ನವೆಂಬರ್‌ನಲ್ಲಿ ಬೈಡನ್‌-ಜಿನ್‌ಪಿಂಗ್‌ ಭೇಟಿ: ಅಮೆರಿಕ

masthmagaa.com:

ಇತ್ತೀಚೆಗೆ ಹಲವು ವಿಚಾರಗಳಲ್ಲಿ ಅಮೆರಿಕ ಹಾಗೂ ಚೀನಾ ನಡುವಿನ ಸಂಬಂಧ ಅಷ್ಟೇನು ಸರಿಯಿಲ್ಲ. ಹೀಗಾಗಿ ಚೀನಾದ ಜೊತೆಗಿನ ರಿಲೇಶನ್‌ಷಿಪ್‌ನ್ನ ಸ್ವಲ್ಪಮಟ್ಟಿಗೆ ಸರಿಪಡಿಸಿಕೊಳ್ಳೋಣ ಅಂತ ಅಮೆರಿಕ ಪ್ರಯತ್ನ ಪಡ್ತಾನೆಯಿದೆ. ಅದ್ರಲ್ಲೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ರನ್ನ ಭೇಟಿಯಾಗೋಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಾತುರದಿಂದ ಕಾಯ್ತಿದಾರೆ ಅನ್ಸುತ್ತೆ. ಇದೀಗ ನವೆಂಬರ್‌ ತಿಂಗಳಲ್ಲಿ ಬೈಡನ್‌ ಹಾಗೂ ಜಿನ್‌ಪಿಂಗ್‌ ಅವರು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಭೇಟಿಯಾಗಿ ಪ್ರಮುಖ ಚರ್ಚೆ ನಡೆಸೋ ಬಗ್ಗೆ ಎದುರು ನೋಡ್ತಿದಿವಿ ಅಂತ ವೈಟ್‌ಹೌಸ್‌ ವಕ್ತಾರೆ ಕರೀನ್‌ ಜೀನ್‌ ಪಿಯರಿ ಹೇಳಿದ್ದಾರೆ. ಅಂದ್ಹಾಗೆ ಭಾರತದಲ್ಲಿ ನಡೆದ ಜಿ20 ಶೃಂಗಸಭೆಗೆ ಜಿನ್‌ಪಿಂಗ್‌ ಬರ್ತಾರೆ ಆಗ ನಾನು ಅವರನ್ನ ಮೀಟ್‌ ಮಾಡ್ತೀನಿ ಅಂತ ಬೈಡನ್‌ ಹೇಳಿದ್ರು. ಆದ್ರೆ ಜಿನ್‌ಪಿಂಗ್‌ ಸಭೆಗೆ ಗೈರಾಗಿದ್ರು.

-masthmagaa.com

Contact Us for Advertisement

Leave a Reply