‌ಬೆಂಗಳೂರು ಕಂಪೇಗೌಡ ವಿಮಾನ ನಿಲ್ದಾಣ: 30 ನಿಮಿಷದ ಮಳೆಗೆ ಸೋರಿದ ಟರ್ಮಿನಲ್-2

masthmagaa.com:

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ವರುಣನ ಅಬ್ಬರ ಜೋರಾಗಿದೆ. ಆ ಮಳೆಗೆ 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್‌ 2ರಲ್ಲಿ ಮಳೆ ನೀರು ಸೋರಿದೆ. ಕಳೆದ ಮಂಗಳವಾರ ಬಂದ ಮಳೆಗೆ ಎಂಟ್ರಿಗೇಟ್‌ನಲ್ಲಿ ಸೋರಿಕೆ ಉಂಟಾಗಿದ್ದು, ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣದ ನೈರ್ಮಲ್ಯ ಸಿಬ್ಬಂದಿ ತೊಂದರೆ ಅನುಭವಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಮಳೆ ನೀರನ್ನು ಸ್ವಚ್ಛಗೊಳಿಸುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೇವಲ 30 ನಿಮಿಷಗಳ ಕಾಲ ಸುರಿದ ಮಳೆಗೆ ಟರ್ಮಿನಲ್‌ 2 ಲೀಕ್‌ ಆದ ಹಿನ್ನೆಲೆ ಹಲವರು ಸರ್ಕಾರವನ್ನ ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply