ಪುಟಿನ್‌ ಅಧಿಕೃತ ನಿವಾಸದ ಬಳಿ ಅಗ್ನಿ ಅಪಘಾತ!

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರ ಅಧಿಕೃತ ನಿವಾಸ ಕ್ರೆಮ್ಲಿನ್‌ ಹಾಗೂ ವ್ನುಕೊವೊ ವಿಮಾನ ನಿಲ್ದಾಣದ ನಡುವಿನ ಮಾಸ್ಕೋದ ಒಡಿಂಟ್ಸೊವೊದಲ್ಲಿ ಗೋಡೌನ್‌ ಒಂದ್ರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅಂತ ರಷ್ಯಾ ಹೇಳಿದೆ. ನಿನ್ನೆ ತಡರಾತ್ರಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಘಾತಕ್ಕೆ ಕಾರಣ ಏನು ಅನ್ನೋದನ್ನ ರಷ್ಯಾ ಹೇಳಿಲ್ಲ. ಅಂದ್ಹಾಗೆ ಇತ್ತೀಚೆಗೆ ಮಾಸ್ಕೋ ಹಾಗೂ ಕ್ರೆಮ್ಲಿನ್‌ ಸುತ್ತಾಮುತ್ತಾ ಯುಕ್ರೇನ್‌ ಡ್ರೋನ್‌ಗಳ ಹಾರಾಟ ಹೆಚ್ಚಾಗುತ್ತಿದ್ದು, ಅವುಗಳನ್ನ ಹೊಡೆದುರುಳಿಸಲಾಗಿದೆ ಅಂತ ರಷ್ಯಾ ಹೇಳಿತ್ತು. ನಿನ್ನೆಯಷ್ಟೆ ರಷ್ಯಾವನ್ನ ಗುರಿಯಾಗಿಸಿ ಯುಕ್ರೇನ್ ನಡೆಸುತ್ತಿರುವ ಡ್ರೋನ್‌ ದಾಳಿಯಿಂದ ರಷ್ಯಾದ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಿತ್ತು. ಜೊತೆಗೆ ಮಾಸ್ಕೊದ ನೈರುತ್ಯದ ಕಲುಗಾ ಪ್ರದೇಶದಲ್ಲಿ ಒಂದು ಡ್ರೋನ್‌ ಮತ್ತು ಇನ್ನೊಂದನ್ನ ಮಾಸ್ಕೋ ರಿಂಗ್ ರಸ್ತೆಯ ಬಳಿ ಹೊಡೆದುರುಳಿಸಲಾಗಿದೆ. ಯಾವುದೇ ಜೀವಹಾನಿ ಅಥವಾ ಅಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ. ಯುಕ್ರೇನ್ ಈ ಡ್ರೋನ್‌ ದಾಳಿ ನಡೆಸಿದೆ ಅಂತ ರಷ್ಯಾ ರಕ್ಷಣಾ ಸಚಿವಾಲಯ ಆರೋಪಿಸಿದೆ. ಇದೀಗ ಬೆಂಕಿ ಕಾಣಿಸಿಕೊಂಡಿರೋದಕ್ಕೆ ಯುಕ್ರೇನ್‌ನ ಪ್ರತಿದಾಳಿ ಕಾರಣ ಇರ್ಬೋದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಆದ್ರೆ ಈ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.

-masthmagaa.com

Contact Us for Advertisement

Leave a Reply