ಹಿಂದಿ ವಾರ್‌: ಕನ್ನಡಕ್ಕೆ ಕೈ ಎತ್ತು ಅಂದ್ರೆ ಇವರು ಕಾಲು ಎತ್ತುತ್ತಿದ್ದಾರೆ ಎಂದ ಜೆಡಿಎಸ್‌ ನಾಯಕ!

masthmagaa.com:

ರಾಜ್ಯದಲ್ಲಿ ಹಿಂದಿ ವಿಚಾರ ಈಗ ಮತ್ತೊಮ್ಮೆ ಭುಗಿಲೆದ್ದಿದೆ. ಹಿಂದಿ ದಿವಸ್‌ ವಿಚಾರವಾಗಿ ಈಗ ಪರ ವಿರೋಧ ಚರ್ಚೆ ಎದ್ದಿದೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ನಿನ್ನೆಯಷ್ಟೇ ರಾಜ್ಯದಲ್ಲಿ ಹಿಂದಿ ದಿವಸ್‌ ಆಚರಣೆಯನ್ನ ವಿರೋಧಿಸಿ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ರು. ಇಂದು ಜೆಡಿಎಸ್‌ ನಾಯಕರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆಯನ್ನನಡೆಸಲಾಗಿದೆ. ಇನ್ನು ಹಿಂದಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದು ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ, ಹಾಗೇ ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ‌ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ ಅಂತೇಳಿದ್ದಾರೆ. ಇತ್ತ ಜೆಡಿಎಸ್‌ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿ ಹಿಂದಿ ಅಂದ್ರೆ ಕೇಶವ ಕೃಪಾ, ಕನ್ನಡ ಅಂದ್ರೆ ಬಸವಕೃಪಾ..ನಮಗೆ ಹಿಂದಿ ಗುಲಾಮಿಕೆ ಬೇಕಿಲ್ಲ. ಕನ್ನಡಕ್ಕೆ ಕೈ ಎತ್ತು ಅಂದ್ರೆ ಇವರು ಕನ್ನಡಕ್ಕೆ ಕಾಲು ಎತ್ತುತ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ಮಾಜಿ ಸಚಿವ ಯುಟಿ ಖಾದರ್‌ ಮಾತ್ರ ಹಿಂದಿ ನಮ್ಮ ರಾಷ್ಟ್ರೀಯ ಭಾಷೆ, ಇಂಗ್ಲೀಷ್‌ ಇಂಟರ್ನ್ಯಾಷನಲ್‌ ಭಾಷೆ. ಅದನ್ನ ಯಾಕೆ ವಿರೋಧ ಮಾಡ್ಬೇಕು. ಎಲ್ಲ ಭಾಷೆಗಳಿಗೂ ಗೌರವ ಕೊಡಬೇಕು..ಹಿಂದಿ ದಿವಸ್‌ಗೆ ವಿರೋಧ ಯಾಕೆ ಅಂತ ಪ್ರಶ್ನೆ ಮಾಡಿದ್ದಾರೆ. ಸಿಟಿ ರವಿ ಮಾತನಾಡಿ ದೇವೇಗೌಡ ಅವರು ಹಿಂದಿ ದಿವಸ್‌ ಆಚರಣೆ ಮಾಡಿಲ್ವಾ? ಸಂಪರ್ಕ ಭಾಷೆಯಾಗಿ ಹಿಂದಿಯನ್ನ 1949ಲ್ಲಿ ಸ್ವೀಕಾರ ಮಾಡುವಾಗ ಅಮಿಶ್‌ ಶಾ ಇದ್ರಾ? ದೇವೇಗೌಡ ಪ್ರಧಾನಿಯಾಗಿದ್ದಾಗ ಯಾಕೆ ವಿರೋಧ ಮಾಡ್ಲಿಲ್ಲ. ನಾವು ಎಲ್ಲ ಭಾಷೆಗೆ ಸಮಾನ ಪ್ರಾತಿನಿಧ್ಯ ಕೊಡ್ತೀದ್ದೀವಿ..ಯಾರ ಮೇಲೂ ಭಾಷೆಯನ್ನ ಹೇರುತ್ತಿಲ್ಲ. ಸಂಸತ್‌ನಲ್ಲಿ ಕನ್ನಡದಲ್ಲಿ ಮಾತನಾಡೋಕೆ ಅವಕಾಶ ಇದೆ ಅಂತ ಹೇಳಿದ್ದಾರೆ. ಇನ್ನು ಇತ್ತ ರಾಜ್ಯದಲ್ಲಿ ಭಾಷೆ ದಂಗಲ್‌ ಭುಗಿಲೆದ್ದಿರೋ ಹೊತ್ತಲ್ಲೇ ಅತ್ತ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತೆ ಹಿಂದಿ ಪರ ಬ್ಯಾಟ್‌ ಬೀಸಿದ್ದಾರೆ. ಹಿಂದಿ ಅನ್ನೋದು ಯಾವುದೇ ಪ್ರಾದೇಶಿಕ ಭಾಷೆಗಳ ಪ್ರತಿಸ್ಪರ್ಧಿಯಲ್ಲ. ಅದು ಎಲ್ಲ ಭಾಷೆಗಳ ಮಿತ್ರ. ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಆಗ್ತಿದೆ ಅಂತ ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply