ಭಾರತ ಮತ್ತು ಚೀನಾ, ನಮ್ಮ ಆಪ್ತರು ಹಾಗೂ ಪಾರ್ಟ್ನರ್‌ಗಳು: ವ್ಲಾಡಿಮಿರ್‌ ಪುಟಿನ್

masthmagaa.com:

ಭಾರತ ಮತ್ತು ಚೀನಾ, ನಮ್ಮ ಆಪ್ತರು ಹಾಗೂ ಪ್ರಮುಖ ಪಾರ್ಟ್ನರ್‌ಗಳು ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬಣ್ಣಿಸಿದ್ದಾರೆ. ಜೊತೆಗೆ ಈ ಎರಡು ಏಷ್ಯಾ ರಾಷ್ಟ್ರಗಳು ಯುಕ್ರೇನ್‌ ಜೊತೆಗಿನ ಸಂಘರ್ಷವನ್ನ ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳೊದಕ್ಕೆ ಯಾವಾಗ್ಲೂ ಒತ್ತು ನೀಡಿವೆ ಅಂತ ಹೇಳಿದ್ದಾರೆ. ಕಜಕ್‌ಸ್ತಾನ್‌ ರಾಜಧಾನಿ ಅಸ್ತಾನದಲ್ಲಿ ಮೊದಲʻರಷ್ಯಾ ಹಾಗೂ ಮಧ್ಯ ಏಷ್ಯಾ ಶೃಂಗಸಭೆʼ ನಡಿತಿದೆ. ಈ ಸಭೆಯಲ್ಲಿ ಮಾತಾಡೊ ವೇಳೆ ಪುಟಿನ್‌ ಎರಡು ದೇಶಗಳು ಯುಕ್ರೇನ್‌ ಯುದ್ದವನ್ನ ಮಾತುಕತೆ ಮೂಲಕ ಸ್ಟಾಪ್‌ ಮಾಡೋಕೆ ಪ್ರಯತ್ನ ಪಡ್ತಿವೆ. ಅವರಿಬ್ಬರು ನಮ್ಮ ಆಪ್ತರು ಅಂತ ಹೇಳಿದ್ದಾರೆ. ಇದೇ ವೇಳೆ ಯುಕ್ರೇನ್‌ ಮೇಲೆ ಕಳೆದ ವಾರದಂತೆ ಸಾಮೂಹಿಕ ದಾಳಿಗಳನ್ನ ಮಾಡೋ ಯಾವುದೇ ಪ್ಲ್ಯಾನ್‌ಗಳು ನಮಗೆ ಸದ್ಯಕ್ಕೆ ಇಲ್ಲ ಅಂತ ಪುಟಿನ್‌ ತಿಳಿಸಿದ್ದಾರೆ. ಹಾಗೂ ಯುಕ್ರೇನ್‌ನ್ನ ನಾಶ ಮಾಡೋ ಕೆಲಸವನ್ನ ನಾವಾಗೇ ಸೆಟ್‌ ಮಾಡಿಕೊಳ್ಳಲ್ಲ. ಅದು ಯುಕ್ರೇನ್‌ ಮೇಲೆ ಡಿಪೆಂಡ್‌ ಆಗಿರುತ್ತೆ. ಯುಕ್ರೇನ್‌ ಮೇಲಿನ ಕ್ರಮಕ್ಕೆ ಯಾವುದೇ ರಿಗ್ರೆಟ್‌ ಇಲ್ಲ. ನಾವು ಸರಿಯಾದ ಕ್ರಮವನ್ನೇ ತೆಗೆದುಕೊಂಡಿದ್ದೇವೆ ಅಂತ ಪುಟಿನ್‌ ತಮ್ಮ ಯುಕ್ರೇನ್‌ ದಾಳಿಯನ್ನ ಸಮರ್ಥಿಸಿಕೊಂಡಿದ್ದಾರೆ. ಇನ್ನೊಂದ್‌ ಕಡೆ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಪುಟಿನ್‌ ಜೊತೆ ಯುಕ್ರೇನ್‌ ವಿಚಾರವಾಗಿ ಮಾತಾಡೋಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ರು. ಈಗ ಇದಕ್ಕೆ ಪುಟಿನ್‌ ಪ್ರತಿಕ್ರಿಯಿಸಿದ್ದಾರೆ. ʻಯುಕ್ರೇನ್‌ ವಿಚಾರವಾಗಿ ನನ್ನ ಜೊತೆ ಮಾತಾಡೋಕೆ ಬೈಡೆನ್‌ ರೆಡಿ ಇದಾರಾ ಇಲ್ವಾ ಅಂತ ಅವ್ರನ್ನ ಕೇಳಬೇಕು. ನಿಜವಾಗಿ ಹೇಳಬೇಕಂದ್ರೆ ಮಾತುಕತೆಯ ಅವಶ್ಯಕತೆ ಇಲ್ಲʼ ಅಂತ ಪುಟಿನ್‌ ಹೇಳಿದ್ದಾರೆ. ಇತ್ತ ಯುಕ್ರೇನ್‌ ಯುದ್ದದ ಭಾಗವಾಗಿ ಸೇನಾ ಸಜ್ಜುಗೊಳಿಸೋಕೆ ಪುಟಿನ್‌ 3 ವಾರಗಳ ಹಿಂದೆನೇ ಅನೌನ್ಸ್‌ ಮಾಡಿದ್ರು. ಇದೀಗ ಇನ್ನು 2 ವಾರಗಳಲ್ಲಿ ಅದು ಪೂರ್ಣವಾಗಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply