ಅವರು ಯಾವ ರೀತಿ ಬಟ್ಟೆ ಬಿಚ್ಚುತ್ತಾರೆ ನನಗೆ ಗೊತ್ತಿಲ್ಲ.! ಪುಟಿನ್‌ ಬಾಯಲ್ಲಿ ಇದೆಂಥಾ ಮಾತು?

masthmagaa.com:

ರಷ್ಯಾ ಹಾಗೂ ಯುರೋಪ್‌ ನಾಯಕರ ವಾಗ್ಯುದ್ದ ಮತ್ತೊಂದು ಹಂತಕ್ಕೆ ತಲುಪಿದೆ. ಅದರಲ್ಲೂ ಈಗ ದೇಶದ ವಿಚಾರ ಬಿಟ್ಟು ಒಬ್ಬರಿಗೊಬ್ಬರು ತಮ್ಮ ಪರ್ಸನಲ್‌ ವಿಚಾರಗಳ ಬಗ್ಗೆ ಮಾತನಾಡ್ತಿದ್ದಾರೆ. ಅಂದ್ಹಾಗೆ ಈಗ ವಿಚಾರ ಏನು ಅಂದ್ರೆ ಇತ್ತೀಚಿಗೆ ಜರ್ಮನಿಯಲ್ಲಿ ನಡೆದ G 7 ದೇಶಗಳ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ ವಿರುದ್ದ ಯುರೋಪ್‌ ರಾಷ್ಟ್ರಗಳು ಭಾರಿ ಆಕ್ರೋಶ ಹೊರ ಹಾಕಿದ್ವು. ಸಾಲದು ಅಂತ ಪುಟಿನ್‌ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಮಾತನಾಡಿದ್ರು. ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅಂತೂ ಪುಟಿನ್‌ ರೀತಿ ನಾವು ಟಫ್‌ ಮ್ಯಾನ್‌ ಅಂತ ತೋರಿಸಕೊಳ್ಳೋಕೆ ಅವರಂತೆ ಬಟ್ಟೆ ಬಿಚ್ಚಬೇಕಾ ಅಂತ ಹೇಳಿದ್ರು. ಅದಕ್ಕೆ ಕೆನಡಾ ಪ್ರಧಾನಿ ಜಸ್ಟೀನ್‌ ಟ್ರುಡು ಕೂಡ ಹೌದು ಬಟ್ಟೆ ಬಿಚ್ಚಿ ಎದೆ ತೋರಿಸ್ಬೇಕು..ಕುದುರು ಮೇಲೆ ಕೂತು ಓಡಾಡ್ಬೇಕು ಅಂತ ಕಾಲೆಳೆದಿದ್ರು. ಇದಕ್ಕೆ ಈಗ ಪುಟಿನ್‌ ಪ್ರತಿಕ್ರಿಯಿಸಿ ಇಬ್ಬರಿಗೂ ಅವರದೇ ಭಾಷೆಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ತುರ್ಕ್‌ಮೆನಿಸ್ತಾನ್‌ ಪ್ರವಾಸದಲ್ಲಿರೋ ಪುಟಿನ್‌ ಈ ವೇಳೆ ಪತ್ರಿಕಾಗೋಷ್ಠಿ ನಡೆಸಿದ್ರು. ಈ ಸಂದರ್ಭದಲ್ಲಿ ಯರೋಪ್‌ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ ʻಅವರು ನನ್ನಂತೆ ಬಟ್ಟೆ ಬಿಚ್ಚಿದ್ರೆ ತುಂಬಾ ಅಸಹ್ಯವಾಗಿ ಕಾಣ್ತಾರೆ.. ಅವರಿಗೆ ಅದು ಅದು ಸರಿ ಬರಲ್ಲ…ಅಲ್ದೇ ಅವರು ಅವರು ಎಲ್ಲಿ ಬಟ್ಟೆ ಬಿಚ್ಚಿ ನಗ್ನವಾಗ್ತಾರೋ ನನಗಂತೂ ಗೊತ್ತಿಲ್ಲ. ಸೊಂಟದ ಮೇಲೆರೋ ಬಟ್ಟೆ ತೆಗಿತಾರೋ ಅಥವಾ ಸೊಂಟದ ಕೆಳಗಿರೋ ಬಟ್ಟೆ ತೆಗಿತಾರೋ ನನಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ. ಅಲ್ಲದೇ ಯುರೋಪ್‌ ನಾಯಕರಿಗೆ ಕೆಲ ಹೆಲ್ತ್‌ ಟಿಪ್ಸ್‌ ಕೂಡ ಕೊಟ್ಟಿರೋ ಪುಟಿನ್‌, ಹಾಲ್ಕೋಹಾಲ್‌ ಕುಡಿಯೋದನ್ನ ಕಡಿಮೆ ಮಾಡಿ. ಆಟ ಆಡಿ, ಎಕ್ಸಸೈಜ್‌ ಮಾಡಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply