ಗ್ಯಾನ್‌ವಪಿ ಮಸೀದಿ ಸರ್ವೇಗೆ ಕೋರ್ಟ್‌ ಅನುಮತಿ! ಹಿಂದೂ ಅರ್ಜಿದಾರರಿಗೆ ಮುನ್ನಡೆ!

masthmagaa.com:

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಗ್ಯಾನ್‌ವಪಿ ಮಸೀದಿಗೆ ಸಂಬಂಧಿಸಿದಂತೆ ವಾರಣಾಸಿ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ಸಂಪೂರ್ಣ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಮಾಡೋಕೆ ಕೋರ್ಟ್‌ ಅನುಮತಿ ನೀಡಿದೆ. ಭಾರತದ ಪುರಾತತ್ವ ಇಲಾಖೆ ಸರ್ವೇ ಮಾಡಿ ಅಂತಿಮ ವರದಿಯನ್ನ ಆಗಸ್ಟ್‌ 4ರೊಳಗೆ ಸಲ್ಲಿಸಬೇಕು ಅಂತ ಕೋರ್ಟ್‌ ಹೇಳಿದೆ. ಆದ್ರೆ ಶಿವಲಿಂಗ ರಚನೆ ಇರುವ ವಾಜುಖಾನಾ ಹೊರತುಪಡಿಸಿ ಸರ್ವೇ ಮಾಡೋಕೆ ಸೂಚಿಸಿದೆ. ಅಂದ್ಹಾಗೆ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಮಾಡುವಂತೆ ಇದೇ ವರ್ಷ ಮೇ ತಿಂಗಳಲ್ಲಿ 4 ಹಿಂದೂ ಮಹಿಳೆಯರು ಅರ್ಜಿ ಸಲ್ಲಿಸಿದ್ರು. ಅದ್ರಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಗ್ಯಾನ್‌ವಪಿ ಮಸೀದಿಯಲ್ಲಿ ಪುರಾತನ ಹಿಂದು ದೇವಾಲಯಗಳ ಚಿಹ್ನೆಯಿವೆ ಅಂತ ಉಲ್ಲೇಖಿಸಲಾಗಿದೆ. ಜೊತೆಗೆ ಸ್ವಯಂಭು ಜ್ಯೋತಿರ್ಲಿಂಗ ಆ ಸ್ಥಳದಲ್ಲಿ ಅಂದ್ರೆ ಮಸೀದಿಯಲ್ಲಿ ಲಕ್ಷಾಂತರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಹಿಂದೂ ವಿರೋಧಿಗಳಾದ ಮುಸ್ಲಿಂ ಆಕ್ರಮಣಕಾರರಿಂದ ಹಾನಿಗೊಳಗಾಗಿದೆ. ಅಲ್ದೇ 1669ರಲ್ಲಿ ಮೊಘಲ್‌ನ ಕ್ರೂರ ಸಾಮ್ರಾಟನಾದ ಔರಂಗಜೇಬ್ ಆದಿವಿಶ್ವೇಶ್ವರ ಟೆಂಪಲ್‌ನ್ನ ನಾಶ ಮಾಡೋಕೆ ಆಜ್ಞೆ ಹೊರಡಿಸಿದ. ಹೀಗಾಗಿ ಹಿಂದೂ ದೇವಾಲಯಗಳ ಸ್ಥಳಗಳಲ್ಲಿ ಮಸೀದಿಗಳು ತಲೆಎತ್ತಿವೆ. ಕಾಶಿ ವಿಶ್ವನಾಥ ದೇವಾಲಯ-ಗ್ಯಾನ್‌ವಪಿ ಮಸೀದಿಯ ವಿವಾದ ಪುರಾತತ್ವ ತನಿಖೆಯಿಂದ ಮಾತ್ರ ಸಾಲ್ವ್‌ ಆಗುತ್ತೆ ಅಂತ ತಿಳಿಸಲಾಗಿತ್ತು. ಇತ್ತ ಈ ಅರ್ಜಿಯನ್ನ ಮುಸ್ಲಿಂ ಸಮುದಾಯ ವಿರೋಧಿಸಿತ್ತು. ASI ಸರ್ವೇಯಿಂದ ಮಸೀದಿಗೆ ಹಾನಿಯಾಗುತ್ತೆ ಅಂತ ಅಂತ ಹೇಳಿತ್ತು. ಇದೀಗ ವಿಚಾರಣೆ ನಡೆಸಿರೊ ಕೋರ್ಟ್‌ ಸರ್ವೇಗೆ ಅನುಮತಿ ನೀಡಿದ್ದು, ಮುಸ್ಲಿಂ ಸಮುದಾಯಕ್ಕೆ ಹಿನ್ನಡೆಯಾಗಿದೆ.‌ ಸೋ ಈ ಆದೇಶವನ್ನ ಹೈಯರ್‌ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ.

-masthmagaa.com

Contact Us for Advertisement

Leave a Reply