ಭಾರತೀಯರಿಗೆ ವಿದೇಶದಲ್ಲೂ ಸಿಗಲಿದೆ ಅಮೆರಿಕ ವೀಸಾ ಅಪಾಯಿಂಟ್‌ಮೆಂಟ್‌!

masthmagaa.com:

ಅಮೆರಿಕ ವೀಸಾ ಬಯಸ್ತಿರೊ ಭಾರತೀಯರಿಗೆ ವೀಸಾ ವಿತರಣೆಯಲ್ಲಿ ವಿಪರೀತ ವಿಳಂಬ ಆಗ್ತಿದೆ. ಭಾರತದಲ್ಲಿ ಅಮೆರಿಕ ವೀಸಾ ಅಪಾಯಿಂಟ್‌ಮೆಂಟ್‌ ವೇಟಿಂಗ್‌ ಟೈಮ್‌ 500 ದಿನಕ್ಕಿಂತ ಹೆಚ್ಚಿದೆ. ಈ ಸಮಸ್ಯೆಯನ್ನ ಸರಿಮಾಡೋಕೆ ಅಮೆರಿಕ ಹಲವುರ ಕ್ರಮ ಅನುಸರಿಸ್ತಿದೆ. ಇದೀಗ ಭಾರತೀಯರು ಬೇರೆ ಬೇರೆ ದೇಶಕ್ಕೆ ಹೋದಾಗ ಅಲ್ಲಿನ ನಮ್ಮ ರಾಯಭಾರ ಕಚೇರಿಯಲ್ಲಿ ಕೂಡ ವೀಸಾ ಅಪಾಯಿಂಟ್‌ಮೆಂಟ್‌ ಪಡೀಬಹುದು ಅಂತ ಹೇಳಿದೆ. ಅಂದ್ರೆ ಉದಾಹರಣೆಗೆ ಬರೋ ತಿಂಗಳಲ್ಲಿ ಥೈಲ್ಯಾಂಡ್‌ಗೆ ಹೋಗ್ತಿರೋ ಭಾರತೀಯರು ಅಲ್ಲಿನ ಅಮೆರಿಕ ರಾಯಭಾರ ಕಚೇರಿಯಲ್ಲಿ B1/B2 ವೀಸಾ ಅಪಾಯಿಂಟ್‌ಮೆಂಟ್‌ ಪಡಿಬೋದು ಅಂತ ಭಾರತದಲ್ಲಿರೋ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.

-masthmagaa.com

Contact Us for Advertisement

Leave a Reply