ಪ್ರಗ್ಯಾನ್‌ ರೋವರ್‌ ಫುಲ್‌ ಕೆಲಸ! ಲ್ಯಾಂಡಿಂಗ್‌ ನಂತರ ಏನೇನಾಯ್ತು?

masthmagaa.com:

ಚಂದ್ರಯಾನ-3 ಲ್ಯಾಂಡರ್‌ ವಿಕ್ರಮ್‌ ನಿನ್ನೆ ಸಂಜೆ 6 ಗಂಟೆ 04 ನಿಮಿಷಕ್ಕೆ ಲ್ಯಾಂಡ್‌ ಆದರೂ ರೋವರ್‌ ಪ್ರಗ್ಯಾನ್‌ ಚಂದ್ರನ ಮೇಲೆ ಇಳಿಯೋದು ತುಂಬಾ ಲೇಟ್‌ ಆಗಿದೆ. ಈ ಬಗ್ಗೆ ಮಾಹಿತಿ ನೀಡಿರೊ ISROನ ಮುಖ್ಯಸ್ಥ ಎಸ್‌ ಸೋಮನಾಥ್‌, ವಿಕ್ರಂ ಲ್ಯಾಂಡ್‌ ಆದ ಬಳಿಕ, ರೋವರ್‌ ಹೊರ ಬರೋಕೆ ಹಲವಾರು ಟೆಸ್ಟ್‌ಗಳನ್ನ ಮಾಡ್ಬೇಕಿತ್ತು. ಸರಿಯಾದ ಟೆಂಪರೇಚರ್‌ ಇರ್ಬೇಕು, ಲ್ಯಾಂಡರ್‌ ಟಿಲ್ಟ್‌ ಸರಿ ಇರಬೇಕು. ರೋವರ್‌ನ್ನ ಆಚೆ ಕಳಿಸ್ಬೇಕಾ ಅಥ್ವಾ ಬೇಡ್ವಾ ಅನ್ನೋದಕ್ಕೆ ಚಂದ್ರನ ನೆಲದ ಫೋಟೊ ತೆಗೆದು ನಂತ್ರ ಅದನ್ನ ಮಾಡ್ಬೇಕಿತ್ತು. ಹಾಗೇ ಅಲ್ಲಿನ ಟೆಂಪರೇಚರ್‌ ಕಡಿಮೆ ಇದ್ದಿದ್ರಿಂದ ಹೀಟರ್‌ ಆನ್‌ ಮಾಡಬೇಕಿತ್ತು. ಇದೆಲ್ಲ ಆದ ಬಳಿಕ ರೋವರ್‌ ಹೊರ ಬರೋಕೆ ಲ್ಯಾಂಡರ್‌ನಿಂದ ಎರಡು ರ್ಯಾಂಪ್‌ಗಳನ್ನ ಹೊರ ತೆಗೆದ್ವಿ. ಅಷ್ಟರಲ್ಲಿ ನಮ್ಮ ಗ್ರೌಂಡ್‌ ಸ್ಟೇಶನ್‌ನಿಂದ ವಿಸಿಬಿಲಿಟಿ ಹೋಯ್ತು. ಅಂದ್ರೆ ಭೂಮಿ ತಿರುಗುವಿಕೆಯಿಂದ ಚಂದ್ರ ನಮ್ಮ ಬ್ಯಾಲಾಳು ಡೀಪ್‌ ಸ್ಪೇಸ್‌ ನೆಟ್‌ವರ್ಕ್‌ ಕೇಂದ್ರದಿಂದ ನೇರವಾಗಿ ಕಾಣದಂತಾದ. ಹೀಗಾಗಿ ನಾವು ಮತ್ತೊಂದು ಇಂಟರ್‌ನ್ಯಾಷನಲ್‌ ಗ್ರೌಂಡ್‌ ಸ್ಟೇಷನ್‌ನ ಸಹಾಯ ಪಡೆಯಬೇಕಾಯ್ತು. ಇನ್ನು ರ್ಯಾಂಪ್‌ ಓಪನ್‌ ಆದಾಗ ಟೆಂಪರೇಚರ್‌ ಕಡಿಮೆಯಾಗುತ್ತೆ. ಅರ್ಧಗಂಟೆಯಲ್ಲಿ 30 ರಿಂದ 40 ಡಿಗ್ರಿಯಷ್ಟು ತಾಪಮಾನ ಕಡಿಮೆಯಾಗುತ್ತೆ. ಹೀಗಾಗಿ ತಡರಾತ್ರಿ ರೋವರ್‌ನ್ನ ಹೊರತಗದ್ವಿ ಅಂತ ಹೇಳಿದ್ದಾರೆ. ಅಂದ್ಹಾಗೆ ನಿನ್ನೆ ಪ್ರಗ್ಯಾನ್‌ ರೋವರ್‌ನ್ನ ಚಂದ್ರನ ನೆಲದ ಮೇಲೆ ಮಾತ್ರ ಇಳಿಸಲಾಗಿತ್ತು. ಬಳಿಕ ಪ್ಯಾನೆಲ್‌ಗಳ ಸಹಾಯದಿಂದ ರೋವರ್‌ನ ಬ್ಯಾಟರಿ ಚಾರ್ಜ್‌ ಮಾಡಲಾಗ್ತಿತ್ತು. ಯಾವುದೇ ಎಕ್ಸ್‌ಪೆರಿಮೆಂಟ್‌ನ್ನ ಶುರು ಮಾಡಿರಲಿಲ್ಲ. ಆದ್ರೆ ಇಸ್ರೋದ ಲೇಟೆಸ್ಟ್‌ ಅಪ್‌ಡೇಟ್‌ ಪ್ರಕಾರ, ಇವತ್ತು ಮಧ್ಯಾಹ್ನ ರೋವರ್‌ನ ಮೂವ್‌ಮೆಂಟ್‌ ಅಂದ್ರೆ ಚಂದ್ರನ ಮೇಲೆ ಓಡಾಡಿಸೋಕೆ ಶುರು ಮಾಡಲಾಗಿದೆ. ಜೊತೆಗೆ ಲ್ಯಾಂಡರ್‌ ಮಾಡ್ಯೂಲ್‌ನಲ್ಲಿರೊ ILSA RAMBHA ಮತ್ತು ChaSTE ಉಪಕರಣಗಳನ್ನ ಆನ್‌ ಮಾಡಲಾಗಿದೆ. ಇನ್ನು ಅತ್ತ ಪ್ರೊಪಲ್ಶನ್‌ ಮಾಡ್ಯೂಲ್‌ನಲ್ಲಿದ್ದ SHAPE ಉಪಕರಣವನ್ನ ಕೂಡ ನಿನ್ನೆ ಆನ್‌ ಮಾಡಲಾಗಿದೆ. ಅಂದ್ಹಾಗೆ ಈ ಉಪಕರಣಗಳು ಏನು, ಇವುಗಳ ಕೆಲಸ ಏನು, ಇವು ಏನು ಮಾಡುತ್ವೆ ಅನ್ನೊದ್ರ ಬಗ್ಗೆ ಈಗಾಗಲೇ ವರದಿ ಮಾಡಿದ್ದೇವೆ. ವಿಡಿಯೋದ ಅಂತ್ಯದಲ್ಲಿ ಚೆಕ್‌ ಮಾಡಬಹುದು. ಮತ್ತೊಂದ್‌ ಕಡೆ ಮಾತಾಡಿರುವ ಸೋಮನಾಥ್‌ ಅವ್ರು, ಮುಂದಿನ 14 ದಿನಗಳಲ್ಲಿ ಲ್ಯಾಂಡರ್‌ ಇರೊ ಜಾಗದಲ್ಲಿ ಯಾವುದೇ ನೆರಳು ಬೀಳೋದಿಲ್ಲ. ನೆರಳು ಬಿದ್ರೆ ಟೆಂಪರೇಚರ್‌ ಕಡಿಮೆಯಾಗುತ್ತೆ, ಮತ್ತೆ ನಾವು ಹೀಟರ್‌ ಆನ್‌ ಮಾಡ್ಬೇಕಾಗುತ್ತೆ. ಹೀಗಾಗಿ ಅಕ್ಕಪಕ್ಕ ದೊಡ್ಡ ಪರ್ವತಗಳಿರದ ನೆರಳು ಬೀಳದ ಜಾಗವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಅಂತ ಹೇಳಿದ್ದಾರೆ. ಜೊತೆಗೆ ನಿನ್ನೆ ಲ್ಯಾಂಡಿಂಗ್‌ ವೇಳೆ ಲ್ಯಾಂಡರ್‌ನ ವೆಲಾಸಿಟಿ ಲಿಮಿಟ್‌ ಒಳಗೆ ಅಂದ್ರೆ 2 ಮೀಟರ್‌ ಪರ್‌ ಸೆಕೆಂಡ್‌ ಇತ್ತು. ಹೀಗಾಗಿ ಯಾವುದೇ ಇನ್‌ಸ್ಟ್ರುಮೆಂಟ್‌ಗೆ ಹಾನಿ ಆಗಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಚಂದ್ರಯಾನ-3 ಯೋಜನೆ ಯಶಸ್ಸಿನ ಹುಮ್ಮಸ್ಸಿನಲ್ಲಿರೊ ಇಸ್ರೋ, ಸೂರ್ಯ ಅಧ್ಯಯನಕ್ಕೆ ಸಜ್ಜಾಗುತ್ತಿದೆ. ಸೆಪ್ಟಂಬರ್‌ನಲ್ಲಿ ಅಂದ್ರೆ ಮುಂದಿನ ತಿಂಗಳಲ್ಲಿ ಆದಿತ್ಯ L-1 ಸ್ಯಾಟ್‌ಲೈಟ್‌ನ್ನ ಹೊತ್ತ ರಾಕೆಟ್‌ ಗಗನಕ್ಕೆ ಚಿಮ್ಮಲಿದೆ ಅಂತ ಸೋಮ್‌ನಾಥ್‌ ಅವ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply