ಪುಟಿನ್‌ ಆರೋಗ್ಯದಲ್ಲಿ ಏರುಪೇರು; ಯುದ್ದರಂಗಕ್ಕೆ ಪುಟಿನ್ ಸ್ನೇಹಿತನ ಮಕ್ಕಳು!

masthmagaa.com:

ರಷ್ಯಾ ಅಧ್ಯಕ್ಷ ಪುಟಿನ್‌ ಅವರ ಆರೋಗ್ಯದ ಬಗ್ಗೆ ದಿನಕ್ಕೊಂದು ಊಹಾಪೋಹಗಳು, ಅನುಮಾನಗಳು ಹರಿದಾಡ್ತಾನೇ ಇವೆ. ವರದಿ ಆಗ್ತಾನೇ ಇದೆ. ಇದೀಗ ಪುಟಿನ್‌, ಬೆಲರೂಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಶಂಖೋ ಜೊತೆಗೆ ಸಭೆ ನಡೆಸುವಾಗ ನೋವಿನಿಂದ ಬಳಲುತ್ತಿದ್ದರು ಅಂತ ವರದಿಯಾಗಿದೆ. ಪುಟಿನ್‌ ಆರೋಗ್ಯ ಅವರು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತಿದೆ. ಪುಟಿನ್ ಕಿಬ್ಬೊಟ್ಟೆಯ ನೋವಿದೆ ಅಂತ ಹೇಳಿದ್ರು. ಅಲ್ದೇ ಅವರು ಅದನ್ನು ತಕ್ಷಣಕ್ಕೆ ನಿಲ್ಲಿಸೋಕೆ ಆಗಲ್ಲ ಅಂತ ಸಭೆಯನ್ನ ಮುಂದೂಡಿದ್ರು ಅಂತ ಸುದ್ದಿ ಮಾಧ್ಯಮವೊಂದು ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಇತ್ತ ಇನ್ನೊಂದು ಕಡೆ ಚೆಚನ್ಯಾ ಪ್ರಾಂತ್ಯದ ಮುಖ್ಯಸ್ಥ, ಪುಟಿನ್‌ ಆಪ್ತ ರಂಜಾನ್‌ ಕಡಿರೋವ್‌ ತನ್ನ ಮೂವರು ಅಪ್ರಾಪ್ತ ಮಕ್ಕಳನ್ನ ಯುಕ್ರೇನ್‌ ಯುದ್ಧದಲ್ಲಿ ಹೋರಾಡೋಕೆ ಕಳುಹಿಸುಸ್ತಿರೋದಾಗಿ ಹೇಳಿದ್ದಾರೆ. ಯುಕ್ರೇನ್‌ ಯದ್ದದಲ್ಲಿ ಹಿನ್ನೆಡೆ ಅನುಭವಿಸ್ತಿರೋದಕ್ಕೆ ಮಿಲಿಟರಿ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿರೋ ಕಡಿರೋವ್‌, ರಷ್ಯಾ ಜನರಲ್‌ ಅಲೆಕ್ಸಾಂಡರ್‌ ಲ್ಯಾಪಿನ್‌ರನ್ನ mediocre ಅಂತ ಟೀಕಿಸಿದ್ದಾರೆ. ಅಲ್ದೇ ಅವರ ಹುದ್ದೆಯನ್ನ ಕಿತ್ತುಕೊಂಡು ಯುದ್ದಭೂಮಿಯಲ್ಲಿ ಹೋರಾಡೋಕೆ ಕಳುಹಿಸಬೇಕು ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply