ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಕಂಪನಿ ಇವೆಂಟ್‌! ಮೃತಪಟ್ಟ CEO!

masthmagaa.com:

ಕಂಪನಿಯೊಂದ್ರ ಸಿಲ್ವರ್‌ ಜುಬಿಲಿ ಅಥ್ವಾ ರಜತ ಮಹೋತ್ಸವ ಸಮಾರಂಭದಲ್ಲಿ ನಡೆದ ಅಪಘಾತದಲ್ಲಿ ಸಾಫ್ಟ್‌ವೇರ್ ಕಂಪನಿ ಒಂದ್ರ ಸಿಇಒ ಮೃತಪಟ್ಟಿರೋ ಘಟನೆ ವರದಿಯಾಗಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಅಮೆರಿಕ ಮೂಲದ 56 ವರ್ಷದ CEO ಸಂಜಯ್‌ ಶಾ ಮೃತಪಟ್ಟಿದ್ದಾರೆ. ಇವ್ರು Vistex ಅನ್ನೋ ಸಾಫ್ಟ್‌ವೇರ್‌ ಕಂಪನಿಯ CEO ಆಗಿದ್ರು. ಸಂಜಯ್‌ ಶಾ ಹಾಗೂ ಅವ್ರ ಸಹೋದ್ಯೋಗಿ 52 ವರ್ಷದ ರಾಜು, ಕೇಬಲ್‌ ಸಹಾಯದಿಂದ ನೇತಾಕಿದ್ದ ಕೇಜ್‌ ಒಳಗಿದ್ರು. ಕಾರ್ಯಕ್ರಮದಲ್ಲಿ ಇವ್ರಿಬ್ರು ಕ್ರೇನ್‌ ಸಹಾಯದಿಂದ ಸ್ಟೇಜ್‌ಗೆ ಬರ್ಬೇಕಿತ್ತು. ಆದ್ರೆ ಈ ಕೇಜ್‌ ಕೆಳಗಿಳಿಯೋ ಸಂದರ್ಭದಲ್ಲಿ, ಕ್ರೇನ್‌ಗೆ ಕಟ್ಟಿದ್ದ ಕೇಬಲ್‌ ತುಂಡಾಗಿದೆ. ಪರಿಣಾಮ ಕೇಜ್‌ ಸಮೇತ ಇಬ್ರೂ ಕಾಂಕ್ರೀಟ್‌ ಸ್ಟೇಜ್‌ ಮೇಲೆ ಬಿದ್ದಿದ್ದಾರೆ. ತಕ್ಷಣವೇ ಇಬ್ರನ್ನೂ ಆಸ್ಪತ್ರೆಗೆ ಕರ್ಕೊಂಡ್‌ ಹೋಗಲಾಯ್ತು. ಆದ್ರೆ ವಿಪರೀತವಾಗಿ ಗಾಯಗೊಂಡಿದ್ದ ಸಂಜಯ್‌ ಶಾ ಚಿಕಿತ್ಸೆ ಫಲಕಾರಿಯಾಗ್ದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಸಹೋದ್ಯೋಗಿ ರಾಜು ಕ್ರಿಟಿಕಲ್‌ ಕಂಡೀಷನ್‌ಲ್ಲಿದ್ದು, ಸದ್ಯ ಅವ್ರಿಗೆ ಟ್ರೀಟ್‌ಮೆಂಟ್‌ ನೀಡಲಾಗ್ತಿದೆ. ಇನ್ನು ಕಂಪನಿಯ ಅಧಿಕಾರಿಯೊಬ್ರು ನೀಡಿರೋ ಕಂಪ್ಲೈಂಟ್‌ ಮೇರೆಗೆ ರಾಮೋಜಿ ಫಿಲ್ಮ್‌ ಸಿಟಿಯ ಇವೆಂಟ್‌ ಮ್ಯಾನೇಜ್‌ಮೆಂಟ್‌ ಅಧಿಕಾರಿಗಳ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

-masthmagaa.com

Contact Us for Advertisement

Leave a Reply