ್‌ ಪ್ರೆಸ್‌ ಸೆಕ್ರೆಟರಿ ಕರೀನ್‌ ಜೀನ್‌ ಪಿಯರಿ ಹೇಳಿದ್ದಾರೆ. ಅತ್ತ ಈ ನಸ್ರುಲ್ಲಾನ ಸ್ಪೀಚ್‌ಗೆ ಪ್ರತಿಕ್ರಿಯಿಸಿರೋ ಇಸ್ರೇಲ್‌, ನುಸ್ರುಲ್ಲಾನ ಲಾಂಗ್‌ ಭಾಷಣ ಕೇಳಿದ್ವಿ. ತುಂಬಾ ಬೋರಿಂಗ್‌ ಆಗಿತ್ತು. ಮೋಸ್ಟ್ಲಿ ಇತ್ತೀಚೆಗೆ ಇಸ್ರೇಲ್‌ ಸೇನೆ ಹೆಜ್ಬೊಲ್ಲ ಮೇಲೆ ಮಾಡಿದ ದಾಳಿಯಲ್ಲಿ ನಸ್ರುಲ್ಲಾನ ಸ್ಪೀಚ್‌ರೈಟರ್‌ ಮೃತಪಟ್ಟಿರಬೇಕು ಅಂತ ವ್ಯಂಗ್ಯ ಮಾಡಿದೆ. ಜೊತೆಗೆ ಎಲ್ಲೋ ಬಂಕರ್‌ನಲ್ಲಿ ಅವಿತು ಈ ಭಾಷಣ ಮಾಡಿರೋ ನಸ್ರುಲ್ಲಾ ಒಬ್ಬ ಹೇಡಿ ಅಂತ ಇಸ್ರೇಲ್‌ ವಕ್ತಾರ ಎಲಾನ್‌ ಲೆವಿ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದ್‌ ಕಡೆ ಯುದ್ಧಪೀಡಿತ ಗಾಜಾದಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅಲ್ಲಿನ ಜನ ಈಗ ಅನ್ನ ಬಿಡಿ, ನೀರಿಗಾಗಿ ಪರದಾಡುತ್ತಿದ್ದಾರೆ ಅಂತ ವಿಶ್ವಸಂಸ್ಥೆಯ ಗಾಜಾ ಡೈರೆಕ್ಟರ್‌ ಥಾಮಸ್‌ ವೈಟ್‌ ಹೇಳಿದ್ದಾರೆ.

ಇತ್ತ ಸೋವಿಯತ್ ಒಕ್ಕೂಟದಂತೆಯೇ ಒಂದು ದಿನ ಅಮೆರಿಕನೂ ಪತನಗೊಳ್ಳಲಿದೆ ಅಂತ ಹಮಾಸ್ ಅಧಿಕಾರಿ ಅಲಿ ಬರಾಕಾ ಎಚ್ಚರಿಕೆ ನೀಡಿರೋದಾಗಿ ಜೆರುಸಲಂ ಪೋಸ್ಟ್ ವರದಿ ಮಾಡಿದೆ. ಬ್ರಿಟನ್ ಮತ್ತು ಜಗತ್ತಿನ ಇತರ ರಾಷ್ಟ್ರಗಳು ಸೇರಿ ಯುನೈಟೆಡ್ ಸ್ಟೇಟ್ಸ್‌ನ್ನ ಸ್ಥಾಪಿಸಿದ್ರು. ಆದ್ರೆ ಈಗ USSR ರೀತಿಯೇ ಅದೂ ಪತನವಾಗಲಿದೆ. ಅಮೆರಿಕ ವಿರೋಧಿಗಳೆಲ್ಲರೂ ಪರಸ್ಪರ ಸಂಪರ್ಕದಲ್ಲಿದ್ದು, ಜೊತೆಯಾಗಿ ಕೈಜೋಡಿಸುತ್ತಿದ್ದಾರೆ. ಎಲ್ಲರೂ ಜತೆಗೂಡಿ ಹೋರಾಟ ನಡೆಸುವ ದಿನವೊಂದು ಬರಲಿದೆ. ಆಗ ಅಮೆರಿಕ ಅನ್ನೋದು ಇತಿಹಾಸದ ಪುಟ ಸೇರಲಿದೆ’ ಅಂತ ಹಮಾಸ್‌ ಮುಖಂಡ ಎಚ್ಚರಿಕೆ ನೀಡಿದ್ದಾನೆ. ಇದೇ ವೇಳೆ ಹಮಾಸ್‌ನ ರಾಯಭಾರಿಗಳ ಎರಡು ತಂಡ ರಷ್ಯಾ ಮತ್ತು ಚೀನಾಗೆ ಶೀಘ್ರದಲ್ಲೇ ಭೇಟಿ ನೀಡಲಿವೆ. ಅಲ್ದೆ ರಷ್ಯಾ ಈಗಾಗಲೇ ನಿರಂತರವಾಗಿ ನಮ್ಮ ಸಂಪರ್ಕದಲ್ಲಿದೆ. ಚೀನಾ ಕೂಡ ರಾಯಭಾರಿಗಳನ್ನ ಕತಾರ್‌ಗೆ ಕಳಿಸಿಕೊಟ್ಟಿದೆ. ಈ ಎರಡೂ ರಾಷ್ಟ್ರಗಳು ಹಮಾಸ್‌ ಮುಖಂಡರನ್ನ ಭೇಟಿ ಮಾಡಿದ್ದಾರೆ ಅಂತ ಸ್ಪೋಟಕ ಮಾಹಿತಿ ಸಿಡಿಸಿದ್ದು, ಎಲ್ಲಾ ಅಮೆರಿಕ ವಿರೋಧಿಗಳು ಒಗ್ಗಟ್ಟಾಗಿದ್ದಾರೆ ಅಂತ ಹೇಳಿದ್ದಾರೆ. ಮತ್ತೊಂದ್‌ ಕಡೆ ಬ್ರಿಟನ್‌ನ Armistice Day ನವೆಂಬರ್‌ 11ರಂದು ಪ್ಯಾಲಸ್ತೈನ್‌ ಪರ ಹೋರಾಟಗಾರರು ಪ್ರತಿಭಟನೆ ನಡಸೋದಾಗಿ ಪ್ಲಾನ್‌ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ವಾರ್ನ್‌ ಮಾಡಿದ್ದಾರೆ. ಎರಡು ವಿಶ್ವಯುದ್ಧಗಳಲ್ಲಿ ಮಡಿದವರ ನೆನಪಿನ ದಿನದಂದು ಈ ರೀತಿ ಮಾಡೋದು ಹುತಾತ್ಮ ಸೈನಿಕರಿಗೆ ಅಗೌರವ ತೋರಿದಂತಾಗುತ್ತೆ. ಆ ರೀತಿ ಆಗದಂತೆ ನೋಡಿಕೊಳ್ಳಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಮತ್ತು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ ಅಂತ ಸುನಾಕ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply