ಪಾಕಿಸ್ತಾನದಲ್ಲಿ ಆಕ್ಟಿವ್‌ ಆಗ್ತಿದ್ದಾರೆ ಉಗ್ರರು! ಸಹಾಯದ ನೆಪದಲ್ಲಿ ಭಾರಿ ಕುತಂತ್ರ

masthmagaa.com:

ಪಾಕಿಸ್ತಾನದಲ್ಲಿ TTP, ʻತೆಹ್ರೀಕ್‌ ಈ ತಾಲಿಬಾನ್‌ ಪಾಕಿಸ್ತಾನ್‌ʼ ಅಂದ್ರೆ ತಾಲಿಬಾನ್‌ನಲ್ಲಿರೋ ಪಾಕಿಸ್ತಾನ್‌ ಘಟಕದ ಮೇಲೆ ಪಾಕ್‌ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು ಇದೇ ಟೈಮ್‌ ಅಲ್ಲಿರೋ ಇತರ ಉಗ್ರಸಂಘಟನೆಗಳು ಫುಲ್ ಆಕ್ಟಿವ್‌ ಆಗಿವೆ ಅಂತ ವರದಿಯಾಗಿದೆ. ಪಾಕ್‌ ಮೂಲದ ಜೈಷ್‌ ಹಾಗೂ ಲಷ್ಕರ್‌ ಸಂಘಟನೆಗಳು ಭಾರತಕ್ಕೆ ಉಗ್ರರನ್ನ ಕಳುಹಿಸೋದಕ್ಕೆ ಭಾರಿ ತಯಾರಿ ಮಾಡ್ತಿದೆ ಅಂತ ಹೇಳಲಾಗ್ತಿದೆ. ಪಾಕ್‌ನಲ್ಲಿ ಈಗ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಂತಹ ಟೈಂನಲ್ಲಿ‌ ಅಲ್ಲಿರೋ ಜನರಿಗೆ ಸಹಾಯ ಮಾಡೋ ನೆಪದಲ್ಲಿ, ಅವರಿಗೆ ದೇಣಿಗೆ ಕಲೆಕ್ಟ್‌ ಮಾಡೋ ನೆಪದಲ್ಲಿ ಸಂಘಟನೆಯ ಉಗ್ರರು, ಪಾಕ್‌ ಜನರಿಗೆ ತಮ್ಮ ಮೂಲಭೂತವಾದ, ಅಥವಾ ಅವರ ಸಿದ್ದಾಂತಗಳನ್ನ ಕೂಡ ಜನರಿಗೆ ತುಂಬುತ್ತಿದ್ದಾರೆ ಅಂತ ವರದಿಯಾಗಿದೆ. ಅಲ್ದೇ ಕರಾಚಿ, ಗುಜ್ರನ್‌ವಾಲಾ, ಸಿಯಾಲ್‌ಕೋಟ್, ಪೇಶಾವರ, ಮುಜಾಫರಾಬಾದ್, ಕೋಟ್ಲಿ, ನರೋವಲ್, ಶಕರ್‌ಗಢ್ ಮುಂತಾದ ಸ್ಥಳಗಳಲ್ಲಿ ದೈಹಿಕ ಸಾಮರ್ಥ್ಯ ಮತ್ತು ಅರ್ಹತೆಗಾಗಿ ಜಿಲ್ಲಾ ಮಟ್ಟದಲ್ಲಿ ಭಯೋತ್ಪಾದಕ ಗುಂಪಿನ ಜಿಮ್‌ಗಳಿಗೆ ಸೇರೋಕೆ ಜೈಷ್ ಯುವಕರನ್ನು ಒತ್ತಾಯ ಮಾಡಲಾಗ್ತಿದೆ. ಭಾರತ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಈ ಉಗ್ರರನ್ನ ಬಿಡೋಕೆ ಅದು ಎದುರು ನೋಡ್ತಿದೆ ಅಂತ ಹೇಳಲಾಗಿದೆ. ಆಗಸ್ಟ್ 5 ರಿಂದ 11 ರ ನಡುವೆ, ಪಾಕ್ ಆಕ್ರಮಿತ ಕಾಶ್ಮೀರದ ಬಾಗ್ ಜಿಲ್ಲೆಯ ಗಂಗಾ ಚೋಟಿ ಅನ್ನೋ ಕಡೆ ಜೈಷ್ ಸಂಘಟನೆ ಏಳು ದಿನಗಳ “ದೌರಾ ತರ್ಬಿಯಾ” ಅನ್ನೋ ತರಬೇತಿ ಶಿಬಿರವನ್ನೂ ಆಯೋಜಿಸಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply