ಬ್ರೆಜಿಲ್‌ ಮಧ್ಯಸ್ಥಿಕೆಯಲ್ಲಿ ವೆನಿಜುವೆಲ-ಗಯಾನ ಮೀಟಿಂಗ್‌! ಯಾಕ್‌ ಗೊತ್ತಾ?

masthmagaa.com:

ಗಡಿ ವಿಚಾರವಾಗಿ ಕಿತ್ತಾಡ್ತಿರೋ ವೆನಿಜುವೆಲಾ ಮತ್ತು ಗಯಾನ ಅಧ್ಯಕ್ಷರು ಇದೀಗ ಮೀಟ್‌ ಮಾಡೋಕೆ ಮುಂದಾಗಿದ್ದಾರೆ. ಅಂದ್ಹಾಗೆ ಸದ್ಯ ಗಯಾನಾಗೆ ಸೇರಿದ ತೈಲ ಸಂಪದ್ಭರಿತ ʻಎಸ್ಸಿಕ್ವಿಬೋ ನದಿʼ ಪ್ರದೇಶ ವಿಚಾರವಾಗಿ ಇಬ್ಬರ ನಡುವೆ ದೀರ್ಘಕಾಲದಿಂದ ವ್ಯಾಜ್ಯ ಇತ್ತು. ಇತ್ತೀಚೆಗೆ ಇಲ್ಲಿ ತೈಲ ನಿಕ್ಷೇಪ ಇರೋದು ಗೊತ್ತಾಗಿನಿಂದ ವೆನಿಜುವೆಲಾ ಈ ಜಾಗ ತನ್ನದು ಅಂತ ಹೇಳ್ಕೋಳೋಕೆ ಮುಂದಾಗಿತ್ತು. ಮೊನ್ನೆ ತಾನೆ ಇಲ್ಲಿ ತೈಲ ಬಗೆಯೋಕೆ ಪರ್ಮಿಷನ್‌ ಕೊಟ್ಟು, ಅಲ್ಲಿ ಹೊಸ ರಾಜ್ಯ ಕೂಡ ಮಾಡ್ತೀನಿ ಅಂತ ಹೇಳಿತ್ತು. ಆದ್ರೆ ಇದೀಗ ವೆನಿಜುವೆಲಾ ಅಧ್ಯಕ್ಷ ನಿಕೊಲಸ್‌ ಮಾಡುರೋ ಮತ್ತು ಗಯಾನ ಅಧ್ಯಕ್ಷ ಇರ್ಫಾನ್‌ ಅಲಿ ಮೀಟ್‌ ಮಾಡೋಕೆ ಮಾಡ್ತಿದ್ದಾರೆ. ಕೆರೇಬಿಯನ್‌ನ ಸೇಂಟ್‌ ವಿನ್ಸೆಂಟ್‌ ಅಂಡ್‌ ಗ್ರೆನಡಿನ್ಸ್‌ ದೇಶದಲ್ಲಿ ಈ ಮೀಟಿಂಗ್‌ ನಡೆಯುತ್ತೆ ಅಂತ ಹೇಳಲಾಗಿದೆ. ಬ್ರೆಜಿಲ್‌ ಅಧ್ಯಕ್ಷ ಲುಯಿಜ್‌ ಲುಲಾ ಡ ಸಿಲ್ವಾ ಕೂಡ ಈ ಮೀಟಿಂಗ್‌ ಅಟೆಂಡ್‌ ಮಾಡ್ತಾರಂತೆ.

-masthmagaa.com

Contact Us for Advertisement

Leave a Reply