ಉತ್ತರಾಖಂಡದಲ್ಲಿ ಕಾಳ್ಗಿಚ್ಚು! ಒಟ್ಟು ಐದು ಮಂದಿ ಸಾವು!

masthmagaa.com:

ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಕಾಳ್ಗಿಚ್ಚಿಗೆ, ಇದುವರೆಗೆ ಒಟ್ಟು 1,300 ಹೆಕ್ಟೇರ್‌ಗಳಷ್ಟು ಅರಣ್ಯ ಭೂಮಿ ನಾಶವಾಗಿದೆ. ಜೊತೆಗೆ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕಾಳ್ಗಿಚ್ಚು ಸಂಬಂಧ ಇಲ್ಲಿ ತನಕ ಸುಮಾರು 388 ಕೇಸ್‌ಗಳು ದಾಖಲಾಗಿದ್ದು, 60 FIR ಆಗಿದೆ. ಸದ್ಯ ಕಾಳ್ಗಿಚ್ಚು ಕಂಟ್ರೋಲ್‌ಗೆ ಬಂದಿದೆ ಅಂತ ಅಲ್ಲಿನ ಅರಣ್ಯ ಪಡೆಯ ಮುಖ್ಯಸ್ಥ ಧನಂಜಯ್‌ ಮೋಹನ್‌ ಮಾಹಿತಿ ನೀಡಿದ್ದಾರೆ. ಇನ್ನು ಈ ಕಾಳ್ಗಿಚ್ಚು ಸಂಬಂಧ ಸಲ್ಲಿಕೆಯಾಗಿರೋ ಅರ್ಜಿಗಳ ವಿಚಾರಣೆ ನಡೆಸಿರೋ ಸುಪ್ರೀಂ ಕೋರ್ಟ್‌ ಉತ್ತರಾಖಂಡ ಸರ್ಕಾರವನ್ನ ತರಾಟೆಗೆ ತಗೊಂಡಿದೆ. ʻಮೋಡ ಬಿತ್ತನೆ ಅಥ್ವಾ ವರುಣ ದೇವನ ಮೊರೆ ಹೋಗೋದ್ರಿಂದ ಸಮಸ್ಯೆಗೆ ಪರಿಹಾರ ಸಿಗೋದಿಲ್ಲ. ಕಾಳ್ಗಿಚ್ಚು ನಿಲ್ಲಿಸೋಕೆ ಸೂಕ್ತವಾದ ಕ್ರಮ ತೆಗೆದುಕೊಳ್ಳಿ’ ಅಂತ ಆದೇಶಿಸಿದೆ. ಅಂದ್ಹಾಗೆ ಕಳೆದ ವರ್ಷ ನವೆಂಬರ್‌ನಿಂದ ಇದುವರೆಗೆ ಬರೋಬ್ಬರಿ ಒಟ್ಟು 398 ಕಾಳ್ಗಿಚ್ಚು ಪ್ರಕರಣಗಳು ಆ ರಾಜ್ಯದಲ್ಲಿ ರಿಪೋರ್ಟ್‌ ಆಗಿವೆ ಅಂತೇಳಲಾಗಿದೆ. ಇನ್ನೊಂದ್ಕಡೆ ಉತ್ತರಾಖಂಡದಲ್ಲಿ ಭಾರೀ ಮಳೆ ಸುರಿದಿದ್ದು, ಅಲ್ಲಿನ ಅಲ್ಮೋರ, ಉತ್ತರಕಾಶಿ ಮತ್ತು ಬಾಗೇಶ್ವರ್‌ ಜಿಲ್ಲೆಗಳ ಜನಜೀವನ ಅಸ್ತವ್ಯಸ್ತಗೊಂಡಿದೆ.

-masthmagaa.com

Contact Us for Advertisement

Leave a Reply