ಕಿಮ್‌ ಜಾಂಗ್‌ಗೆ ಸಿಕ್ತು ಪುಟಿನ್‌ನಿಂದ ಐಷಾರಾಮಿ ಉಡುಗೊರೆ!

masthmagaa.com:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಮತ್ತು ರಷ್ಯಾ ಸರ್ವಾಧಿಕಾರಿ ವ್ಲಾಡಿಮಿರ್‌ ಪುಟಿನ್‌ ಕೇವಲ ಫ್ರೆಂಡ್ಸ್‌ ಮಾತ್ರವಲ್ಲ…ಬೆಸ್ಟ್‌ ಫ್ರೆಂಡ್ಸ್‌ ಆಗ್ಬಿಟ್ಟಿದ್ದಾರೆ. ಈಗ ಪುಟಿನ್‌ ತಮ್ಮ ದೋಸ್ತ್‌ ಕಿಮ್‌ಗೆ ಪರ್ಸನಲ್‌ ಬಳಕೆಗಾಗಿ ಒಂದು ಕಾರ್‌ನ್ನ ಗಿಫ್ಟ್‌ ಮಾಡಿದ್ದಾರೆ. ಹೀಗಂತ ರಷ್ಯಾ ಮೀಡಿಯಾಗಳು ರಿಪೋರ್ಟ್‌ ಮಾಡಿವೆ. ಈ ಮೂಲಕ ವಿಶ್ವಸಂಸ್ಥೆಯ ನಿಯಮವನ್ನ ಪುಟಿನ್‌ ಉಲ್ಲಂಘನೆ ಮಾಡಿದಾರೆ. ಯಾಕಂದ್ರೆ ಭದ್ರತಾಮಂಡಳಿಯ ನಿಯಮದ ಪ್ರಕಾರ, ಉತ್ತರ ಕೊರಿಯಾಗೆ ಐಷರಾಮಿ ಸರಕುಗಳನ್ನ ಮಾರಾಟ ಮಾಡುವಂತಿಲ್ಲ. ಎಕ್ಸ್‌ಪೋರ್ಟ್‌ ಮೇಲೆ ನಿಷೇಧ ಹೇರಲಾಗಿದೆ. ಇಷ್ಟಾದ್ರೂ ಪುಟಿನ್‌ ಐಷಾರಾಮಿ ಕಾರನ್ನ ಗಿಪ್ಟ್‌ ಮಾಡಿದ್ದಾರೆ. ಇನ್ನು ಪುಟಿನ್‌ ಕಳಿಸಿರೋ ಕಾರ್‌ ಯಾವ್ದು ಅಥ್ವಾ ಅದ್ರ ಶಿಪ್ಪಿಂಗ್‌ ಹೇಗ್‌ ಮಾಡಲಾಯ್ತು ಅನ್ನೋ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಅಂದ್ಹಾಗೆ ಈ ಕಿಮ್‌ ಜಾಂಗ್‌ಗೆ ಕಾರ್‌ಗಳು…ಬೈಕ್‌ಗಳು ಅಂದ್ರೆ ಬಹಳ ಹುಚ್ಚಂತೆ…ಸಿಕ್ಕಾಪಟ್ಟೆ ಕ್ರೇಜ್‌ ಇದೆಯಂತೆ. ಅವ್ರ ಬಳಿ ಐಷರಾಮಿ ಫಾರೀನ್‌ ವೆಹಿಕಲ್‌ಗಳ ದೊಡ್ಡ ಕಲೆಕ್ಷನ್ನೇ ಇದೆ ಎನ್ನಲಾಗಿದೆ. ಹೀಗಾಗಿ ಕಿಮ್‌ರ ಆಸೆ ತಣಿಸೋಕೆ ಪುಟಿನ್‌ ಕಾರ್‌ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply