ಪಾಶ್ಚಿಮಾತ್ಯ ದೇಶಗಳಿಗೆ ಪುಟಿನ್‌ನಿಂದ ಪರಮಾಣು ಯುದ್ಧದ ಎಚ್ಚರಿಕೆ!

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತೊಮ್ಮೆ ಪರಮಾಣು ಯುದ್ಧದ ಧಮ್ಕಿ ಹಾಕಿದ್ದಾರೆ. ʻಪಾಶ್ಚಿಮಾತ್ಯ ದೇಶಗಳು ಯುಕ್ರೇನ್‌ಗೆ ಸಪೋರ್ಟ್‌ ನೀಡೋಕೆ ತಮ್ಮ ಸೇನಾ ಪಡೆಗಳನ್ನ ಕಳಿಸಿದ್ರೆ ಸರಿ ಇರಲ್ಲ. ಇಂಡೈರೆಕ್ಟಾಗಿ ಪರಮಾಣು ಯುದ್ಧಕ್ಕೆ ನೀವು ಕರೆ ನೀಡ್ತಿದ್ದೀರಿ…ಅದಕ್ಕೆ ಪ್ರಚೋದಿಸ್ತಿದ್ದೀರಿʼ ಅಂತ ಕಿಡಿಕಾರಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮಾಕ್ರನ್‌ ʻNATO ಸದಸ್ಯರು ಸೇರಿ ತಮ್ಮ ಸೇನಾ ಪಡೆಯನ್ನ ಯುಕ್ರೇನ್‌ಗೆ ಕಳಿಸ್ತೀವಿ…ರಷ್ಯಾ ವಿರುದ್ಧದ ಯುದ್ಧದಲ್ಲಿ ಯುಕ್ರೇನ್‌ಗೆ ಸಾಥ್‌ ನೀಡ್ತೀವಿʼ ಅಂತ ಹೇಳಿದ್ರು. ಆದ್ರೆ ಫ್ರಾನ್ಸ್‌ನ ಈ ನಿರ್ಧಾರವನ್ನ ಅಮೆರಿಕ, ಜರ್ಮನಿ ಮತ್ತು ಬ್ರಿಟನ್‌ ತಕ್ಷಣವೇ ರಿಜೆಕ್ಟ್‌ ಮಾಡಿದ್ವು. ಈ ಬೆನ್ನಲ್ಲೇ ಪುಟಿನ್‌ ಈ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply