ಮೊಜಾಂಬಿಕ್‌ನಲ್ಲಿ ʻಮೇಡ್‌ ಇನ್‌ ಇಂಡಿಯಾʼ ರೈಲಿನಲ್ಲಿ ಪ್ರಯಾಣಿಸಿದ ಜೈಶಂಕರ್‌!

masthmagaa.com:

ಪಶ್ಚಿಮ ಆಫ್ರಿಕಾದ ಮೊಜಾಂಬಿಕ್‌ ಪ್ರವಾಸದಲ್ಲಿರುವ ಕೇಂದ್ರ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವ್ರು ʻಮೇಡ್‌ ಇನ್‌ ಇಂಡಿಯಾʼ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಉಗಾಂಡದಿಂದ ಮೊಜಾಂಬಿಕ್‌ಗೆ ಬಂದಿಳಿದಿರುವ ಜೈಶಂಕರ್‌ ಮೂರು ದಿನಗಳ ಕಾಲ ಮೊಜಾಂಬಿಕ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಮೊಜಾಂಬಿಕ್‌ ಅಧ್ಯಕ್ಷರನ್ನ ಭೇಟಿ ಮಾಡಿ ಉಭಯ ದೇಶಗಳ ದ್ವಿಪಕ್ಷೀಯ ಸಹಕಾರವನ್ನ ಬಲಪಡಿಸುವ ಕುರಿತು ಜೈಶಂಕರ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೊಜಾಂಬಿಕ್‌ನಲ್ಲಿ ಕಾರ್ಯನಿರ್ವಹಿಸ್ತಿರೋ ಭಾರತ ತಯಾರಿಸಿರುವ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಅಲ್ದೇ ರೈಲ್ವೆ ನೆಟ್‌ವರ್ಕ್‌ಗಳನ್ನ ವಿಸ್ತರಿಸಲು ಭಾರತದ ಸಹಕಾರದ ಕುರಿತು ಅಲ್ಲಿನ ರೈಲ್ವೆ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಮೊಜಾಂಬಿಕ್‌ಗೆ ಭೇಟಿ ನೀಡಿರುವ ಮೊದಲ ಭಾರತೀಯ ವಿದೇಶಾಂಗ ಸಚಿವ ಅಂತ ಜೈಶಂಕರ್‌ ಕರೆಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply