ಕೋರ್ಟ್‌ ಮೆಟ್ಟಿಲೇರಿದ ಸಿಂಹಗಳ ʻಸೀತಾ & ಅಕ್ಬರ್‌ʼ ಹೆಸರು!

masthmagaa.com:

ಪಶ್ಚಿಮ ಬಂಗಾಳದಲ್ಲಿ ಸಿಲ್ಲಿ ವಿಚಾರವೊಂದು ಅಲ್ಲಿನ ಹೈಕೋರ್ಟ್‌ ಮೆಟ್ಟಿಲೇರಿದೆ. ಹೆಣ್ಣು ಸಿಂಹಕ್ಕೆ ʻಸೀತಾʼ ಅಂತ ಹೆಸರಿಟ್ಟು ಅದನ್ನ ʻಅಕ್ಬರ್‌ʼ ಅನ್ನೋ ಹೆಸರಿನ ಗಂಡು ಸಿಂಹದೊಂದಿಗೆ ಒಂದೇ ಕೇಜ್‌ ಒಳಗೆ ಇಟ್ಟಿರೋ ವಿಚಾರ ಕೊಲ್ಕತ್ತಾ ಕೋರ್ಟ್‌ನಲ್ಲಿ ಚರ್ಚೆಯಾಗಲಿದೆ. ಎಸ್‌… ಪಶ್ಚಿಮ ಬಂಗಾಳದ ವಿಶ್ವ ಹಿಂದೂ ಪರಿಷತ್‌ ಈ ವಿಚಾರವನ್ನ ಕೋರ್ಟ್‌ ಮುಂದೆ ಇಟ್ಟು ಅರಣ್ಯ ಇಲಾಖೆ ಕ್ರಮವನ್ನ ಪ್ರಶ್ನಿಸಿದೆ. ಸಿಂಹಗಳನ್ನ ಸಿಲಿಗುರಿ ಸಫಾರಿ ಪಾರ್ಕ್‌ಗೆ ಶಿಫ್ಟ್‌ ಮಾಡೋ ಮುಂಚೆ… ಅವುಗಳನ್ನ ಒಟ್ಟಿಗೆ ಒಂದೇ ಬೋನ್‌ನಲ್ಲಿ ಇಡೋ ಮುಂಚೆ ಅವುಗಳ ಹೆಸರನ್ನ ಬದಲಾಯಿಸಲಾಗಿದೆ ಅಂತ ಆರೋಪಿಸಿದೆ. ಸದ್ಯ ಈ ಮನವಿಯ ವಿಚಾರಣೆಯನ್ನ ಹೈಕೋರ್ಟ್‌ ಫೆಬ್ರುವರಿ 20ರಂದು ನಡೆಸಲಿದೆ. ಅಂದ್ಹಾಗೆ ಅಲ್ಲಿನ ಅರಣ್ಯ ಅಧಿಕಾರಿಗಳ ಪ್ರಕಾರ, ಈ ಸಿಂಹಗಳ ಹೆಸರನ್ನ ಚೇಂಜ್‌ ಮಾಡಲಾಗಿಲ್ಲ. ಮೊದಲಿಂದಲೂ ಅವುಗಳ ಹೆಸರು ಇದೇ ಇತ್ತು ಅಂತ ಹೇಳಿದ್ದಾರೆ. ಒಟ್ನಲ್ಲಿ… ಇದೀಗ ಧರ್ಮದ ಘೀಳಿಗೆ ಮೂಖ ಪ್ರಾಣಿಗಳನ್ನ ಕೂಡ ಎಳೆಯೋ ಕೆಲಸ ಮಾಡ್ತಿರೋ ಹಾಗಿದೆ.

-masthmagaa.com

Contact Us for Advertisement

Leave a Reply