ಪಂಜಾಬ್‌ನಲ್ಲಿ ಅಪರೂಪದ ಬಹುಪಯೋಗಿ ಲೋಹ ಪತ್ತೆ! ಏನೀ ಟಂಟಾಲಮ್?‌

masthmagaa.com:

ಪಂಜಾಬ್‌ ಪಂಚ ನದಿಗಳಲ್ಲಿ ಒಂದಾದ ಸಟ್ಲೆಜ್‌ ತೀರದ ಮರಳಿನಲ್ಲಿ ಟಂಟಾಲಮ್‌(Ta) ಅನ್ನೊ ಅಪರೂಪದ ಮೆಟಲ್‌ ಅಂದ್ರೆ, ಲೋಹ ಪತ್ತೆಯಾಗಿದೆ. ಸದ್ಯ ಜಗತ್ತಿನಲ್ಲಿ ಬಳಸಲಾಗ್ತಿರೋ ಅತಿ ಹೆಚ್ಚಿನ ಕರೋಶನ್‌ ಅಥ್ವಾ ತುಕ್ಕು-ನಿರೋಧಕ ಲೋಹ ಇದಾಗಿದೆ. ಇದರ ಅಟೋಮಿಕ್‌ ಸಂಖ್ಯೆ 73, ಅಂದ್ರೆ 73 ಪ್ರೊಟಾನ್‌ಗಳು ಇದರ ಒಂದು ಅಣುವಿನಲ್ಲಿದ್ದು, ಗಾಳಿಗೆ ಎಕ್ಸ್‌ಪೋಸ್‌ ಆದಾಗ ತನ್ನ ಸುತ್ತ ಒಂದು ಆಕ್ಸೈಡ್‌ ಪದರ ರೂಪುಗೊಳ್ಳೋದ್ರಿಂದ ಇದು ತುಕ್ಕು ನಿರೋಧಕವಾಗಿದೆ ಅಂತ ತಿಳಿದು ಬಂದಿದೆ. ಜೊತೆಗೆ ಹೆಚ್ಚು ಕರಗುವ ಬಿಂದು… ವಿದ್ಯುತ್‌ ಬಲ್ಬ್‌ನಲ್ಲಿ ಉರಿಯೋ ಟಂಗ್‌ಸ್ಟನ್‌ ಫಿಲಮೆಂಟ್‌ಗಿಂತಲೂ ಹೆಚ್ಚು ಕರಗುವ ಬಿಂದು ಹೊಂದಿದ ಲೋಹ ಇದಾಗಿದ್ದು, ತುಂಬಾ ವಿಶೇಷವಾಗಿದೆ. ಅಷ್ಟೆ ಅಲ್ದೆ ಹೆಚ್ಚು ಎಕ್ಸ್‌ಪ್ಯಾಂಡ್‌ ಆಗೋ ಕ್ವಾಲಿಟಿ ಇರೋದ್ರಿಂದ ಇದನ್ನ ಯಥೇಚ್ಚವಾಗಿ ಎಲೆಕ್ಟ್ರಾನಿಕ್ಸ್‌ ಸೆಕ್ಟರ್‌ನಲ್ಲಿ ಬಳಸಲಾಗತ್ತೆ. ಅದ್ರಲ್ಲೂ ಮುಖ್ಯವಾಗಿ ಈ ಟಂಟಾಲಮ್‌ನ್ನ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಹಾಗೂ ಡಿಜಿಟಲ್‌ ಕ್ಯಾಮರಾಗಳಲ್ಲಿ ಬಳಸಲಾಗುತ್ತೆ. ಅಲ್ಲದೆ ಪರಮಾಣು ವಿದ್ಯುತ್‌ ಪ್ಲಾಂಟ್‌ಗಳು, ಕೆಮಿಕಲ್‌ ಪ್ಲಾಂಟ್‌ಗಳು, ವಿಮಾನ, ಮಿಸೈಲ್‌ಗಳ ಕಾಂಪೊನೆಂಟ್‌ಗಳ ತಯಾರಿಕೆಯಲ್ಲಿ ಬಳಕೆಯಾಗುತ್ತೆ. ಆಪರೇಷನ್‌ ಮಾಡಲು ಉಪಯೋಗಿಸೋ ಸರ್ಜಿಕಲ್‌ ಉಪಕರಣಗಳು, ದೇಹದ ಒಳಗೆ ಅಳವಡಿಸೊ ಕೃತಕ ಕೀಲುಗಳನ್ನ ತಯಾರಿಸಲು ಕೂಡ ಟಂಟಾಲಮ್‌ ಬಳಸಲಾಗತ್ತೆ. ಸದ್ಯಕ್ಕೆ ಯಾವ ಪ್ರಮಾಣದಲ್ಲಿ ಈ ಲೋಹ ಪತ್ತೆಯಾಗಿದೆ ಅನ್ನೊ ವಿಚಾರ ವರದಿಯಾಗಿಲ್ಲ. ಒಟ್ನಲ್ಲಿ ಭಾರತದ ಕೈಗಾರಿಕೆಗಳಿಗೆ ಇದ್ರಿಂದ ಹೆಲ್ಪ್‌ ಆಗೋದ್ರಲ್ಲಿ ಯಾವುದೇ ಸಂಶಯ ಇಲ್ಲ.

-masthmagaa.com

Contact Us for Advertisement

Leave a Reply