ಗುಜರಾತ್‌ ವೈಬ್ರೆಂಟ್‌ ಶೃಂಗಸಭೆ: ಅದಾನಿ ಗ್ರೂಪ್‌ನಿಂದ ಹೂಡಿಕೆ!

masthmagaa.com:

ಗುಜರಾತ್‌ನಲ್ಲಿ ಪ್ರಾರಂಭವಾಗಿರೋ ವೈಬ್ರೆಂಟ್‌ ಗುಜರಾತ್‌ ಶೃಂಗಸಭೆಯಲ್ಲಿ ದುಡ್ಡಿನ ಹೊಳೆಯೇ ಹರಿದಿದೆ. ಭಾರತದ ನಂ.1 ಉದ್ಯಮಿ ಗೌತಮ್‌ ಅದಾನಿ ಮುಂದಿನ 5 ವರ್ಷಗಳಲ್ಲಿ ಹಸಿರು ಇಂಧನ ಮತ್ತು ನವೀಕರಿಸ್ಬೋದಾದ ಸೆಕ್ಟರ್‌ಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡೋದಾಗಿ ಹೇಳಿದ್ದಾರೆ.. ಇದ್ರಿಂದ ಗುಜರಾತ್‌ನಲ್ಲಿ ಸುಮಾರು 1 ಲಕ್ಷ ಉದ್ಯೋಗಾವಕಾಶ ಸೃಷ್ಟಿಸ್ಬೋದು ಅಂತಾನೂ ಹೇಳಿದ್ದಾರೆ. ಇನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ, 2047ರ ವೇಳೆಗೆ ಭಾರತ 35 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗೋದನ್ನ ವಿಶ್ವದ ಯಾವ ಶಕ್ತಿಯೂ ತಡೆಯೋಕೆ ಸಾಧ್ಯವಿಲ್ಲ. ಜೊತೆಗೆ ಗುಜರಾತ್‌ ಮಾತ್ರವೇ ಬರೋಬ್ಬರಿ 3 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಹೊಂದಲಿದೆ ಅನ್ನೋ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ವೈಬ್ರೆಂಟ್‌ ಗುಜರಾತ್‌ ಶೃಂಗಸಭೆ ಜನವರಿ 10 ರಂದು ಸ್ಟಾರ್ಟ್‌ ಆಗಿದ್ದು, ಜನವರಿ 12ರವರೆಗೆ ನಡೆಯಲಿದೆ.

-masthmagaa.com

Contact Us for Advertisement

Leave a Reply