ಯುಕ್ರೇನ್‌ ವೆಸ್ಟರ್ನ್‌ ಆಯುಧಗಳನ್ನ ತಾಲಿಬಾನ್‌ಗೆ ಮಾರ್ತಿದೆ: ಪುಟಿನ್‌

masthmagaa.com:

ಪಾಶ್ಚಿಮಾತ್ಯ ದೇಶಗಳು ಯುಕ್ರೇನ್‌ಗೆ ಸಪ್ಲೈ ಮಾಡ್ತಿರೊ ಶಸ್ತ್ರಾಸ್ತ್ರಗಳನ್ನ ಅಕ್ರಮವಾಗಿ ತಾಲಿಬಾನ್‌ಗೆ ಮಾರಾಟ ಮಾಡಲಾಗ್ತಿದೆ ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆರೋಪಿಸಿದ್ದಾರೆ. ಯುಕ್ರೇನ್‌ನಿಂದ ಅಕ್ರಮವಾಗಿ ಮಿಡಲ್‌ ಈಸ್ಟ್‌ವರೆಗೂ ಈ ಶಸ್ತ್ರಾಸ್ತ್ರಗಳು ತಲುಪುತ್ತಿದ್ದು, ಅಲ್ಲಿಂದ ಇತರ ಗುಂಪುಗಳಿಗೆ ಹೋಗ್ತಿವೆ ಅಂತ ಹೇಳಿದ್ದಾರೆ. ಅಂದ್ಹಾಗೆ ರಷ್ಯಾ-ಯುಕ್ರೇನ್‌ ಯುದ್ದ ಆರಂಭ ಆದಾಗ್ಲಿಂದ್ಲೂ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳನ್ನ ಯುಕ್ರೇನ್‌ಗೆ ಪೂರೈಕೆ ಮಾಡಲಾಗ್ತಿದೆ. ಆದ್ರೆ ಅವು ಅಲ್ಲಿನ ಭ್ರಷ್ಟ ಅಧಿಕಾರಿಗಳ ದುರ್ಬಳಕೆಯಿಂದ ಅಕ್ರಮವಾಗಿ ವಿದೇಶಗಳಿಗೆ ಮಾರಾಟ ಆಗ್ತಿವೆ ಅಂತ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಸೆಕ್ಯುರಿಟಿ ಏಜೆನ್ಸಿಗಳು ಕಳವಳ ವ್ಯಕ್ತಪಡಿಸಿದ್ವು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ Global Initiative Against Transnational Organized Crime ಎಂಬ ಸಂಸ್ಥೆ ಒಂದು ಈ ವರ್ಷದ ಮಾರ್ಚ್‌ನಲ್ಲೆ ವರದಿ ನೀಡಿತ್ತು. ಅದರಲ್ಲಿ ಯುದ್ಧ ಮುಗಿಯುವ ವೇಳೆಗೆ ಯುಕ್ರೇನ್‌, ಆಫ್ರಿಕನ್‌ ಮತ್ತು ಯುರೋಪಿಯನ್ನ ನಗರಗಳ ಗ್ಯಾಂಗ್‌ಸ್ಟರ್‌ಗಳಿಗೆ ಅಕ್ರಮ ಆಯುಧಗಳನ್ನ ಸಪ್ಲೈ ಮಾಡೋ ಶಸ್ತ್ರಾಗಾರಗಳ ಕೂಪವಾಗ್ಬೋದು. ಅದಾಗದಂತೆ ಕ್ರಮ ತಗೊಳ್ಬೇಕು ಅಂತ ಹೇಳಿತ್ತು. ಈಗ ಪುಟಿನ್‌ ಸಹ ಆಯುಧಗಳು ಮಿಡ್ಲ್‌ ಈಸ್ಟ್‌ನ ದುಷ್ಟ ಶಕ್ತಿಗಳ ಕೈ ಸೇರ್ತಿವೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply