ಭಾರತ ಹಾಗೂ ಚೀನಾ ಉತ್ತಮ ಸ್ನೇಹಿತರಾಗಬೇಕು : ರಷ್ಯಾ

masthmagaa.com:

ಒಂದು ದೇಶದ ವಿರುದ್ದ ಮತ್ತೊಂದು ದೇಶ ತಿರುಗಿ ಬೀಳುವ ಆಟದಲ್ಲಿ ರಷ್ಯಾ ಯಾವತ್ತು ಭಾಗಿಯಾಗಿಲ್ಲ. ಆದ್ರೆ ಇಂಡೋ-ಪೆಸಿಫಿಕ್‌ ಭಾಗದ ಆಟದಲ್ಲಿ ಕೆಲ ಹೊರಗಿನ ಆಟಗಾರರು ನಮ್ಮನ್ನ ಬಳಸಿಕೊಂಡಿದ್ದಾರೆ ಅಂತ ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್‌ ಹೇಳಿದ್ದಾರೆ. ಆಸ್ಟ್ರೇಲಿಯಾ, ಭಾರತ, ಜಪಾನ್‌ ಹಾಗೂ ಅಮೆರಿಕಗಳ ಕ್ವಾಡ್‌ ಒಕ್ಕೂಟ ಹಾಗೂ ಅಮೆರಿಕದ ಮಿತ್ರರಾಷ್ಟ್ರಗಳ ಆಸೀಯಾನ್‌ ಗುಂಪುಗಳು ಪೂರ್ವ ಏಷ್ಯಾದ ಭಾಗದಲ್ಲಿ ನಡೆಯೋ ಸಭೆಗಳನ್ನ ಹಾಳು ಮಾಡುವ ಉದ್ದೇಶವನ್ನ ಹೊಂದಿವೆ. ಅಂದ್ರೆ ರಷ್ಯಾ ಹಾಗೂ ಚೀನಾವನ್ನ ಹೊರಗಿಟ್ಟು ಅವರೇ ಈ ಸಭೆಗಳನ್ನ ಮಾಡ್ಕೋತಿದ್ದಾರೆ ಅಂತ ಲಾವ್ರೋವ್‌ ಆರೋಪಿಸಿದ್ದಾರೆ. ಜೊತೆಗೆ ಭಾರತ ಹಾಗೂ ಚೀನಾ ಜೊತೆಗಿನ ಸಂಬಂಧಗಳ ಬಗ್ಗೆ ಮಾತಾಡಿದ ಲಾವ್ರೋವ್‌, ಎರಡು ದೇಶಗಳ ಜೊತೆ ರಷ್ಯಾ ಒಳ್ಳೆ ರಿಲೇಶನ್‌ನ್ನ ಹೊಂದಿದೆ. ಅಲ್ದೇ ಭಾರತ ಹಾಗೂ ಚೀನಾ ಕೂಡ ಒಳ್ಳೆ ಸ್ನೇಹಿತರಾಗಬೇಕು ಅಂತ ನಾವು ಬಯಸ್ತೀವಿ. ರಷ್ಯಾ, ಭಾರತ ಹಾಗೂ ಚೀನಾ ಒಳಗೊಂಡ ಒಕ್ಕೂಟವನ್ನ ಸೃಷ್ಟಿಸುವ ಬಯಕೆ ಬ್ರಿಕ್ಸ್‌ ರಚನೆಯಲ್ಲಿ ಕೊನೆಗೊಂಡಿತು. ಭಾರತ ಹಾಗೂ ಚೀನಾ ಜಾಸ್ತಿ ಮೀಟ್‌ ಮಾಡಿದಷ್ಟು ಒಳ್ಳೇದು ಅಂತ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಯುಕ್ರೇನ್‌ ಸಂಘರ್ಷದ ಬಗ್ಗೆ ಮಾತಾಡಿದ ಲಾವ್ರೋವ್‌, ಎಲ್ರೂ ಯುಕ್ರೇನ್‌ ಜೊತೆ ಮಾತುಕತೆ ನಡೆಸೋಕೆ ರಷ್ಯಾ ಯಾವಾಗ ರೆಡಿಯಾಗುತ್ತೆ ಅಂತ ಕೇಳ್ತಾರೆ. ಆದ್ರೆ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಮಾತುಕತೆಗೆ ರೆಡಿಯಿದಾರಾ ಅಂತ ಯಾರು ಕೇಳಲ್ಲ. ಪುಟಿನ್‌ ಇರೊವರೆಗೂ ರಷ್ಯಾ ಜೊತೆ ಮಾತುಕತೆ ನಡೆಸೋದು ಒಂದ್‌ ರೀತಿ ಅಪರಾಧ ಅನ್ನೊ ಡಾಕುಮೆಂಟ್‌ಗೆ ಕಳೆದ ವರ್ಷ ಝೆಲೆನ್ಸ್ಕಿ ಸಹಿ ಹಾಕಿದ್ದಾರೆ ಅಂತ ಝೆಲೆನ್ಸ್ಕಿ ವಿರುದ್ದ ಲಾವ್ರೋವ್‌ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply