ರಾಮಮಂದಿರದ ಮೇಲೆ ‘ಹಸಿರು ದ್ವಜ’ ಹಾರಿಸ್ತೀವಿ ಎಂದ ಕಿಡಿಗೇಡಿಗಳು

masthmagaa.com:

ಸೋಷಿಯಲ್‌ ಮೀಡಿಯಾಗಳಿಂದ ಹೊತ್ತುಕೊಂಡ ಕೋಮು ಸಂಘರ್ಷಗಳು ದೇಶದಲ್ಲಿ ಇನ್ನು ಹಸಿಯಾಗಿರೋ ಹೊತ್ತಲ್ಲೇ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ಕೋಮು ವಿವಾದ ಭುಗಿಲೆದ್ದಿದೆ. MDF ಮುಸ್ಲಿಂ ಡಿಫೆನ್ಸ್‌ ಫೋರ್ಸ್‌ ಅನ್ನೋ ಹೆಸರಿನ ಕೋಮು ಸಂಘಟನೆ, ಡಿಜಿಟಲ್‌ ಗ್ರೂಪ್‌ ಹಾಗೂ ವಾಟ್ಸಾಪ್‌, ಇನ್‌ಸ್ಟಾಗ್ರಾಂ ಗ್ರೂಪ್‌ಗಳಲ್ಲಿ ಮುಸ್ಲಿಂ ಹೆಣ್ಮಕ್ಕಳಿಗೇ ಬೆದರಿಕೆ ಒಡ್ಡಿದೆ. ‘ಮುಸ್ಲಿಂ ಹೆಣ್ಣು ಮಕ್ಕಳು ಬುರ್ಖಾ ಧರಿಸಿದೇ ಹೊರಗಡೆ ಬಂದ್ರೆ, ಅವರಿವರ ಜೊತೆ ಸುತ್ತಾಡಿದ್ರೆ, ಸೆಲ್ಫಿ ತಗೊಂಡ್ರೆ,ಸಾರ್ವಜನಿಕ ಸ್ಥಳಗಳಲ್ಲಿ ಬೇರೆಯವರ ಜೊತೆ ಓಡಾಡಿದ್ರೆ ನಮ್ಮ ಸಂಘಟನೆಯವರು ಸುಮ್ಮನಿರೋಲ್ಲ ನಾವು ಆಕ್ಷನ್‌ ತಗೋತ್ತೀವಿ’ ಅಂತ ಬೆದರಿಕೆ ನೀಡಲಾಗಿದೆ. ಇಷ್ಟಕ್ಕೇ ಸುಮ್ಮನಾಗದೆ, ಬೇರೆ ಧರ್ಮದವರು ನಮ್ಮ ಹೆಣ್ಣು ಮಕ್ಕಳನ್ನ ಕೆಟ್ಟದ್ದಾಗಿ ಬಳಸಿಕೊಂಡ್ರೆ ಅಂತಹವರ ವಿರುದ್ದ ನಾವು ಫೀಲ್ಡ್‌ ಗೀಲ್ಡ್‌ಗೆ ಇಳಿತೀವಿ, ಪೋಷಕರೂ ಕೂಡ ತಮ್ಮ ಮಕ್ಕಳನ್ನ ಮಾನಿಟರ್‌ ಮಾಡ್ಬೇಕು, ಕ್ರಮಕೈಗೊಳ್ಳಬೇಕು ಅಂತ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಅನ್ಯ ಸಮುದಾಯದ ಧಾರ್ಮಿಕ ಮಂದಿರಗಳನ್ನ ವಿರೂಪಗೊಳಿಸುವ, ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ಕೊಡುವ ಕೆಲ ಪೋಸ್ಟ್‌ಗಳನ್ನ ಕೂಡ ಹರಿಬಿಟ್ಟಿದ್ದಾರೆ. ಇನ್ನು ಇದರ ವಿರುದ್ದ ವ್ಯಾಪಕ ವಿರೋಧ ವ್ಯಕ್ತವಾಗ್ತಿದ್ದಂತೆ ಮಂಗಳೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಆರೋಪಿಯೊಬ್ಬನನ್ನ ಬಂಧಿಸಲಾಗಿದ್ದು ತನಿಖೆ ನಡೆಸ್ತಾಯಿದ್ದೀವಿ ಅಂತ ಮಂಗಳೂರು ಕಮಿಷನರ್‌ ಶಶಿಕುಮಾರ್‌ ಮಾಹಿತಿ ನೀಡಿದ್ದಾರೆ. ಇನ್ನು ಇದೇ ಗ್ರೂಪ್‌ಗಳಲ್ಲಿ ನಾವು ತಲೆ ಕೆಟ್ರೆ ರಾಮಮಂದಿರದ ಮೇಲೂ ಹಸಿರು ದ್ವಜ ಹಾರಿಸ್ತೀವಿ ಅಂತ ಉದ್ದಟತನದ ಹೇಳಿಕೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply