ಸಮಸ್ಯೆಗಳನ್ನ ಎದುರಿಸಲು ಭಾರತ ನಮಗೆ ಮಾರ್ಗದರ್ಶನ ನೀಡಿದೆ: ರಷ್ಯಾ

masthmagaa.com:

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯನ್ನ ರಷ್ಯಾ ಹಾಡಿ ಹೊಗಳಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬದಲಿಗೆ ಸಭೆಯಲ್ಲಿ ಭಾಗವಹಿಸಿದ್ದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌, ಈ ಜಿ20 ಶೃಂಗಸಭೆ ವಿವಿಧ ಸವಾಲುಗಳನ್ನ ಎದುರಿಸಲು ದಾರಿ ತೋರಿಸಿದೆ ಅಂತ ಹೇಳಿದ್ದಾರೆ. ಜೊತೆಗೆ ಯುಕ್ರೇನ್‌ ಯುದ್ಧ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಾಶ್ಚಿಮಾತ್ಯ ದೇಶಗಳು ತಮ್ಮ ಅಜೆಂಡಾಗಳನ್ನ ಹೇರುವುದನ್ನ ಭಾರತ ಯಶಸ್ವಿಯಾಗಿ ತಡೆದಿದೆ ಅಂತ ಲಾವ್ರೋವ್‌ ಹೇಳಿದ್ದಾರೆ. ಅಲ್ದೆ ವಿಶ್ವದ ಮಿಲಿಟರಿ ಸಂಘರ್ಷಗಳನ್ನ ವಿಶ್ವಸಂಸ್ಥೆಯ ಚಾರ್ಟರ್‌ ಪ್ರಕಾರ ಪರಿಹರಿಸಬೇಕು. ಮತ್ತು ಪಾಶ್ಚಿಮಾತ್ಯ ದೇಶಗಳು ತಮ್ಮ ಸ್ವಂತ ಕಾರ್ಯಸೂಚಿಗಳನ್ನ ಈ ರೀತಿಯ ಬಿಕ್ಕಟ್ಟುಗಳಲ್ಲಿ ಬಳಸಲು ಸಾಧ್ಯವಿಲ್ಲ ಅನ್ನೋದನ್ನ ಶೃಂಗಸಭೆಯ ಘೋಷಣೆ ಒತ್ತಿ ಹೇಳುತ್ತದೆ. ಹೀಗಾಗಿ ಈ ಶೃಂಗಸಭೆ ಅನೇಕ ವಿಧಗಳಲ್ಲಿ ಅದ್ಭುತ ಶೃಂಗಸಬೆಯಾಗಿದ್ದು, ಹಲವು ವಿಷಯಗಳಲ್ಲಿ ಮುನ್ನಡೆಯಲು ನಮಗೆ ನಿರ್ದೇಶನ ನೀಡಿದೆ. ಅಲ್ದೆ ಇತಿಹಾಸದಲ್ಲೇ ಮೊದಲ ಬಾರಿಗೆ ಗ್ಲೋಬಲ್‌ಸೌತ್‌ನ ಜಿ20 ರಾಷ್ಟ್ರಗಳನ್ನ ಒಗ್ಗೂಡಿಸುವಲ್ಲಿ ಸಕ್ಸಸ್‌ ಆಗಿದೆ. ಹೀಗಾಗಿ ಜಿ20ಯನ್ನ ರಾಜಕೀಯಗೊಳಿಸುವ ಪ್ರಯತ್ನವನ್ನ ವಿಫಲಗೊಳಿಸಿದ್ದಕ್ಕೆ ಭಾರತಕ್ಕೆ ಧನ್ಯವಾದಗಳು ಅಂತ ಲಾವ್ರೋವ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply