ರೈಲಿನ ಅಡುಗೆ ಮನೆಯಲ್ಲಿ ಇಲಿಗಳ ದರ್ಬಾರ್‌! ಬೇಜವಾಬ್ದಾರಿ ಉತ್ತರ ಕೊಟ್ಟ ರೈಲ್ವೆ ಸಿಬ್ಬಂದಿ!

masthmagaa.com:

ಮಡಗಾಂವ್‌ ಎಕ್ಸ್‌ಪ್ರೆಸ್‌ನ ರೈಲಿನ ಅಡುಗೆ ಮಾಡೋ ಸ್ಥಳದಲ್ಲಿ ಇಲಿಗಳು ಇರೋದನ್ನ ಪ್ಯಾಸೆಂಜರ್‌ ಒಬ್ಬ ವಿಡಿಯೋ ಮಾಡಿ ತನ್ನ ʻXʼ ಖಾತೆಯಲ್ಲಿ ಶೇರ್‌ ಮಾಡಿದ್ದಾನೆ. ಈ ವಿಡಿಯೋದಲ್ಲಿ ರೈಲಿನ ಪ್ಯಾಂಟ್ರಿ ಅಂದ್ರೆ ಅಡುಗೆ ಮಾಡುವ ಸ್ಥಳದಲ್ಲಿ 6-7 ಇಲಿಗಳು ಓಡಾಡುತ್ತಾ ಅಲ್ಲಿರೋ ಆಹಾರವನ್ನ ತಿನ್ನೋದು ರೆಕಾರ್ಡ್‌ ಆಗಿದೆ. ಬಳಿಕ ಈ ಕುರಿತು ರೈಲ್ವೆ ರಕ್ಷಣಾ ಪಡೆಗೆ ದೂರು ನೀಡಿದ್ದಾನೆ. ಇದಕ್ಕೆ RPF ಸಿಬ್ಬಂದಿ ಕೇರ್‌ಲೆಸ್‌ ಆಗಿ ಉತ್ತರಿಸಿದ್ದಾರೆ. ʻರೈಲ್ವೆ ಟ್ರ್ಯಾಕ್‌ನ ಕೆಳಗಡೆ ನೋಡಿ, 500-600 ಇಲಿಗಳಿವೆ. ಅದರಲ್ಲಿ 5-6 ಇಲಿಗಳು ಟ್ರೈನ್‌ ಒಳಗಡೆ ಬಂದ್ರೆ ಏನ್‌ ಮಹಾ ತೊಂದರೆ ಆಗಿಬಿಡುತ್ತೆ? ಇದಕ್ಕೆ ನಾವೇನು ಮಾಡಬೇಕು?ʼ ಅನ್ನೋ ಬೇಜವಾಬ್ದಾರಿ ಪ್ರಶ್ನೆಗಳನ್ನ ಕೇಳಿದ್ದಾರೆ ಅಂತ ಪ್ರಯಾಣಿಕ ತನ್ನ ʻXʼನಲ್ಲಿ ಪೋಸ್ಟ್‌ ಶೇರ್‌ ಮಾಡಿದ್ದಾನೆ. ಇತ್ತ ಈ ಪೋಸ್ಟ್‌ ವೈರಲ್‌ ಆಗ್ತಿದ್ದಂತೆ IRCTC ರಿಯಾಕ್ಟ್‌ ಮಾಡಿದ್ದು, ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply