ಚೀನಾ ಸೇತುವೆ: ಮಾನಿಟರ್‌ ಮಾಡ್ತಾ ಇದ್ದೀವಿ ಅಂದ ಭಾರತ

masthmagaa.com:

ನೆನ್ನೆ ತಾನೇ ಚೀನಾ ಪ್ಯಾಗಾಂಗ್‌ ಸರೋವರದ ಬಳಿ ಎರಡನೇ ಸೇತುವೆ ನಿರ್ಮಾಣ ಮಾಡ್ತ ಇದೆ ಅಂತ ವರದಿಯಾಗಿತ್ತು. ಇದ್ರ ಬೆನ್ನಲ್ಲೇ ಈಗ ಭಾರತ ಪ್ರತಿಕ್ರಿಯಿಸಿದ್ದು ನಾವು ಇದನ್ನ ಮಾನಿಟರ್‌ ಮಾಡ್ತಾ ಇದ್ದೀವಿ ಅಂತ ಹೇಳಿದೆ . ಆಯಕಟ್ಟಿನ ಸ್ಥಳವಾದ ಪ್ಯಾಂಗಾಂಗ್‌ ಸರೋವರಕ್ಕೆ ಅಡ್ಡಲಾಗಿ ಕಟ್ಟುತ್ತಿರುವ ಜಾಗ ಚೀನಾ ಆಕ್ರಮಿತ ಜಾಗ ಅಂತ ಪರಿಗಣಿಸಲಾಗಿದೆ. ಆದ್ರೆ ಇದು ಎರಡನೇ ಸೇತುವೆಯಾ ಅಥವಾ ಮೊದಲೆ ಇರುವ ಸೇತುವೆಯನ್ನ ವಿಸ್ತರಿಸ್ತಾ ಇದ್ದಾರ ಅನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ರಕ್ಷಣಾ ಸಚಿವಾಲಯ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಕೊಡಬಹುದು. ನಾವು ಈ ಬೆಳವಣಿಗೆಗಳನ್ನೆಲ್ಲ ಗಮನಿಸ್ತಾ ಇದ್ದೇವೆ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಭಗ್ಚಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply