ಭಾರತದ RAW ವಿರುದ್ದ ವರದಿ ಮಾಡಿದ ವಾಷಿಂಗ್‌ಟನ್‌ ಪೋಸ್ಟ್‌!

masthmagaa.com:

ಭಾರತದ ಗುಪ್ತಚರ ಸಂಸ್ಥೆ ರಾ ವಿರುದ್ದ ಪಾಶ್ಚಿಮಾತ್ಯ ಮಾಧ್ಯಮಗಳ ಆರೋಪ ಮುಂದುವರೆದಿದೆ. ಈಗ ಆಸ್ಟ್ರೇಲಿಯಾದಲ್ಲೂ ಭಾರತದ ರಾ ಅಧಿಕಾರಿಗಳು ಕಾರ್ಯಾಚರಣೆ ಮಾಡ್ತಿದ್ರು. ಅಮೇಲೆ ಸಿಕ್ಕಿ ಬಿದ್ದಿದ್ರು ಅಂತ ಅಮೆರಿಕದ ವಾಷಿಂಗ್‌ಟನ್‌ ಪೋಸ್ಟ್‌ ಸ್ಪೋಟಕ ಆರೋಪ ಮಾಡಿದೆ. ಇದೇ ಕಾರಣಕ್ಕೆ 2020ರಲ್ಲಿ ಭಾರತದ ಇಬ್ಬರು RAW ಅಧಿಕಾರಿಗಳನ್ನ ಆಸ್ಟ್ರೇಲಿಯಾ ದೇಶದಿಂದ ಹೊರಹಾಕಿತ್ತು ಅಂತ ಆ ಪತ್ರಿಕೆ ತಿಳಿಸಿದೆ. ಅಲ್ದೆ ಆಸ್ಟ್ರೇಲಿಯಾದಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಹಾಗೂ ಗೂಡಚರ್ಯೆ ನಿಲ್ಸೋಕೆ ಆಸ್ಟ್ರೇಲಿಯಾ ಈ ರೀತಿ ಮಾಡ್ತು ಅಂತ ವರದಿಯಲ್ಲಿ ಉಲ್ಲೇಖ ಮಾಡಿದೆ. ಅಂದ್ಹಾಗೆ 2021ರಲ್ಲಿ ಆಸ್ಟ್ರೇಲಿಯಾದ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಮೈಕ್‌ ಬರ್ಗೆಸ್‌, ಆಸ್ಟ್ರೇಲಿಯಾದಲ್ಲಿ ಫಾರಿನ್‌ ಏಜೆಂಟ್‌ರು 2020ರಲ್ಲಿ ಕಾರ್ಯಚರಣೆ ನಡೆಸ್ತಿದ್ರು. ಗುಪ್ತಚರರ ಗುಂಪೊಂದು ಆಸ್ಟ್ರೇಲಿಯಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡ್ತಿದೆ. ಆಸ್ಟ್ರೇಲಿಯಾದ ರಾಜಕೀಯ ನಾಯಕರ ನಡುವಿನ ಸಂಬಂಧಗಳನ್ನ ಟಾರ್ಗೆಟ್‌ ಮಾಡ್ತಿದೆ…. ಇಲ್ಲಿನ ಫಾರೀನ್‌ ಎಂಬಸಿ, ಪೊಲೀಸ್‌ ಸರ್ವೀಸ್‌ ಮೇಲೂ ಹದ್ದಿನಕಣ್ಣಿಟ್ಟಿದೆ. ಇಲ್ಲಿರೋ ಸಮುದಾಯಗಳನ್ನ ಕೂಡ ಮಾನಿಟರ್‌ ಮಾಡ್ತಿದೆ. ಆಸ್ಟ್ರೇಲಿಯಾದ ವ್ಯಾಪಾರಕ್ಕೆ ಸಂಬಂಧಪಟ್ಟ ಕೆಲ ಸೂಕ್ಷ್ಮ ಮಾಹಿತಿ ಪಡೆಯೋಕೆ ಪ್ರಯತ್ನಿಸಿದೆ ಅಂತೇಳಿದ್ರು. ಆದ್ರೆ ಕಾರ್ಯಚರಣೆ ನಡೆಸಿದ್ದ ಏಜೆಂಟರು ಯಾವ ದೇಶಕ್ಕೆ ಸೇರಿದವ್ರು ಅನ್ನೋದನ್ನ ಬರ್ಗೆಸ್‌ ರಿವೀಲ್‌ ಮಾಡಿರಲಿಲ್ಲ. ಕೆಲವರು ಅದು ಚೀನಾ ಇರಬೋದಾ ಅನ್ನೋ ಅನುಮಾನವನ್ನೂ ವ್ಯಕ್ತಪಡಿಸಿದ್ರು. ಯಾಕಂದ್ರೆ ಇತ್ತೀಚಿಗೆ ಆಸ್ಟ್ರೇಲಿಯಾ ಮತ್ತು ಚೀನಾ ಸಂಬಂಧ ಅಷ್ಟೇನೂ ಉತ್ತಮವಾಗಿರಲಿಲ್ಲ. ಹೀಗಾಗಿ ಚೀನಾ ಮೇಲೆ ಇದರ ಆರೋಪ ಇತ್ತು. ಆದ್ರೆ ಈಗ ಇವರ ಹೇಳಿಕೆಗಳನ್ನ ಇಟ್ಕೊಂಡು ವಾಷಿಂಗ್‌ಟನ್‌ ಪೋಸ್ಟ್‌ ಮೈಕ್‌ ಬರ್ಗೆಸ್‌ ಹೇಳ್ತಿರೋ ಏಜೆಂಟರು ಬೇರೆ ಯಾರೂ ಅಲ್ಲ… ಅದು ಭಾರತದ RAW ಅಧಿಕಾರಿಗಳು ಅಂತ ರಿಪೋರ್ಟ್‌ ಮಾಡಿದೆ. ಅಲ್ದೇ ಆಸ್ಟ್ರೇಲಿಯಾ ಜೊತೆಗೆ ಜರ್ಮನಿ ಕೂಡ ಈ ಹಿಂದೆ ಭಾರತದ RAW ಅಧಿಕಾರಿಗಳನ್ನ ಬುಡಸಮೇತ ಕಿತ್ತೆಸೆಯಲು ಸಾಕಷ್ಟು ಅರೆಸ್ಟ್‌ಗಳನ್ನ ಮಾಡಿದೆ. ಬ್ರಿಟನ್‌ನಲ್ಲಿರೋ ಸಿಖ್‌ ಸಮುದಾಯಗಳ ಮೇಲೆ RAW ನಿಗಾ ವಹಿಸ್ತಿತ್ತು, ಸೋ ಇದೇ ವಿಚಾರವಾಗಿ ಬ್ರಿಟನ್‌ನ ಗುಪ್ತಚರ ಸಂಸ್ಥೆ MI5 ಭಾರತಕ್ಕೆ ಎಚ್ಚರಿಕೆ ಕೂಡ ನೀಡಿತ್ತು ಅಂತ ವಾಷಿಂಗ್‌ಟನ್‌ ಪೋಸ್ಟ್ ಹೇಳಿದೆ. ಅತ್ತ ಅಮೆರಿಕದ ABC ನ್ಯೂಸ್‌ ಕೂಡ ಈ ಬಗ್ಗೆ ರಿಪೋರ್ಟ್‌ ಮಾಡಿದ್ದು, ಆಸ್ಟ್ರೇಲಿಯಾದ ವ್ಯಾಪಾರ, ಭದ್ರತೆ ಮತ್ತು ರಕ್ಷಣಾ ಪ್ರಾಜೆಕ್ಟ್‌ಗಳಿಗೆ ಸಂಬಂಧಿಸಿದ ಕೆಲ ಸೂಕ್ಷ್ಮ ಮಾಹಿತಿಯನ್ನ ಭಾರತದ RAW ಅಧಿಕಾರಿಗಳು ಟಾರ್ಗೆಟ್‌ ಮಾಡಿದ್ರು ಅಂತ ಆರೋಪಿಸಿದೆ. ಆದ್ರೆ ಈ ಆರೋಪದ ಬಗ್ಗೆ ಆಸ್ಟ್ರೇಲಿಯಾ ಭಾರತದ ವಿರುದ್ದ ನೇರವಾಗಿ ಯಾವುದೇ ಕಮೆಂಟ್‌ ಮಾಡಿಲ್ಲ. ಬದಲಿಗೆ ಆಸ್ಟ್ರೇಲಿಯಾದಲ್ಲಿ ವಿದೇಶಿ ಹಸ್ತಕ್ಷೇಪಗಳನ್ನ ತಡೆಯೋಕೆ ನಾವು ಕಟಿಬದ್ದರಾಗಿದ್ದೇವೆ ಅಂತ ಹೇಳಿದೆ.

