ಎರಡು ಗರ್ಭಕೋಶಗಳನ್ನ ಹೊಂದಿರೋ ಅಲಬಾಮಾ ಮಹಿಳೆ! ಏನಿದು ಅಚ್ಚರಿ?

masthmagaa.com:

ಜಗತ್ತಿನಲ್ಲಿ ಕೆಲವೊಮ್ಮೆ ಅಸಾಮಾನ್ಯ ಹಾಗೂ ಅಚ್ಚರಿಯ ಘಟನೆಗಳು ನಡೀತಿರ್ತವೆ. ಕೆಲವೊಂದು ಪ್ರಶ್ನೆಯಾಗಿ ಉಳಿದ್ರೆ, ಇನ್ನು ಕೆಲವು ಸವಾಲಾಗಿ ಎದುರಾಗ್ತವೆ. ಇದೀಗ ಅಮೆರಿಕದ ಅಲಬಾಮಾದ ಮೆಡಿಕಲ್‌ ಕೇಸೊಂದು ಡಾಕ್ಟರ್ಸ್‌ಗಳ ತಲೆ ಕೆಡಿಸಿದೆ. ಅಲಬಾಮಾದ ಮಹಿಳೆಯೊಬ್ಬಳು ಎರಡು ಗರ್ಭಕೋಶವನ್ನು ಹೊಂದಿದ್ದು, ಪ್ರೆಗ್ನೆಂಟ್‌ ಆಗಿದ್ದಾರೆ. ಆದ್ರೆ ಇಲ್ಲಿ ಅಚ್ಚರಿ ಏನಂದ್ರೆ ಎರಡೂ ಗರ್ಭಕೋಶದಲ್ಲಿ ಮಗು ಇದ್ದು, ಅಲಬಾಮಾ ಡಾಕ್ಟರ್ಸ್‌ ಇದನ್ನ ಬಹಳ ರೇರ್‌ ಕೇಸ್‌ ಅಂತ ಹೇಳಿದ್ದಾರೆ. ಈಕೆಗೆ ಇದೀಗಾಗ್ಲೆ ಮೂವರು ಮಕ್ಕಳಿದ್ದಾರೆ. ಆದ್ರೆ ಈಗ ಈಕೆಗೆ ಅಲ್ಟ್ರಾಸೌಂಡ್‌ ಮೂಲಕ ತನ್ನೆರಡೂ ಗರ್ಭಕೋಶದಲ್ಲಿ ಎರಡು ಮಗು ಇದೆ ಅನ್ನೋ ಶಾಕಿಂಗ್‌ ಮಾಹಿತಿ ತಿಳಿದು ಬಂದಿದೆ. ಇನ್ನು ಈ ರೇರ್‌ ಪ್ರೆಗ್ನೆನ್ಸಿಯನ್ನ ʻಹೈ ರಿಸ್ಕ್‌ʼ ಅಂದ್ರೆ ಬಹಳ ಅಪಾಯಕಾರಿ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಅಲ್ಲಿನ ಡಾಕ್ಟರ್ಸ್‌ ಪ್ರಕಾರ, ಸದ್ಯ ಈ ಮಹಿಳೆಯ ಗರ್ಭಕೋಶಗಳಲ್ಲಿ ಎರಡು ಹೆಣ್ಣು ಮಕ್ಕಳಿದ್ದು, ಎಲ್ಲಾ ಮಕ್ಕಳ ರೀತಿಯಲ್ಲೇ ಸಾಮಾನ್ಯವಾಗಿ ಬೆಳವಣಿಗೆಯಾಗ್ತಿವೆ. ಆದ್ರೆ ಈ ಕೇಸ್‌ನಲ್ಲಿ ಮಹಿಳೆಯ ಡೆಲಿವರಿ ಮಾತ್ರ ಡಾಕ್ಟರ್ಸ್‌ಗೆ ಸವಾಲಾಗಿ ನಿಂತಿದೆ . ಸದ್ಯ ಈ ಕೇಸ್‌ಗೆ ಸಿಕ್ಕಾಪಟ್ಟೆ ಅಟೆನ್ಶನ್‌ ಸಿಕ್ತಾ ಇದ್ದು, ಇದ್ರ ಕೇಸ್‌ ಸ್ಟಡಿ ಮಾಡೋ ಯೋಚನೆಯಲ್ಲಿದ್ದಾರೆ.

-masthmagaa.com

Contact Us for Advertisement

Leave a Reply