ಆಮದು ಸುಂಕ ಕಡಿಮೆ ಮಾಡಿ: ಭಾರತಕ್ಕೆ ವಿಯಾಟ್ನಂ ಕಂಪನಿ ಮನವಿ

masthmagaa.com:

ಭಾರತದ ಎಲೆಕ್ಟ್ರಿಕ್‌ ವೆಹಿಕಲ್‌ ಉತ್ಪಾದನೆಗೆ ಕೈ ಹಾಕಿರೋ ವಿಯಾಟ್ನಂನ ವಿನ್‌ಫಾಸ್ಟ್‌ ಆಮದು ಸುಂಕ ಕಡಿಮೆ ಮಾಡೋಕೆ ಮನವಿ ಮಾಡಿದೆ. ತಮಿಳುನಾಡಿನಲ್ಲಿ ಈಗಾಗಲೇ ವಿನ್‌ಫಾಸ್ಟ್‌ ತನ್ನ ಫ್ಯಾಕ್ಟರಿ ನಿರ್ಮಾಣ ಕಾರ್ಯ ಶುರು ಮಾಡಿದೆ. ಇದೆ ವೇಳೆ 2 ವರ್ಷಗಳವರೆಗೆ ಕೆಲ ಕಾರುಗಳ ಮೇಲೆ ಇಂಪೋರ್ಟ್‌ ಡ್ಯೂಟಿಯನ್ನ 70-80% ಕಡಿಮೆ ಮಾಡಿದ್ರೆ ಒಳ್ಳೇದಾಗ್ತಿತ್ತು. ಭಾರತದ ಗ್ರಾಹಕರಿಗೆ ನಮ್ಮ ಪ್ರೊಡಕ್ಟ್‌ ಬಗ್ಗೆ ಫೆಮಿಲಿಯರಿಟಿ ಸಿಗ್ತಿತ್ತು ಅಂತ ಹೇಳಿದೆ. ಅಂದ್ಹಾಗೆ ಭಾರತ ಸರ್ಕಾರ ವಿದೇಶಿ ಕಾರುಗಳ ಆಮದಿನ ಮೇಲೆ 100% ತೆರಿಗೆ ಹಾಕುತ್ತೆ. ಈ ಹಿಂದೆ ಟೆಸ್ಲಾ ಕೂಡ ಅಟ್ಲೀಸ್ಟ್‌ EV ಗಾಡಿಗಳ ಮೇಲಿನ ಸುಂಕ ಕಡಿಮೆ ಮಾಡಿ ಅಂತ ಕೇಳಿತ್ತು. ಆದ್ರೆ ಇದಕ್ಕೆ ಸರ್ಕಾರ ಯಾವುದೇ ಉತ್ತರ ಕೊಟ್ಟಿರ್ಲಿಲ್ಲ. ನೋಡ್ತೀವಿ ಅಂದಿತ್ತು… ಬಟ್‌ ಭಾರತದ ಕಂಪನಿಗಳು ಮಾತ್ರ ವಿರೋಧ ವ್ಯಕ್ತಪಡಿಸಿದ್ವು. ಅಂದ್ಹಾಗೆ ಎಲೆಕ್ಟಿಕ್‌ ವಾಹನಗಳ ಮಾರಾಟ ಸದ್ಯ ಕಡಿಮೆ ಇದೆ. ಕಳೆದ ವರ್ಷ ಕೇವಲ ಒಟ್ಟು ಕಾರುಗಳ ಮಾರಾಟದಲ್ಲಿ 2% ಮಾತ್ರ ಎಲೆಕ್ಟ್ರಿಕ್‌ ಕಾರುಗಳು ಇದ್ವು. 2030ಕ್ಕೆ ಸರ್ಕಾರ ಇದನ್ನ 30%ಗೆ ಏರಿಕೆ ಮಾಡೋ ಗುರಿ ಹೊಂದಿದೆ. ಹೀಗಾಗಿ EV ಕಂಪನಿಗಳನ್ನ ಅಟ್ರ್ಯಾಕ್ಟ್‌ ಮಾಡೋಕೆ ನೋಡ್ತಿದೆ. ವಿನ್‌ಫಾಸ್ಟ್‌ ಕಳೆದ ತಿಂಗಳು ತಮಿಳುನಾಡಲ್ಲಿ 2 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡೋಕೆ ಒಪ್ಕೊಂಡಿತ್ತು. ಅದ್ರ ಭಾಗವಾಗಿ ಮೊದಲ 5 ವರ್ಷಕ್ಕೆ 500 ಮಿಲಿಯನ್‌ ಡಾಲರ್‌ ಸುರೀತಿದೆ. ಆಲ್ರೆಡಿ ಫ್ಯಾಕ್ಟರಿ ನಿರ್ಮಾಣ ಕಾರ್ಯ ಶುರುವಾಗಿದೆ. ಮುಂದಿನ ವರ್ಷದ ಮಧ್ಯದಲ್ಲಿ ಪ್ರೊಡಕ್ಷನ್‌ ಕೂಡ ಶುರು ಮಾಡ್ಕೋಬೇಕು ಅಂದ್ಕೊಂಡಿದೆ.

-masthmagaa.com

Contact Us for Advertisement

Leave a Reply