ಇತ್ತ ಪಾಶ್ಚಿಮಾತ್ಯ ಮಾಧ್ಯಮಗಳ ಈ ಆರೋಪಕ್ಕೆ ಭಾರತದ ವಿದೇಶಾಂಗ ವಕ್ತಾರ ರಣಧೀರ್‌ ಜೈಸ್ವಾಲ್‌ ರಿಯಾಕ್ಟ್‌ ಮಾಡಿದ್ದಾರೆ. ʻಕೇವಲ ಆಸ್ಟ್ರೇಲಿಯಾದ ವಿಚಾರ ಅಲ್ಲ. ಇಂಥ ತುಂಬಾ ಸೀರಿಯಸ್‌ ಮ್ಯಾಟರ್‌ಗಳಲ್ಲಿ ವಾಷಿಂಗ್‌ಟನ್‌ ಪೋಸ್ಟ್‌ ಇದೇ ರೀತಿ ಆಧಾರರಹಿತ ಆರೋಪಗಳನ್ನ ಮಾಡಿದೆ. ಈ ರೀತಿ ಊಹಿಸ್ಕೊಂಡು, ಕಥೆ ಕಟ್ಟಿ, ಬೇಜವಾಬ್ದಾರಿ ಲೇಖನ ಬರೆದ್ರೆ ಅದರಿಂದ ಏನೂ ಪ್ರಯೋಜನ ಆಗಲ್ಲʼ ಅಂತ ಭಾರತ ಸರ್ಕಾರದ ಅಧಿಕೃತ ವಕ್ತಾರ ರಾ ಮೇಲಿನ ಆರೋಪವನ್ನ ಅಲ್ಲಗಳೆದಿದ್ದಾರೆ. ಇತ್ತ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ರನ್ನ ಈ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದ್ರು, ಆದ್ರೆ ʻಗುಪ್ತಚರ ವಿಷಯದ ಬಗ್ಗೆ ನಾನು ಕಮೆಂಟ್‌ ಮಾಡಲ್ಲʼ ಅಂತ ಅಲ್ಬೀನೀಸ್‌ ಹೇಳಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪ್ರಧಾನಿ ಜಾಣತನ ಪ್ರದರ್ಶನ ಮಾಡಿದ್ದಾರೆ. ಸ್ನೇಹಿತ್ರೇ ಭಾರತದ ವಿರುದ್ದ ಯಾಕೆ ಆಸ್ಟ್ರೇಲಿಯಾ ಆರೋಪ ಮಾಡಿಲ್ಲ ಅಂದ್ರೆ ಮೊದಲಿಗೆ ಭಾರತ ಆಸ್ಟ್ರೇಲಿಯಾಗೆ ಕ್ಲೋಸ್‌ ಫ್ರೆಂಡ್. ಎರಡೂ ದೇಶಗಳು ಚೀನಾವನ್ನ ಸಮಾನ ಶತ್ರುಗಳು ಅಂತ ನೋಡ್ತವೆ. ಹೀಗಾಗಿನೇ ಕ್ವಾಡ್‌ ಕೂಟದಲ್ಲಿ ಜೊತೆಗೆ ಇದ್ವು. ಸೋ ಕೆನಡಾ ರೀತಿಯಲ್ಲಿ ಭಾರತದ ವಿರುದ್ದ ಮಾತಾಡಿದ್ರೆ ಮುಂದೆ ಭಾರತದ ವೈರತ್ವ ಕಟ್ಕೋಬೇಕಾಗುತ್ತೆ. ಹಾಗೊಂದು ವೇಳೆ ಆದ್ರೆ ಚೀನಾ ಜೊತೆಗೆ ಭಾರತವನ್ನೂ ಎದುರಿಸಬೇಕಾಗುತ್ತೆ. ಜೊತೆಗೆ ವ್ಯಾಪಾರ ಮತ್ತು ಅನೇಕ ಕ್ಷೇತ್ರಗಳಲ್ಲಿ ಭಾರತದ ಸಹಕಾರ ಸಿಗದೇ ಇರೋ ಚಾನ್ಸ್‌ ಇರುತ್ತೆ.. ಈ ಎಲ್ಲಾ ಕಾರಣದಿಂದ ಸಂಬಂಧ ಕೆಡಿಸಿಕೊಂಡ್ರೆ ಚೆನ್ನಾಗಿರಲಲ್ಲ ಅಂತೇಳಿ ಆಸ್ಟ್ರೇಲಿಯಾ ಈ ರೀತಿ ಹೇಳಿರಬೋದು ಅಂತಲೂ ಈಗ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply