ಚೀನಾ ಸ್ಪೈ ಬಲೂನ್‌ನ್ನ ಉಡೀಸ್ ಮಾಡಿದ ಅಮೆರಿಕ! ವಿಡಿಯೋ ವೈರಲ್!

masthmagaa.com:

ಅಮೆರಿಕದ ಅಟ್ಲಾಂಟಿಕ್‌ ಕರಾವಳಿಯಲ್ಲಿ ಚೀನಾದ ಬೇಹುಗಾರಿಕೆ ಅಥ್ವಾ ಸ್ಪೈ ಬಲೂನ್‌ನ್ನ ಮಿಸೈಲ್ ಮೂಲಕ ಹೊಡೆದುರಳಿಸಿರೋದಾಗಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗಾನ್‌ ತಿಳಿಸಿದೆ. ಇದರ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಲವಾರು ದಿನಗಳಿಂದ ಉತ್ತರ ಅಮೆರಿಕದ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿದ್ದ ಈ ಬಲೂನ್‌ನ್ನ ಅಮೆರಿಕ ಟಾರ್ಗೆಟ್‌ ಮಾಡಿತ್ತು. ಆ ಪ್ರದೇಶದ ಜನರಿಗೆ ಹಾಗೂ ವಾತಾವರಣಕ್ಕೆ ಹಾನಿಯಾಗದಂತೆ ನಾಶಗೊಳಿಸೋಕೆ ಪ್ಲ್ಯಾನ್‌ ಮಾಡಿತ್ತು. ತನ್ನ F-22 ವಿಮಾನದಿಂದ ಕ್ಷಿಪಣಿಯೊಂದನ್ನ ಉಡಾಯಿಸಿ ಬಲೂನ್‌ನ್ನ ದಕ್ಷಿಣ ಕರೊಲಿನಾದ ಕರಾವಳಿ ಪ್ರದೇಶದಲ್ಲಿ ನಾಶಗೊಳಿಸಲಾಗಿದೆ. ಚೀನಾ ಬಲೂನ್‌ನ್ನ ನಾಶಗೊಳಿಸಿದ ಪೈಲೆಟ್‌ಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕಂಗ್ರಾಜುಲೇಷನ್ ತಿಳಿಸಿದ್ದಾರೆ. ಬಲೂನ್‌ನ್ನ ಯಶಸ್ವಿಯಾಗಿ ಹೊಡೆದುರಳಿಸಿದ್ದಾರೆ. ನಮ್ಮ ಪೈಲೆಟ್‌ಗಳಿಗೆ ಅಭಿನಂದನೆ ತಿಳಿಸ್ತೀನಿ ಅಂತ ಬೈಡೆನ್‌ ಹೇಳಿದ್ದಾರೆ. ಇತ್ತ ತಮ್ಮ ಈ ಕ್ರಮವನ್ನ ಉದ್ದೇಶಪೂರ್ವಕ ಹಾಗೂ ಕಾನೂನುಬದ್ಧ ಕ್ರಮ ಅಂತ ಅಮೆರಿಕದ ಸೆಕ್ರಟರಿ ಆಫ್ ಡಿಫೆನ್ಸ್‌ Lloyd Austin ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಚೀನಾ ಅಮೆರಿಕದ ಮೇಲೆ ಕಿಡಿಕಾರಿದೆ. ನಮ್ಮ ಸಾರ್ವಭೌಮತೆಯ ಉಲ್ಲಂಘನೆಯನ್ನ ಸ್ವೀಕರಿಸೋಕೆ ಆಗಲ್ಲ. ಇದರ ವಿರುದ್ದ ಸರಿಯಾದ ಕ್ರಮ ಕೈಗೊಳ್ಳಲಾಗುತ್ತೆ ಅಂತ ಚೀನಾ ವಾರ್ನಿಂಗ್‌ ನೀಡಿದೆ. ನಾಗರಿಕ ಉದ್ದೇಶಗಳಿಗೆ ಅಂದ್ರೆ ಹವಾಮಾನ ಮತ್ತು ಇತರ ವೈಜ್ಞಾನಿಕ ಸಂಶೋಧನೆಗಳಿಗೆ ಬಳಸಿದ್ದ ಬಲೂನ್‌ನ್ನ ಧ್ವಂಸಗೊಳಿಸಲಾಗಿದೆ. ಅಮೆರಿಕ ಓವರ್‌ ಆಗಿ ರಿಯಾಕ್ಟ್‌ ಮಾಡಿದೆ. ಇದು ಅಂತಾರಾಷ್ಟ್ರೀಯ ಕ್ರಮಗಳ ಉಲ್ಲಂಘನೆ ಅಂತ ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಇತ್ತ ಬಲೂನ್‌ನ್ನ ಹೊಡೆದುರುಳಿಸಿದ ಬಳಿಕ ಅಮೆರಿಕದ ಡೈವರ್‌ಗಳು ಅದರ ಭಾಗಗಳಿಗೆ ಶೋಧನೆ ನಡೆಸಿದ್ದಾರೆ. ಪಾರ್ಟ್‌ಗಳನ್ನ ಹುಡುಕಿ ಅವುಗಳ ಬಗ್ಗೆ ಅಧ್ಯಯನ ನಡೆಸೋಕೆ ಪೆಂಟಗಾನ್ ಮುಂದಾಗಿದೆ.

-masthmagaa.com

Contact Us for Advertisement

Leave a Reply