ಅಮೆರಿಕದ ಅಧ್ಯಕ್ಷೀಯ ಕಣದಿಂದ ಹೊರಬಂದ ವಿವೇಕ್‌ ರಾಮಸ್ವಾಮಿ!

masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್‌ನಿಂದ ಇದೀಗ ರಿಪಬ್ಲಿಕನ್‌ ಪಾರ್ಟಿಯ ಕ್ಯಾಂಡಿಡೇಟ್‌, ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ ಹಿಂದಕ್ಕೆ ಸರಿದಿದ್ದಾರೆ. ಈ ಮೂಲಕ ಚುನಾವಣಾ ರೇಸ್‌ನಲ್ಲಿ ಡೊನಾಲ್ಡ್‌ ಟ್ರಂಪ್‌ ದಾರಿ ಇನ್ನಷ್ಟು ಸರಾಗವಾಗಿದೆ. ಚುನಾವಣೆಗೂ ಮೊದಲು ನಡೆಸಲಾಗೋ ಐಓವಾ ರಿಪಬ್ಲಿಕನ್‌ ಸಭೆಯಲ್ಲಿ ವಿವೇಕ್‌ ರಾಮಸ್ವಾಮಿಯವ್ರಿಗೆ ಕಡಿಮೆ ವೋಟ್‌ ಬಂದಿರೋದ್ರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ರಿಪಬ್ಲಿಕನ್‌ ಪಾರ್ಟಿಗೆ ಸೂಕ್ತ ಪ್ರತಿನಿಧಿಯನ್ನ ಚೂಸ್‌ ಮಾಡೋಕೆ ಈ ಐಓವಾ ಸಭೆ ನಡೆಸಲಾಗುತ್ತೆ. ಇದ್ರಲ್ಲಿ ಜನರೇ ಪಾರ್ಟಿಗೆ ಸೂಕ್ತ ಕ್ಯಾಂಡಿಡೇಟ್‌ ಯಾರಾದ್ರೆ ಒಳ್ಳೇದು ಅಂತ ಮಾತುಕತೆ ನಡೆಸಿ, ವೋಟ್‌ ಹಾಕಿ ಡಿಸೈಡ್‌ ಮಾಡ್ತಾರೆ. ನಂತ್ರ ಹೆಚ್ಚು ವೋಟ್‌ ಪಡೆದ ಅಭ್ಯರ್ಥಿ ಮುಂದಿನ ಪ್ರೈಮರೀಸ್‌ ಚುನಾವಣೆಗೆ ಸೆಲೆಕ್ಟ್‌ ಆಗ್ತಾರೆ. ಇದಾದ್ಮೇಲೂ ಪಾರ್ಟಿ ಒಳಗೇನೆ ಸಣ್ಣ ವೋಟಿಂಗ್‌ ನಡೆಯುತ್ತೆ. ಇಲ್ಲಿ ವಿನ್‌ ಆದವ್ರು, ರಿಪಬ್ಲಿಕನ್‌ ಪಾರ್ಟಿಯ ಫೈನಲ್ ಕ್ಯಾಂಡಿಡೇಟ್‌ ಆಗಿ ಚುನಾವಣೆಯಲ್ಲಿ ಜೋ ಬೈಡನ್‌ರ ಡೆಮೊಕ್ರೆಟಿಕ್‌ ಪಾರ್ಟಿಯನ್ನ ಎದುರಿಸ್ತಾರೆ.

-masthmagaa.com

Contact Us for Advertisement

Leave a Reply