ಆಕಾಶದಲ್ಲಿ ಸ್ಪೋಟಗೊಂಡ ಮಸ್ಕ್‌ರ ಬೃಹತ್‌ ಸ್ಟಾರ್‌ಶಿಪ್‌ ರಾಕೆಟ್‌!

masthmagaa.com:

ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಜನರನ್ನ ಕರೆದುಕೊಂಡು ಹೋಗಿ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನಡಿ ಬರೆಯಬೇಕು ಅನ್ನೊ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ರ ಕನಸಿಗೆ ಆರಂಭದಲ್ಲೇ ಹಿನ್ನಡೆಯಾಗಿದೆ. ಮಸ್ಕ್‌ ಒಡೆತನದ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌X ನಿರ್ಮಾಣ ಮಾಡಿದ್ದ ವಿಶ್ವದ ಅತಿದೊಡ್ಡ ರಾಕೆಟ್‌ ʻಸ್ಟಾರ್‌ಶಿಪ್‌ʼ ಮೊದಲ ಪರೀಕ್ಷಾರ್ಥ ಉಡಾವಣೆಯಲ್ಲೇ ಸ್ಪೋಟಗೊಂಡಿದೆ. ಚಂದ್ರ ಹಾಗೂ ಮಂಗಳನ ಅಂಗಳದಲ್ಲಿ ಗಗನಯಾತ್ರಿಗಳನ್ನ ತಲುಪಿಸಲು ಉದ್ದೇಶಿಸಿ ಈ ರಾಕೆಟ್‌ನ್ನ ಅಭಿವೃದ್ದಿ ಪಡಿಸಲಾಗಿತ್ತು. ಆದ್ರೆ, ಉಡಾವಣೆಯಾದ ಕೇವಲ 4 ನಿಮಿಷದಲ್ಲಿ ರಾಕೆಟ್‌ ಸ್ಪೋಟಗೊಂಡಿದೆ. ಸ್ಟಾರ್‌ಶಿಪ್‌ ರಾಕೆಟ್‌ ಸ್ಪೋಟಗೊಂಡು ಛಿದ್ರಛಿದ್ರವಾಗಿ ಹೊಗೆ ತುಂಬಿಕೊಂಡಿರೊ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಂದ್ಹಾಗೆ ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಸ್ಪೇಸ್‌Xನ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ ರಾಕೆಟ್‌ ಲಾಂಚ್ ಮಾಡಲಾಗಿತ್ತು. ಉಡಾವಣೆಗೊಂಡ 3 ನಿಮಿಷಗಳ ಬಳಿಕ ಮೊದಲ ಹಂತದ ರಾಕೆಟ್‌ ಬೂಸ್ಟರ್‌ನಿಂದ ಕ್ಯಾಪ್ಸುಲ್‌ ಬೇರ್ಪಡುವಂತೆ ನಿಗದಿ ಪಡಿಸಲಾಗಿತ್ತು. ಆದರೆ ಈ ಬೇರ್ಪಡುವ ಹಂತ ಫೇಲ್‌ ಆಗಿದ್ದು, ರಾಕೆಟ್‌ ಆಕಾಶದಲ್ಲೇ ಸ್ಪೋಟಗೊಂಡಿದೆ. ಇನ್ನು ಟೆಸ್ಟ್‌ ಲಾಂಚ್‌ ಆಗಿದ್ದರಿಂದ ರಾಕೆಟ್‌ನಲ್ಲಿ ಯಾವುದೇ ಸ್ಯಾಟ್‌ಲೈಟ್‌ ಅಥ್ವಾ ಗಗನಯಾತ್ರಿಗಳು ಇರಲಿಲ್ಲ. ಇದ್ರಿಂದ ದೊಡ್ಡ ಹಾನಿ ತಪ್ಪಿದಂತಾಗಿದೆ. ರಾಕೆಟ್‌ನ ಪ್ರಾಯೋಗಿಕ ಉಡಾವಣೆಯನ್ನ ಏಪ್ರಿಲ್‌ 18 ರಂದೇ ನಿಗದಿ ಪಡಿಸಲಾಗಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ತಾಂತ್ರಿಕ ದೋಷ ಕಂಡುಬಂದದ್ರಿಂದ 2 ದಿನಗಳ ಕಾಲ ಮುಂದೂಡಿ, ನಿನ್ನೆ ಲಾಂಚ್‌ ಮಾಡಲಾಗಿತ್ತು. 394 ಅಡಿ ಎತ್ತರವಿದ್ದ ಸ್ಟಾರ್‌ಶಿಪ್‌ ರಾಕೆಟ್‌ನ್ನ ಭೂಮಿಯನ್ನ ಸುತ್ತುವರಿದು ಬಳಿಕ ಪೆಸಿಫಿಕ್‌ ಸಮುದ್ರಕ್ಕೆ ಬಂದಿಳಿಯುವಂತೆ ಯೋಜಿಸಲಾಗಿತ್ತು. ಇನ್ನು ರಾಕೆಟ್‌ ಸ್ಪೋಟಗೊಂಡ ಬೆನ್ನಲ್ಲೇ, ʻಈ ಪರೀಕ್ಷೆ ಸ್ಟಾರ್‌ಶಿಪ್‌ ಸಾಮರ್ಥ್ಯವನ್ನ ಮತ್ತಷ್ಟು ಇಂಪ್ರೂವ್‌ ಮಾಡೋಕೆ ಹೆಲ್ಪ್‌ ಮಾಡುತ್ತೆ. ಇಂಥ ಟೆಸ್ಟ್‌ಗಳಿಂದ ನಾವು ಏನ್‌ ಕಲೀತಿವಿ ಅನ್ನೊದ್ರಿಂದ ಯಶಸ್ಸು ಸಿಗುತ್ತೆʼ ಅಂತ ಸ್ಪೇಸ್‌X ಟ್ವೀಟ್‌ ಮಾಡಿದೆ. ಇತ್ತ‌ ಮಸ್ಕ್‌ ಟ್ವೀಟ್‌ ಮಾಡಿ, ಸ್ಟಾರ್‌ಶಿಪ್‌ ರಾಕೆಟ್‌ ಲಾಂಚ್‌ಗೆ ಸ್ಪೇಸ್‌X ಟೀಂಗೆ ಕಂಗ್ರ್ಯಾಟ್ಸ್‌ ಹೇಳಿದ್ದಾರೆ. ಜೊತೆಗೆ ಮುಂದಿನ ಉಡಾವಣೆಗಾಗಿ ಬಹಳ ಕಲಿತಿದ್ದೇವೆ. ಮುಂದಿನ ಕೆಲವು ತಿಂಗಳಲ್ಲಿ ನೆಕ್ಸ್ಟ್‌ ಲಾಂಚ್‌ ಇರಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply