ನಾನು ಬಂದನವನ್ನ ಎದುರಿಸೋಕೆ ಮಾನಸಿಕವಾಗಿ ಸಿದ್ಧ ಎಂದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌!

masthmagaa.com:

ಹಲವು ಕೇಸ್‌ಗಳಲ್ಲಿ ಬಂಧನ ಭೀತಿ ಫೇಸ್‌ ಮಾಡ್ತಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವ್ರು ಪೊಲೀಸರ ಕೈಗೆ ಸಿಗದೆ ಕಣ್ಣಾಮುಚ್ಚಾಲೆ ಆಡ್ತಿದಾರೆ. ಜೊತೆಗೆ ಖಾನ್‌ರ ಬೆಂಬಲಿಗರು ಕೂಡ ತಮ್ಮ ನಾಯಕನನ್ನು ಬಂಧಿಸ್ತಾರೆ ಅಂತ ಖಾನ್‌ರ ನಿವಾಸವನ್ನ ಸುತ್ತುವರೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಖಾನ್‌ರನ್ನ ಬಂಧಿಸಲು ಬಂದಿದ್ದ ಪೊಲೀಸರು ಹಾಗೂ ಖಾನ್‌ರ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ. ಖಾನ್‌ ಬೆಂಬಲಿಗರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಹಲವು ಪೊಲೀಸರು ಗಾಯಗೊಂಡಿದ್ದಾರೆ. ಜೊತೆಗೆ ಬೆಂಬಲಿಗರನ್ನ ಚದುರಿಸಲು ಪೊಲೀಸರು ಟಿಯರ್‌ಗ್ಯಾಸ್‌ನ್ನ ಬಳಸಿದ್ದಾರೆ ಅಂತ ವರದಿಯಾಗಿದೆ. ಇತ್ತ ಮನೆಯೊಳಗೆ ಕೂತಿರುವ ಇಮ್ರಾನ್‌ ತಮ್ಮ ಬೆಂಬಲಿಗರಿಗೆ ವಿಡಿಯೋ ಮೆಸೇಜ್‌ ಒಂದನ್ನ ನೀಡಿದ್ದಾರೆ. ನನ್ನನ್ನು ಬಂಧಿಸಲು ಪೊಲೀಸರು ಬಂದಿದ್ದಾರೆ. ಇಮ್ರಾನ್ ಜೈಲಿಗೆ ಹೋದರೆ ಜನರು ನಿದ್ದೆ ಮಾಡ್ತಾರೆ ಅಂತ ಅವ್ರು ಭಾವಿಸುತ್ತಾರೆ. ಆದರೆ ನೀವು ಅವರ ಊಹೆ ತಪ್ಪು ಅಂತ ಸಾಬೀತುಪಡಿಸಬೇಕು, ಜನರು ಜೀವಂತವಾಗಿದಾರೆ ಅಂತ ನೀವು ತೋರಿಸಬೇಕು. ಅಷ್ಟೆ ಅಲ್ದೆ ಅವ್ರು ನನ್ನನ್ನ ಜೈಲಿಗೆ ಹಾಕಿದ್ರೂ ಅಥ್ವಾ ಕೊಂದ್ರೂ ಸಹ ಇಮ್ರಾನ್‌ ಇಲ್ಲದೆಯೂ ನೀವು ನಿಮ್ಮ ಹಕ್ಕು ಸ್ವಾತಂತ್ರ್ಯಕ್ಕಾಗಿ ಹೋರಾಟ ಮುಂದುವರೆಸ್ಬೇಕು ಅಂತ ಖಾನ್‌ ತಮ್ಮ ಬೆಂಬಲಿಗರಿಗೆ ಕರೆಕೊಟ್ಟಿದ್ದಾರೆ. ನಾನು ಬಂಧನವನ್ನ ಫೇಸ್‌ ಮಾಡೋಕೆ ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಮನೆಯ ಹೊರಗಡೆ ಇರೋದು ಬರಿ ಪೊಲೀಸರಲ್ಲ ಅವರ ಜೊತೆ ಸೇನೆ ಕೂಡ ಇದೆ. ಹೀಗಾಗಿ ಅವ್ರು ನನ್ನನ್ನ ಬಂಧಿಸುತ್ತಾರೆ ಅನ್ನೊದು ನನಗೆ ಈಗಾಗಲೇ ತಿಳಿದಿದೆ. ನನಗೆ ಕೊಲೆ ಬೆದರಿಕೆ ಇರುವ ಕಾರಣ ನಾನು ಕೋರ್ಟ್‌ಗೆ ಹಾಜಾರಾಗಿಲ್ಲ. ನನ್ನನ್ನ ಮತ್ತು ನನ್ನ ಪಕ್ಷವನ್ನ ಮುಗಿಸ್ಬೇಕು ಅಂತ ಪಿತೂರಿ ಮಾಡಲಾಗಿದೆ ಅಂತ ಖಾನ್‌ ಹೇಳಿದ್ದಾರೆ. ಇನ್ನೊಂದ್‌ ಕಡೆ ಪಾಕಿಸ್ತಾನಿ ಅಧ್ಯಕ್ಷ, ಪ್ರಧಾನಿ, ಸಚಿವರು ಹಾಗೂ ಕ್ಯಾಬಿನೆಟ್‌ ಸದಸ್ಯರು ಸೇರಿದಂತೆ ಜಡ್ಜ್‌ ಹಾಗೂ ಮಿಲಿಟರಿ ಅಧಿಕಾರಿಗಳು ಕಾಸ್ಟ್ಲಿ ತೋಶಾಖಾನ ಉಡುಗೊರೆಗಳನ್ನ ತೆಗೆದುಕೊಳ್ಳದಂತೆ ಅಲ್ಲಿನ ಸರ್ಕಾರ ಬ್ಯಾನ್‌ ಮಾಡಿದೆ. 300 ಡಾಲರ್‌ ಅಂದ್ರೆ ಸುಮಾರು 24.6 ಸಾವಿರ ರೂಪಾಯಿಗಿಂತ ಹೆಚ್ಚು ಬೆಲೆಯುಳ್ಳ ಗಿಫ್ಟ್‌ಗಳನ್ನ ತೆಗೆದುಕೊಳ್ಳದಂತೆ ನಿಷೇಧಿಸಿರೋದಾಗಿ ಅಲ್ಲಿನ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply