ನಮ್ಮ ಬಳಿ ಶಸ್ತ್ರಾಸ್ತ್ರ ಇಲ್ಲದಿದ್ರೂ ಹೋರಾಟ ಮಾಡ್ತೀವಿ: ಇಸ್ರೇಲ್‌

masthmagaa.com:

ರಫಾ ನಗರದಲ್ಲಿ ಆಕ್ರಮಣ ನಡೆಸಿದ್ರೆ, ಇಸ್ರೇಲ್‌ಗೆ ಶಸ್ತ್ರಾಸ್ತ್ರ ಕೊಡಲ್ಲ ಅಂತ ದಿನದ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಕೆ ನೀಡಿದ್ರು. ಇದರ ಬೆನ್ನಲ್ಲೇ ಇಸ್ರೇಲ್‌ ಅಮೆರಿಕ ವಿರುದ್ದ ತಿರುಗಿ ಬಿದ್ದಿದೆ. ʻʻನಮಗೆ ಯಾರ್‌ ಸಹಾಯನೂ ಬೇಕಿಲ್ಲ. ಆಯುಧ ಇಲ್ಲದಿದ್ರೂ ಪರವಾಗಿಲ್ಲ.. ಇಸ್ರೇಲಿಗರು ಕೇವಲ ಉಗುರಿನಲ್ಲೂ ಹೋರಾಟ ಮಾಡೋಕೆ ಸಿದ್ದರಿದ್ದಾರೆʼ ಅಂತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ವಿಡಿಯೋ ಒಂದ್ರಲ್ಲಿ ಮಾತನಾಡಿದ ಅವ್ರು, ʼನಾವು ಒಂಟಿಯಾಗೇ ಹೋರಾಟ ಮಾಡ್ಬೇಕಾದ್ರೆ, ಅದಕ್ಕೂ ಸೈ. ಆಯುಧ ಇಲ್ವಾ?..ಬೇಕಿದ್ರೆ ಬೆರಳಿನ ಉಗುರಿನಲ್ಲೇ ಹೋರಾಟ ಮಾಡ್ತೀವಿ. ಆದ್ರೆ ಸಧ್ಯಕ್ಕೆ ನಮ್ಮ ಬಳಿ ಉಗುರಿಗಿಂತ ಬಲಶಾಲಿಯಾದ ಆಯುಧಗಳಿವೆ. ನಮ್ಮ ಬಳಿ ಆತ್ಮಸ್ಥೈರ್ಯವಿದೆ, ದೇವರ ಸಹಾಯವಿದೆ… ಇವೆಲ್ಲದ್ರಿಂದ ನಾವು ವಿಜಯ ಗಳಿಸ್ತೀವಿʼ ಅಂತೇಳಿದ್ದಾರೆ. ಈ ಮೂಲಕ ಅಮೆರಿಕದ ಬೈಡೆನ್‌ ಸರ್ಕಾರಕ್ಕೆ ನೇರಾ ನೇರ ಜಾಡಿಸಿದ್ದಾರೆ.
ಇನ್ನೊಂದ್ಕಡೆ ಯುದ್ದದಿಂದಾಗಿ ಇಸ್ರೇಲ್‌ ಟೂರಿಸಂನ ಸೇವೆಗಳನ್ನ ರದ್ದು ಮಾಡಲಾಗಿತು. ಅಂದ್ರೆ ಇಸ್ರೇಲ್‌ಗೆ ಫ್ಲೈಟ್‌ಗಳನ್ನ ಸ್ಥಗಿತಗೊಳಿಸಲಾಗಿತ್ತು. ಆದ್ರೆ ಈಗ ಈ ಏರ್‌ಲೈನ್‌ ಸಂಸ್ಥೆಗಳು ಫ್ಲೈಟ್‌ಗಳನ್ನ ಪುನರಾರಂಭಿಸಿದೆ. ಈ ಬಗ್ಗೆ ಇಸ್ರೇಲ್‌ ಟೂರಿಸಂ ಇಲಾಖೆ ಸ್ಪಷ್ಟನೆ ನೀಡಿದ್ದು ಇಸ್ರೇಲ್‌ ಪೂರ್ಣವಾಗಿ ಓಪನ್‌ ಆಗಿದೆ…ಮತ್ತು ಸಂಪೂರ್ಣವಾಗಿ ಸೇಫ್‌ ಆಗಿದೆ ಅಂತೇಳಿದೆ. ಇನ್ನು ಏರ್‌ ಇಂಡಿಯಾ ಫ್ಲೈಟ್‌ಗಳು ಕೂಡ ಇದೇ ಮೇ 16ರಿಂದ ವಾರಕ್ಕೆ 5 ಬಾರಿ ಭಾರತದಿಂದ ಇಸ್ರೇಲ್‌ಗೆ ಪ್ರಯಾಣ ಬೆಳಸಲಿದೆ ಅಂತ ಗೊತ್ತಾಗಿದೆ.

ಇನ್ನು ಅಮೆರಿಕದಲ್ಲಿ ಪ್ರಾರಂಭಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ… ಇತರೆ ಕೆಲ ದೇಶಗಳಿಗೂ ಹರಡಿದೆ. ಐರ್ಲೆಂಡ್‌ನ ಡಬ್ಲಿನ್‌ನಲ್ಲಿರೋ ಟ್ರಿನಿಟಿ ಕಾಲೇಜಿನಲ್ಲೂ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಗಳು ನಡೆಸಲಾಗಿದೆ. ಜೊತೆಗೆ ಈ ಕಾಲೇಜಿಗೆ ಬರ್ತಿದ್ದ, ಇಸ್ರೇಲ್‌ ಕಂಪನಿಗಳ ಫಂಡಿಂಗ್‌ ಸ್ಟಾಪ್‌ ಮಾಡಿ ಅಂತ ಡಿಮಾಂಡ್‌ ಕೂಡ ಇಡಲಾಗಿದ್ದು, ಅದನ್ನ ಸ್ವೀಕರಿಸ್ತೀವಿ ಅಂತ ಕಾಲೇಜು ತಿಳಿಸಿದೆ. ಅಂದ್ರೆ ಇಸ್ರೇಲ್‌ ಕಂಪನಿಗಳಿಂದ ಈ ಟ್ರಿನಿಟಿ ಕಾಲೇಜಿಗೆ ಬರೋ ಫಂಡಿಂಗ್‌ ನಿಲ್ಲಿಸೋಕೆ ನಿರ್ಧಾರ ಮಾಡಿದೆ.

-masthmagaa.com

Contact Us for Advertisement

Leave a Reply