ಐಪಿಎಲ್‌ ಮೇಲೆ ಉಗ್ರರ ಕರಿ ನೆರಳು: ‌ವಿರಾಟ್‌ ಕೊಹ್ಲಿಯೇ ಟಾರ್ಗೆಟ್!

masthmagaa.com:

ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿಗೆ ಉಗ್ರ ಬೆದರಿಕೆ ಬಂದಿದೆ ಅನ್ನೊ ಆಘಾತಕಾರಿ ವಿಚಾರ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಐಪಿಎಲ್‌ ಟೂರ್ನಿಮೆಂಟ್‌ನ ಕ್ವಾಲಿಫೈಯರ್‌ ಪಂದ್ಯ ಆಡೋಕೆ ಆರ್‌ಸಿಬಿ ತಂಡ ಅಹ್ಮದಾಬಾದ್‌ಗೆ ತೆರಳಿದ್ದು, ಮ್ಯಾಚ್‌ ಮುನ್ನ ಅಹ್ಮದಾಬಾದ್‌ನ ಕಾಲೇಜ್‌ ಗ್ರೌಂಡ್‌ನಲ್ಲಿ ಅಭ್ಯಾಸ ನಡೆಸಬೇಕಿತ್ತು. ಆದ್ರೆ ಆರ್‌ಸಿಬಿ ಅಭ್ಯಾಸವನ್ನೆ ನಡೆಸಿಲ್ಲ. ಇದಕ್ಕೆ ಉಗ್ರದಾಳಿಯ ಭೀತಿ ಕಾರಣ ಅಂತ ಗೊತ್ತಾಗಿದೆ. ಈ ಬಗ್ಗೆ ಖುದ್ದು ಗುಜರಾತ್‌ ಪೊಲೀಸ್‌ ಅಧಿಕಾರಿ ವಿಜಯ್‌ ಸಿಂಗ್‌ ಜಾಲ್ವಾ ಹೇಳಿಕೆ ಕೊಟ್ಟಿದ್ದಾರೆ, ʻನಾವು ಈ ಬಗ್ಗೆ ಅವರಿಗೆ ಮಾಹಿತಿ ಕೊಟ್ಟಿದ್ವಿ. ಆದರೆ ರಾಜಸ್ಥಾನದವರು ನಾವು ಪ್ರಾಕ್ಟೀಸ್‌ಗೆ ಹೋಗ್ತೀವಿ ಪ್ರಾಬ್ಲಂ ಇಲ್ಲ ಅಂತೇಳಿದ್ರು. ಆದ್ರೆ ಆರ್‌ಸಿಬಿ ತಂಡ ಮಾತ್ರ ನಾವು ರಿಸ್ಕ್‌ ತಗೋಳೋಕೆ ಇಷ್ಟ ಪಡಲ್ಲ ಅಂತೇಳಿ ಅವರು ಅಭ್ಯಾಸ ಮಾಡಲಿಲ್ಲ ಅಂತ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಜೊತೆಗೆ ನಾಲ್ವರು ಉಗ್ರರ ಬಂಧನದ ಬಗ್ಗೆ ನಾವು ವಿರಾಟ್‌ ಕೊಹ್ಲಿಯವರಿಗೆ ಮಾಹಿತಿ ಕೊಟ್ಟಿದ್ವಿ. ಅವರು ನಮ್ಮ ದೇಶದ ಆಸ್ತಿ. ಹೀಗಾಗಿ ಅವರ ಭದ್ರತೆಯೇ ನಮಗೆ ಮೊದಲ ಪ್ರಯಾರಿಟಿ ಅಂತ ವಿಜಯ್‌ ಸಿಂಗ್‌ ತಿಳಿಸಿದ್ದಾರೆ. ಇನ್ನು ಉಗ್ರ ದಾಳಿಯ ಭೀತಿ ಬೆನ್ನಲ್ಲೇ ಆಟಗಾರರು ತಂಗಿರೊ ಹೊಟೇಲ್‌ಗೆ ಭಾರಿ ಪೋಲಿಸ್‌ ಬಂದೊಬಸ್ತ್‌ ನಿಯೋಜಿಸಲಾಗಿದೆ. ಜೊತೆಗೆ ಐಪಿಎಲ್‌ನಿಂದ ಮಾನ್ಯತೆ ಪಡೆದ ಸದಸ್ಯರಿಗೂ ಕೂಡ ಹೊಟೇಲ್‌ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅತ್ತ ರಾಜಸ್ತಾನ ತಂಡಕ್ಕೆ ಹೊಟೇಲ್‌ನಿಂದ ಗ್ರೌಂಡ್‌ಗೆ ತೆರಳಲು ಗ್ರೀನ್‌ ಕಾರಿಡಾರ್‌ ಮಾದರಿಯಲ್ಲಿ ಪೋಲಿಸ್‌ ಬಂದೋಬಸ್ತ್‌ ಮಾಡಲಾಗಿದೆ. ಅಂದ್ಹಾಗೆ ಎರಡು ದಿನಗಳ ಹಿಂದಷ್ಟೇ ಅಹ್ಮದಾಬಾದ್‌ ಏರ್‌ಪೋರ್ಟ್‌ನಲ್ಲಿ ಶ್ರೀಲಂಕಾ ಮೂಲದ ನಾಲ್ವರು ಐಎಸ್‌ ಶಂಕಿತ ಉಗ್ರರನ್ನ ಪೋಲಿಸರು ಅರೆಸ್ಟ್‌ ಮಾಡಿದ್ರು. ಏರ್‌ಪೋರ್ಟ್‌ನಲ್ಲಿ ಆರ್‌ಸಿಬಿ ಸೇರಿ ಮೂರು ತಂಡಗಳು ಬರೋಕೂ ಕೆಲವೇ ಹೊತ್ತಿಗೂ ಮುಂಚೆ ಈ ಘಟನೆ ನಡೆದಿತ್ತು. ವಿಚಾರಣೆ ವೇಳೆ ಈ ಶಂಕಿತ ಉಗ್ರರು ಪಾಕ್‌ ಮೂಲದ ಅಬು ಅನ್ನೊನಿಂದ ಹಣ ಪಡೆದು ಭಾರತದಲ್ಲಿ ದಾಳಿ ನಡೆಸೊ ಪ್ಲ್ಯಾನ್‌ ಹಾಕೊಂಡಿದ್ರು ಅನ್ನೊದು ಗೊತ್ತಾಗಿತ್ತು. ಜೊತೆಗೆ ಅಹ್ಮದಾಬಾದ್‌ನ ಕೆಲ ಪ್ರದೇಶಗಳಲ್ಲಿ ಸ್ಪೋಟಗಳನ್ನ ಇಟ್ಟಿದ್ದಾಗಿ ಒಪ್ಪಿಕೊಂಡಿದ್ರು. ಬಳಿಕ ಅವನ್ನೆಲ್ಲ ಪೊಲೀಸರು ಜಪ್ತಿ ಮಾಡಿದ್ರು. ಇದರ ನಡುವೆಯೇ ಈಗ ಈ ರೀತಿ ಬೆಳವಣಿಗೆಗಳು ಆಗ್ತಾ ಇವೆ.

-masthmagaa.com

Contact Us for Advertisement

Leave a Reply