ಯುಕ್ರೇನ್‌ನಲ್ಲಿ ರಷ್ಯಾ ಪಾಸ್‌ಪೋರ್ಟ್‌ ಹೇರಿಕೆ ಯಶಸ್ವಿ!

masthmagaa.com:

ರಷ್ಯಾದಲ್ಲಿ ಮಾರ್ಚ್‌ 15ರಂದು ನಡೆದ ಮೊದಲ ದಿನದ ಸಾರ್ವತ್ರಿಕ ಚುನಾವಣೆ ವೋಟಿಂಗ್‌ ಕುರಿತು ಅಲ್ಲಿನ ಭ್ರಷ್ಟಾಚಾರ ವಿರೋಧಿ ಹೋರಾಟಗಾರೊಬ್ರು ಹೇಳಿಕೆ ನೀಡಿದ್ದಾರೆ. ರಷ್ಯಾ ಚುನಾವಣೆಯನ್ನ ಒಂದ್‌ ರೀತಿ ಡ್ರಾಮಾ…ನಕಲಿ ಚುನಾವಣೆ ಅಂತ ಕರೆದಿದ್ದಾರೆ. ರಷ್ಯಾದಲ್ಲಿ ಇನ್ಮುಂದೆ ಪುಟಿನ್‌ರದ್ದೇ ರಾಜ್ಯಭಾರ ನಡೆಯಲಿದೆ. ಪುಟಿನ್‌ ಸಾಯೋ ತನಕ ಅಥ್ವಾ ಅವ್ರನ್ನ ಬಲವಂತವಾಗಿ ಅಧಿಕಾರದಿಂದ ಹೊರಗೆ ದಬ್ಬೋ ತನಕ ರಷ್ಯಾದಲ್ಲಿ ಅವ್ರದ್ದೇ ಅಧಿಕಾರ ಇರೋ ಸಾಧ್ಯತೆ ಇದೆ ಅಂತ ಹೇಳಿದ್ದಾರೆ. ಅಂದ್ಹಾಗೆ ರಷ್ಯಾ ಮೊದಲ ದಿನದ ವೋಟಿಂಗ್‌ ನಂತ್ರ ಪುಟಿನ್‌ರೇ ಮತ್ತೊಮ್ಮೆ ಅಧ್ಯಕ್ಷರಾಗೋ ಸಾಧ್ಯತೆ ಇದೆ ಅಂತ ವಿಶ್ಲೀಷಿಸಲಾಗ್ತಿದೆ.

ಇನ್ನು ರಷ್ಯಾದಲ್ಲಿ ಒಂದು ಕಡೆ ಚುನಾವಣೆ ನಡೀತಿದ್ರೆ ಇನ್ನೊಂದ್ಕಡೆ ರಷ್ಯಾ ಯುಕ್ರೇನ್‌ ಮೇಲೆ ದಾಳಿ ಮಾಡ್ತಾನೆ ಇದೆ. ಯುಕ್ರೇನ್‌ ಬಂದರು ನಗರ ಒಡೆಸಾ ಮೇಲೆ ಶುಕ್ರವಾರ ಮಿಸೈಲ್‌ಗಳ ಮಳೆಯೇ ಸುರಿದಿದೆ. ಘಟನೆಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ ಅಂತ ತಿಳಿದುಬಂದಿದೆ. ಇನ್ನು ರಷ್ಯಾ ಆಕ್ರಮಿತ ಯುಕ್ರೇನ್‌ ಪ್ರದೇಶಗಳಲ್ಲಿ ವಾಸಿಸೋ ಯುಕ್ರೇನ್‌ ಪ್ರಜೆಗಳ ಮೇಲೆ ರಷ್ಯಾ ಸೇನೆಯ ದಬ್ಬಾಳಿಕೆ ಹೆಚ್ಚಾಗಿದೆ. ಅಲ್ಲಿರೋ ಯುಕ್ರೇನ್‌ ಪ್ರಜೆಗಳಿಗೆ ರಷ್ಯಾ ತಮ್ಮ ದೇಶದ ಪಾಸ್‌ಪೋರ್ಟ್‌ ಹೊಂದಲು ಫೋರ್ಸ್‌ ಮಾಡ್ತಿದೆ. ಪರಿಣಾಮ ಈಗ ರಷ್ಯಾ ಆಕ್ರಮಿತ ಯುಕ್ರೇನ್‌ನ ಬಹುತೇಕ ಜನರಲ್ಲಿ ರಷ್ಯಾ ಪಾಸ್‌ಪೋರ್ಟ್‌ ಕೈ ಸೇರಿದೆ. ಈ ಮೂಲಕ ಸಾವಿರಾರು ಯುಕ್ರೇನ್‌ ಪ್ರಜೆಗಳಿಗೆ ರಷ್ಯಾ ಪೌರತ್ವ ಪಡೆಯಲು ಬಲವಂತ ಮಾಡಲಾಗ್ತಿದೆ. ರಷ್ಯಾ ಪಾಸ್‌ಪೋರ್ಟ್‌ ಪಡೆಯದೆ ಯುಕ್ರೇನ್‌ರಿಗೆ ಇದೀಗ ಬೇರೆ ದಾರಿ ಕೂಡ ಇಲ್ಲ. ಯಾಕಂದ್ರೆ…ರಷ್ಯಾ ಪಾಸ್‌ಪೋರ್ಟ್‌ ನಿರಾಕರಿಸಿದ್ರೆ ಅಂಥವ್ರಿಂದ, ಮಕ್ಕಳ್ಳನ್ನ ತಮ್ಮೊಂದಿಗೆ ಇಟ್ಕೊಳ್ಳೋ ಹಕ್ಕನ್ನ ಕಸಿದುಕೊಳ್ಳಲಾಗುತ್ತೆ. ಅಲ್ದೇ ಅವ್ರನ್ನ ಜೈಲಿಗೆ ಅಟ್ಟಲಾಗುತ್ತೆ ಅಥ್ವಾ ಬೇರೆ ಯಾವ್ದಾದ್ರು ಕೆಟ್ಟ ಪರಿಣಾಮ ಎದುರಿಸ್ಬೇಕಾಗುತ್ತೆ. ಹೀಗಂತ ಅಮೆರಿಕ ಮೂಲದ ಅಸೋಸಿಯೇಟೆಡ್‌ ಪ್ರೆಸ್‌ ಅನ್ನೋ ನ್ಯೂಸ್‌ ಏಜೆನ್ಸಿ ತನಿಖೆ ಹೇಳಿದೆ.

-masthmagaa.com

Contact Us for Advertisement

Leave a Reply