ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ!

masthmagaa.com:

2024ರ ಲೋಕಸಭೆ ಎಲೆಕ್ಷನ್‌ಗೆ ಸಜ್ಜಾಗ್ತಿರೋ ಕೇಂದ್ರ ಬಿಜೆಪಿ ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರೋ ಇನ್ನೊಂದು ಭರವಸೆಯನ್ನ ಈಡೇರಿಸೋಕೆ ಮುಂದಾಗಿದೆ. Uniform Civil Code (UCC) ಅಂದ್ರೆ ಏಕರೂಪ ನಾಗರಿಕ ಸಂಹಿತೆಯನ್ನ ಜನವರಿ ತಿಂಗಳಲ್ಲಿ ಉತ್ತರಖಂಡದಲ್ಲಿ ಜಾರಿ ಮಾಡೋಕೆ ಆಲ್ಮೋಸ್ಟ್‌ ಸೆಟ್‌ ಆಗಿದೆ. ಹೀಗಂತ ಕೇಂದ್ರ ಬಿಜೆಪಿ ಪಾರ್ಟಿಯ ಮೂಲಗಳು ಮಾಹಿತಿ ನೀಡಿವೆ. ಈ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡಿರೋ ಬಿಜೆಪಿ ಮೂಲಗಳು, ʻUCC ಜಾರಿ ಮಾಡೋ ವಿಚಾರ ಸಂವಿಧಾನದ ಸಮವರ್ತಿ ಲಿಸ್ಟ್‌ನಲ್ಲಿದೆ. ಅಂದ್ರೆ ಈ ಪ್ರಸ್ತಾವನೆಯನ್ನ ಜಾರಿ ಮಾಡ್ಬೇಕೋ ಬೇಡ್ವೋ ಅನ್ನೋ ಬಗ್ಗೆ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಕೂಡ ಡಿಸೈಡ್‌ ಮಾಡ್ಬೋದು. ಆದ್ರಿಂದ ಕೇಂದ್ರ ಸರ್ಕಾರ UCC ಕಾನೂನನ್ನ ದೇಶದೆಲ್ಲೆಡೆ ಇಂಪೋಸ್‌ ಮಾಡಲ್ಲ. ಬದಲಿಗೆ ರಾಜ್ಯ ಸರ್ಕಾರಕ್ಕೆ ಇದನ್ನ ಇಂಪ್ಲಿಮೆಂಟ್‌ ಮಾಡೋ ವಿಚಾರವಾಗಿ ಡಿಸೈಡ್‌ ಮಾಡೋಕೆ ಬಡ್ತೀವಿ. ಆದ್ರೆ ಬಿಜೆಪಿ ಸರ್ಕಾರದ ಆಡಳಿತವಿರೋ ರಾಜ್ಯಗಳಲ್ಲಿ ನಿಸ್ಸಂದೇಹವಾಗಿ UCC ಜಾರಿ ಮಾಡೇ ಮಾಡ್ತೀವಿ. ಆದ್ರಿಂದ ಮೊದ್ಲಿಗೆ ಉತ್ತರಾಖಂಡದಲ್ಲಿ UCC ಜಾರಿ ಮಾಡ್ತೀವಿ. ಇಲ್ಲಿ ಈ ಕಾನೂನು ಯಾವ ರೀತಿ ವರ್ಕ್‌ ಆಗುತ್ತೆ ಅಂತ ನೋಡ್ಕೊಂಡು, ವಿಚಾರ ವಿಮರ್ಶೆ ಮಾಡಿ ಉಳಿದ ರಾಜ್ಯಗಳಲ್ಲಿ ಇಂಪ್ಲಿಮೆಂಟ್‌ ಮಾಡ್ತೀವಿ. ಅಂದ್ರೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌, ರಾಜಸ್ಥಾನ, ಚತ್ತೀಸ್‌ಗಢ, ಹರಿಯಾಣ, ಮಹಾರಾಷ್ಟ್ರ, ಅಸ್ಸಾಂ, ತ್ರಿಪುರ ಮತ್ತು ಮಣಿಪುರದಲ್ಲಿ ಜಾರಿ ಮಾಡ್ತೀವಿ. ಇದಕ್ಕೆ ಪಬ್ಲಿಕ್‌ ರೆಸ್ಪಾನ್ಸ್‌ ಯಾವ ರೀತಿ ಬರುತ್ತೋ, ಆ ಆಧಾರದ ಮೇಲೆ ಈ ಕಾನೂನು ಮುಂದಕ್ಕೆ ತೆಗೆದ್ಕೊಂಡು ಹೋಗ್ಬೇಕೋ ಬೇಡ್ವೋ ಅಂತ ಡಿಸೈಡ್‌ ಮಾಡಲಾಗುತ್ತೆ. ಜೊತೆಗೆ ಪಬ್ಲಿಕ್‌ ಅಭಿಪ್ರಾಯದಿಂದ ಈ ಕಾನೂನಲ್ಲಿ ಏನಾದ್ರೂ ಬದಲಾವಣೆ ಅಥ್ವಾ ಇಂಪ್ರೂವ್‌ಮೆಂಟ್‌ ಮಾಡ್ಬೇಕಾ ಅನ್ನೋ ಬಗ್ಗೆ ವಿಚಾರ ಮಾಡೋಕೆ ಸಹಾಯವಾಗಲಿದೆ. ಆದ್ರೆ ನಾವು ಕೆಲ ಸ್ಥಳೀಯ ಸಂಪ್ರದಾಯಗಳ ಬಗ್ಗೆ ಸ್ವಲ್ಪ ಸೆನ್ಸಿಟಿವ್‌ ಆಗ್ಬೇಕು. ಆದ್ರೆ ಮದುವೆಗಳಲ್ಲಿ ಮಾತ್ರ ಸಮಾನತೆಯನ್ನ ಕಾಪಾಡಲಾಗುತ್ತೆ. ಸದ್ಯ ನಾವು UCC ಮೇಲೆ ಒಂದು ಕಮಿಟಿಯನ್ನ ರಚಿಸಿದ್ದು, ಇದ್ರ ರಿಪೋರ್ಟ್‌ ಮುಂದಿನ ತಿಂಗಳು ಸಿಗೋ ಸಾಧ್ಯತೆಯಿದೆ. ಈ ರಿಪೋರ್ಟ್‌ ಸಿಕ್ಕ ತಕ್ಷಣವೇ ಉತ್ತರಾಖಂಡದಲ್ಲಿ UCC ಇಂಪ್ಲಿಮೆಂಟ್‌ ಮಡಲಾಗುತ್ತೆ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply