ಚೀನಾ ಜೊತೆಗಿನ ಸಂಬಂಧ ಹಳ್ಳ ಹಿಡಿಯೋಕೆ ಇದೇ ಕಾರಣ ಎಂದ ಜೈಶಂಕರ್‌!

masthmagaa.com:

ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವವರೆಗೆ ಚೀನಾದೊಂದಿಗೆ ಭಾರತದ ಸಂಬಂಧ ನಾರ್ಮಲ್‌ ಆಗಿರೋಕೆ ಸಾಧ್ಯವಿಲ್ಲ ಅಂತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಚೀನಾ ಭಾರತದ ಸಂಬಂಧದ ಕುರಿತು ಮಾತನಾಡಿದ ಅವರು, ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಇರದೇ ಇದ್ರೆ, ಒಪ್ಪಂದಗಳ ಪಾಲನೆ ಮಾಡದೇ ಇದ್ರೆ, ಸಂಬಂಧ ವೃದ್ದಿಯಾಗೋದಿಲ್ಲ. ಯಥಾಸ್ಥಿತಿಯನ್ನು ಬದಲಾಯಿಸೋಕೆ ಏಕಪಕ್ಷೀಯ ಪ್ರಯತ್ನವನ್ನು ಅಂದ್ರೆ ಅತಿಕ್ರಮಣಗಳು ನಿಲ್ಲದ ಹೊರತು ಯಾವುದೇ ಸಂಬಂಧ ನಾರ್ಮಲ್‌ ಆಗಿರೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಗಾಲ್ವಾನ್ ಕಣಿವೆಯ ಘರ್ಷಣೆಯನ್ನು ಉಲ್ಲೇಖಿಸಿದ ಅವರು, 2020 ರಲ್ಲಿ ಏನಾಯಿತು? ಅದು ಏಕಪಕ್ಷೀಯವಾಗಿ ಗಡಿ ಬದಲಾಯಿಸೋ ಪ್ರಯತ್ನ. ಅಂತವುಗಳೇ ಸಮಸ್ಯೆಯ ಆತ್ಮ ಅಂತ ಹೇಳುವ ಮೂಲಕ ಚೀನಾದ ಆಕ್ರಮಣಶೀಲತೆಯನ್ನ ಮತ್ತೊಮ್ಮೆ ಖಂಡಿಸಿದ್ದಾರೆ.

-masthmagaa.com

Contact Us for Advertisement

Leave a Reply