ಹಿಂದಿ ವಾರ್‌: ಅಜಯ್‌ ದೇವಗನ್‌ ವಿರುದ್ದ ಎಲ್ಲಡೆ ಆಕ್ರೋಶ

masthmagaa.com:

ಕಿಚ್ಚ ಸುದೀಪ್ ಹಿಂದಿ ರಾಷ್ಟ್ರಭಾಷೆ ಅಲ್ಲ ಅಂತ ಹೇಳಿದ್ಕೆ ಟ್ವಿಟರ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್ ವಿರುದ್ಧ ಇವತ್ತು ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಿಚ್ಚನ ಪರವಾಗಿ ಕರ್ನಾಟಕದ ಹಲವಾರು ರಾಜಕಾರಣಿಗಳು ಮತ್ತು ಸಿನಿಮಾರಂಗದ ಗಣ್ಯರುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಜಯ್ ದೇವಗನನ್‌ಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟಿರುವ ನಟಿ ರಮ್ಯ ‘ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಅಜಯ್ ದೇವ್‌ಗನ್ ಈ ಬಗ್ಗೆ ನಿಮ್ಮ ಅಜ್ಞಾನ ದಿಗ್ಭ್ರಮೆಗೊಳಿಸುವಂತಿದೆ. ಕಲೆಗೆ ಯಾವುದೇ ಭಾಷೆಯ ಗಡಿ ಇಲ್ಲ. ನಾವು ನಿಮ್ಮ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುವ ಥರಾನೇ ದಯವಿಟ್ಟು ನಮ್ಮ ಸಿನಿಮಾಗಳನ್ನು ನೋಡಿ ಎಂಜಾಯ್‌ ಮಾಡಿ.. ಹಿಂದಿ ಹೇರಿಕೆ ನಿಲ್ಲಿಸಿ..’ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇನ್ನು ನಟ ಸತೀಶ್ ನೀನಾಸಂ ಈ ಬಗ್ಗೆ ಮಾತನಾಡಿದ್ದು “ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಬಹಳಷ್ಟು ಜನ ತಪ್ಪಾಗಿ ತಿಳ್ಕೋಂಡಿದ್ದಾರೆ. ಇದು ಎಲ್ಲಿ ಹೇಗೆ ಹುಟ್ಟಿಕೊಳ್ತೋ ಗೊತ್ತಿಲ್ಲ. ಅಲ್ಲದೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಂತ ಕಾನೂನಿನಲ್ಲಿ ಎಲ್ಲೂ ಉಲ್ಲೇಖ ಆಗಿಲ್ಲ. ಅಜಯ್ ದೇವಗನ್ ಅವರು ಕನ್ನಡ ಸಿನಿಮಾ ಹಿಂದಿಗೆ ಡಬ್ ಆಗ್ತಿಲ್ವ ಅಂತ ಕೇಳಿದ್ದಾರೆ. ಹಿಂದಿ ಮಾತನಾಡಿ ಎಂದು ಹೇಳುವ ಹಕ್ಕಿಲ್ಲ” ಎಂದು ಅಜಯ್ ದೇವಗನ್​ಗೆ ಟಾಂಗ್​ ಕೊಟ್ಟಿದ್ದಾರೆ. ಇನ್ನು ಸುದೀಪ್‌ಗೆ ಪ್ರತ್ಯೇಕ ಟ್ವೀಟ್‌ ಮಾಡಿರುವ ಖ್ಯಾತ ನಿರ್ದೇಶಕ RGV ರಾಮ್‌ ಗೋಪಾಲ್‌ ವರ್ಮ, ”ಸುದೀಪ್ ಅವರೆ, ನಿಜ ಹೇಳಬೇಕು ಅಂದರೆ ಬಾಲಿವುಡ್ ಸ್ಟಾರ್ ನಟರು ದಕ್ಷಿಣ ಭಾರತದ ಸಿನಿಮಾ ಸ್ಟಾರ್‌ಗಳ ಬಗ್ಗೆ ಅಸೂಯೆ ಹೊಂದಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದ್ದಕ್ಕೆ ಅವರಿಗೆ ಉರಿ ಎದ್ದಿದೆ ಅಂತ ಟ್ವೀಟ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅಜಯ್ ದೇವಗನ್ ಹೇಳಿಕೆ ಉದ್ಧಟತನದಿಂದ ಕೂಡಿದೆ. ಹಿಂದಿ ಇಂಪೊಸಿಷನ್ ಅನ್ನೋದು ಬಿಜೆಪಿ ಪಕ್ಷದ ಬಳುವಳಿ, ಇದನ್ನ ನಾನು ಖಂಡಿಸುತ್ತೇನೆ ಹೇಳಿದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ನೆನ್ನೆಯೇ ಈ ಬಗ್ಗೆ ಟ್ವೀಟ್‌ ಮಾಡಿ ಅಜಯ್‌ ದೇವಗನ್‌ ಹೇಳಿಕೆ ಖಂಡಿಸಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿರುವ ಸಿಎಂಬೊಮ್ಮಾಯಿ, ಹಿಂದಿ ಭಾಷೆ ಬಗ್ಗೆ ಸುದೀಪ್ ಕೊಟ್ಟಿರುವ ಹೇಳಿಕೆ ಸರಿಯಾಗಿಯೇ ಇದೆ ಅಂತ ಹೇಳಿದ್ದಾರೆ.
ಆದ್ರೆ ಮುಖ್ಯಮಂತ್ರಿ ಆಗೋಕೆ ಟವೆಲ್‌ ಹಾಕಿದ್ದ ಮಾನ್ಯ ಸಚಿವರಾದ ಮುರುಗೇಶ್‌ ನಿರಾಣಿಯವ್ರು ಮಾತ್ರ ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ ಅನ್ನೋ ಅವಿವೇಕತನದ ಹೇಳಿಕೆ ನೀಡಿದ್ದಾರೆ. ಇನ್ನು ಸಿಟಿ ರವಿಯವ್ರು ಕೂಡ ಸಂಪರ್ಕ ಭಾಷೆಯಾಗಿ ಹಿಂದಿ ಕಲಿಬೇಕು, ಈ ಹಿಂದೆ ಅಮಿತ್‌ ಶಾ ಅವ್ರು ಹೇಳಿದ್ರಲ್ಲಿ ತಪ್ಪೇನಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply