ಪತಂಜಲಿಯ 14‌ ಪ್ರೊಡಕ್ಟ್‌ಗಳ ಉತ್ಪಾದನೆಯ ಪರವಾನಿಗೆ ಸಸ್ಪೆಂಡ್!

masthmagaa.com:

ಸದ್ಯ ವಿವಾದಗಳಿಂದಲೇ ತೀವ್ರ ಚರ್ಚೆಯಲ್ಲಿರೊ ಪತಂಜಲಿ ಆಯುರ್ವೇದ ಕಂಪನಿಗೆ ಮತ್ತೆ ಭಾರಿ ಹಿನ್ನಡೆಯಾಗಿದೆ. ಇದೀಗ ಪತಂಜಲಿಯ 14‌ ಪ್ರೊಡಕ್ಟ್‌ಗಳ ಉತ್ಪಾದನೆಯ ಪರವಾನಿಗೆಯನ್ನ ಉತ್ತರಾಖಂಡ್‌ ಸರ್ಕಾರ ಅಮಾನತುಗೊಳಿಸಿದೆ. ಆಕ್ಷೇಪಾರ್ಹ ಜಾಹೀರಾತುಗಳ ಆಧಾರದ ಮೇಲೆ 1954ರ ಕಾಯ್ದೆಯಡಿ 14 ಪ್ರೊಡಕ್ಟ್‌ಗಳ ಉತ್ಪಾದನೆಯ ಪರವಾನಿಗೆಯನ್ನ ರದ್ದು ಮಾಡಲಾಗಿದೆ ಅಂತ ಖುದ್ದು ಉತ್ತರಾಖಂಡ ಸರ್ಕಾರ ತಿಳಿಸಿದೆ. ಅದ್ರಲ್ಲಿ ಪ್ರಮುಖವಾಗಿ ಸ್ವಸರಿ ಗೋಲ್ಡ್‌, ಸ್ವಸರಿ ವಾಟಿ, ಬ್ರಾಂಕ್ರೊಮ್‌, ಸ್ವಸರಿ ಪ್ರವಾಹಿ ಪ್ರೊಡಕ್ಟ್‌ಗಳು ಇವೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply