ರಷ್ಯಾ ಮೇಲಿನ ಪ್ರತಿದಾಳಿ ಜಾಸ್ತಿ ಮಾಡ್ತೀವಿ: ಝೆಲೆನ್ಸ್ಕಿ

masthmagaa.com:

ನಿನ್ನೆಯಷ್ಟೆ ಮಾಸ್ಕೋ ನಗರದ ಮೇಲೆ ಯುಕ್ರೇನ್‌ ಡ್ರೋನ್‌ ದಾಳಿ ಮಾಡಿದ್ದು, ಎರಡು ಕಟ್ಟಡಗಳು ಹಾನಿಯಾಗಿತ್ತು. ಈ ಕುರಿತು ಮಾತಾಡಿರುವ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ, ʻಯುದ್ಧ ಈಗ ರಷ್ಯಾ ಕಡೆ ತಿರುಗಿದʼ ಅಂತ ಹೇಳಿದ್ದಾರೆ. ಅಂದ್ರೆ ರಷ್ಯಾ ಮೇಲೆ ಯುಕ್ರೇನ್‌ ತನ್ನ ಪ್ರತಿದಾಳಿಯನ್ನ ಹೆಚ್ಚಿಸಿದೆ ಅಂತ ವಾರ್ನ್‌ ಮಾಡಿದ್ದಾರೆ. ಈ ಪ್ರತಿಕ್ರಿಯೆ ಸ್ವಾಭಾವಿಕವಾಗಿದ್ದು, ಅನಿವಾರ್ಯ ಹಾಗೂ ನ್ಯಾಯಯುತವಾಗಿದೆ. ನಾವು ಅಂದ್ರೆ ಯುಕ್ರೇನ್‌ನವರು ಈಗ ಹಿಂದೆಂದಿಗಿಂತಲೂ ಸ್ಟ್ರಾಂಗ್‌ ಆಗಿದ್ದೇವೆ. ರಷ್ಯಾದ ಮೇಲೆ ಆಕ್ರಮಣ ಮಾಡ್ತೀವಿ ಅಂತ ಝೆಲೆನ್ಸ್ಕಿ ಎಚ್ಚರಿಸಿದ್ದಾರೆ. ಇನ್ನೊಂದ್‌ ಕಡೆ ಭಾನುವಾರ ರಾತ್ರಿಯಿಡೀ ಕ್ರೈಮಿಯಾ ಮೇಲೆ ಯುಕ್ರೇನ್‌ 25 ಡ್ರೋನ್‌ಗಳು ದಾಳಿ ನಡೆಸಲು ಪ್ರಯತ್ನಿಸಿತ್ತು, ನಾವು ಅವುಗಳನ್ನ ವಿಫಲಗೊಳಿಸಿದ್ದೇವೆ ಅಂತ ರಷ್ಯಾ ಹೇಳಿದೆ. ಮತ್ತೊಂದ್‌ ಕಡೆ ರಷ್ಯಾದಲ್ಲಿ ತೀವ್ರ ಚಂಡಮಾರುತ ಉಂಟಾಗಿದ್ದು, ಭಾರಿ ಗಾಳಿಗೆ ಮರಗಳು ಬಿದ್ದು ಕನಿಷ್ಠ 8 ಜನ ಮೃತಪಟ್ಟು, 10 ಜನ ಗಾಯಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply